ಆಸ್ತಿಗಾಗಿ ಅಪ್ಪನ ಮರ್ಮಾಂಗಕ್ಕೆ ಇರುವೆ ಬಿಟ್ಟ ಮಗ!

ಆಸ್ತಿ ಆಸೆಯಿಂದ ಮಗ ತಂದೆಗೆ ಚಿತ್ರಹಿಂಸೆ ನೀಡಿ, ಕೊಲ್ಲಲು ಪ್ರಯತ್ನ ಪಟ್ಟ ಘಟನೆ ದಾವಣಗೆರೆ ಜಿಲ್ಲೆಯ ಮಲೇ ಬೆನ್ನೂರು ಗ್ರಾಮದಲ್ಲಿ ನಡೆದಿದೆ. ಮಗನೇ ತಂದೆಯನ್ನು ಕೊಲ್ಲುವ ಉದ್ದೇಶದಿಂದ ಮರ್ಮಾಂಗಕ್ಕೆ ಇರುವೆ ಬಿಟ್ಟಿದ್ದಾನೆ.

ರಾಜಣ್ಣ (57) ಚಿತ್ರಹಿಂಸೆಗೆ ಒಳಗಾಗಿ ಆಸ್ಪತ್ರೆ ದಾಖಲಾಗಿರುವ ವ್ಯಕ್ತಿ. ರಾಜಣ್ಣ  ಸರ್ಕಾರಿ ನೌಕರರಾಗಿದ್ದು ಬಿಎಸ್‍ಎನ್‍ಎಲ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆಸ್ತಿಯ ಆಸೆಗಾಗಿ ಮಗ ನವೀನ್ ಹಾಗೂ ಆತನ ಪತ್ನಿ ಸೌಮ್ಯ ಸೇರಿ ರಾಜಣ್ಣ ಅವರನ್ನು ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡುತ್ತಿದ್ದರು.

ತನ್ನ ಮಗ ಮತ್ತು ಸೊಸೆಯು ನೀಡುತ್ತಿದ್ದ ಕಾಟಕ್ಕೆ ನೊಂದ ರಾಜಣ್ಣ ನವರು ಮನೆಯಿಂದ ತಪ್ಪಿಸಿಕೊಂಡು ಬಂದಿದ್ದು, ದಾವಣಗೆರೆಯ ರಿಂಗ್ ರೋಡ್ ಅಟೋ ನಿಲ್ದಾಣದ ಬಳಿ ನಿತ್ರಾಣ ಗೊಂಡು ಬಿದ್ದಿದ್ದರು. ಈ ವೇಳೆ ಇವರನ್ನು ಕಂಡ ಕರ್ನಾಟಕ ಯುವ ಶಕ್ತಿ ವೇದಿಕೆ ಕಾರ್ಯಕರ್ತರು ಅವರನ್ನು ರಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಮಗ ನವೀನ್ ಕರ್ಣಾಟಕ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದು, ಹಣದ ಆಸೆಗಾಗಿ ನನ್ನನ್ನು ಕೂಡಿ ಹಾಕಿ ಮರ್ಮಾಂಗಕ್ಕೆ ಇರುವೆ ಬಿಟ್ಟು ಚಿತ್ರಹಿಂಸೆ ನೀಡುತ್ತಿದ್ದರು. ಇದರಿಂದ ಬೇಸತ್ತು ಮನೆಯಿಂದ ತಪ್ಪಿಸಿಕೊಂಡು ಬಂದೆ ಎಂದು ರಾಜಣ್ಣ ಆರೋಪಿಸಿದ್ದಾರೆ.

One thought on “ಆಸ್ತಿಗಾಗಿ ಅಪ್ಪನ ಮರ್ಮಾಂಗಕ್ಕೆ ಇರುವೆ ಬಿಟ್ಟ ಮಗ!

  • October 24, 2017 at 3:20 PM
    Permalink

    I ddo not evеn know how I endeⅾ up here, but I thought this post waѕ great.
    I don’t know who you are but certainly you are
    going to ɑ famous bloցgеr if you are not alrеady 😉 Cheers! https://www.pokerqq.org/

Comments are closed.

Social Media Auto Publish Powered By : XYZScripts.com