ಕಾರ್ಯಕಾರಿಣಿ ಸಭೆಯಲ್ಲೇ ಬಿಜೆಪಿ ಮುಖಂಡನ ಬಂಧನ!

ಗುಲ್ಬರ್ಗಾದಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕಾರಿಣೆ ಸಭೆ ನಡೆಯುತ್ತಿದ್ದ ವೇಳೆಯೇ ರಾಷ್ಟ್ರೀಯ ಎಸ್ ಸಿ ಯುವ ಮೋರ್ಚಾ ಸದಸ್ಯ ವೆಂಕಟೇಶ್ ಮೌರ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ವೆಂಕಟೇಶ್ ಮೌರ್ಯ ಭಾಗಿಯಾಗಿದ್ದನು. ಅಂದಿನಿಂದ ಪೊಲೀಸರಿಗೆ ತಲೆ ಮರೆಸಿಕೊಂಡು ಓಡಾಡುತ್ತಿದ್ದನು. ಕೆಲವು ಮಾಹಿತಿಯ ಮೂಲಕ ಕಲಬುರಗಿಗೆ ಆಗಮಿಸುತ್ತಾನೆ ಎಂದು ಸ್ಪಷ್ಟಪಡಿಸಿಕೊಂಡ ಪೊಲೀಸರು ಅತ್ಯಾಚಾರ ಆರೋಪದಡಿ ವಶಕ್ಕೆ ಪಡೆದಿದ್ದಾರೆ.
ಈ  ಪ್ರಕರಣಕ್ಕೆ  ಸಂಬಧಿಸಿದಂತೆ ಹಲವಾರು ದಿನಗಳಿಂದ ಬಂಧನ ಭೀತಿ ಎದುರಿಸುತ್ತಿದ್ದ ವೆಂಕಟೇಶ್‌ ತಲೆಮರೆಸಿಕೊಂಡು ತಿರುಗುತ್ತಿದ್ದರು. ಇಂದು ಕಲಬುರಗಿಯಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿ ಸಭೆಗೆ ಆಗಮಿಸಿದ್ದ ವೆಂಕಟೇಶ್ ನನ್ನು ಬೆಂಗಳೂರಿನ ಉಪ್ಪಾರಪೇಟೆ ಪೇಟೆ ಪೂಲೀಸರು ವಶಕ್ಕೆ ಪಡೆದಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ವೆಂಕಟೇಶ್‌ ಬರುತ್ತಾರೆಂದು ನಗರಕ್ಕೆ ಆಗಮಿಸಿದ್ದ ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಇನ್ನೂ ಇವರು ಕೇಂದ್ರ ಸಚಿವ ಸದಾನಂದಗೌಡ ಅವರ ಹಿಂದೆ ಬಂದಿದ್ದ ಎಂದು ಮೂಲಗಳಿಂದ ತಿಳಿದುಬಂದಿದೆ.

One thought on “ಕಾರ್ಯಕಾರಿಣಿ ಸಭೆಯಲ್ಲೇ ಬಿಜೆಪಿ ಮುಖಂಡನ ಬಂಧನ!

Comments are closed.

Social Media Auto Publish Powered By : XYZScripts.com