ಆಸ್ಟ್ರೇಲಿಯನ್ ಓಪನ್ ಟೆನಿಸ್ : ನಾಲ್ಕನೇ ಸುತ್ತಿಗೆ ಆಂಡಿ ಮರ್ರೆ

ವಿಶ್ವದ ನಂಬರ 1 ಆಟಗಾರ ಬ್ರಿಟನ್‌ನ ಆಂಡಿ ಮರ್ರೆ ಹಾಗೂ ಅಗ್ರ ಶ್ರೇಯಾಂಕಿತೆ ಜರ್ಮನಿಯ ಎಂಜಲಿಕ್ ಕೆರ್ಬರ್ ಅವರು ಮೆಲ್ಬೋರ್ನ್ ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.
ಇನ್ನೂ ಶುಕ್ರವಾರ ಮೆಲ್ಬೋರ್ನ್ ಪಾರ್ಕ್ ಅಂಗಳದಲ್ಲಿ ನಡೆದ ಪುರುಷರ ಮೂರನೇ ಸುತ್ತಿನ ಪಂದ್ಯದಲ್ಲಿ ಮರ್ರೆ 6-4, 6-2, 6-4 ಸೆಟ್‌ಗಳಿಂದ ಅಮೆರಿಕದ ಸ್ಯಾಮ್ ಕ್ಯೂರಿ ವಿರುದ್ಧ ಮೂರು ನೇರ ಸೆಟ್‌ಗಳಲ್ಲಿ ಜಯ ದಾಖಲಿಸಿದರು.
ಸುಮಾರು ಎರಡು ಗಂಟೆಗಳು ಕಾಲ ನಡೆದ ಪಂದ್ಯದಲ್ಲಿ ಮರ್ರೆ ಅಬ್ಬರದ ಆಟವನ್ನು ಆಡಿದರು. ಆಕರ್ಷಕ ಸರ್ವ್ ಹಾಗೂ ಗ್ಯಾಪ್ ಶಾಟ್‌ಗಳ ಮೂಲಕ ಗಮನ ಸೆಳೆದ ಮರ್ರೆ ಅವರು ಅಂಗಳದಲ್ಲಿ ಮಿಂಚಿದರು. ಅದರಲ್ಲಿ ಮುಖ್ಯವಾಗಿ 8 ಏಸ್ ಅಂಕ, 5 ಬ್ರೇಕ್ ಅಂಕಗಳನ್ನು ಕಲೆ ಹಾಕಿದ ಮರ್ರೆ ಅರ್ಹ ಜಯ ದಾಖಲಿಸಿದರು.
ಇನ್ನೂ ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಆಗಿರುವ ಮರ್ರೆ ಅವರು ಸೊಗಸಾದ ಆಟವನ್ನು ಆಡಿ, ಮುನ್ನಡೆ ಸಾಧಿಸಿದರು. ಈ ಮೂಲಕ ಬ್ರಿಟನ್ ಆಟಗಾರ ಚೊಚ್ಚಲ ಆಸ್ಟ್ರೇಲಿಯಾ ಕಿರಿಟದ ನಿರೀಕ್ಷೆಯಲ್ಲಿದ್ದಾರೆ.

Comments are closed.

Social Media Auto Publish Powered By : XYZScripts.com