ಪ್ರತಿಭಟನೆ ವೇಳೆ ಪೊಲೀಸರನ್ನೇ ಹೊಡೆದು ಹಾಕ್ತೀವಿ!

ರಾಜಕಾರಣಿಗಳು ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ತಮ್ಮ ಮತದಾರರ ಪರ ವಕಾಲತ್ತು ವಹಿಸುವುದು ಸಾಮಾನ್ಯ. ಆದರೆ ಮಾಗಡಿ ಶಾಸಕ ಬಾಲಕೃಷ್ಣರವರು ತಮ್ಮ ಪಕ್ಷದ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸದಿದ್ದರೆ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್ ಅಧಿಕಾರಿಗಳಿಗೆ ಹೊಡೆಯುವುದಾಗಿ ಧಮ್ಕಿ ಹಾಕಿದ್ದಾರೆ.

ಕಳೆದ ಭಾನುವಾರದಂದು ಮಾಗಡಿಯ ಅಯ್ಯಂಡಳ್ಳಿ ಗ್ರಾಮದಲ್ಲಿ ದೇವರ ಉತ್ಸವದ ವೇಳೆ ಹೂವಿನ ಹಾರ ಹಾಕುವ ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಬಗ್ಗೆ ಕುದೂರು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ಕೂಡಾ ದಾಖಲಾಗಿತ್ತು. ಆದರೂ ಪೊಲೀಸರು ಆರೋಪಿಗಳನ್ನು ಬಂಧಿಸಿರಲಿಲ್ಲ. ಇದರಿಂದ ತನ್ನ ಕಾರ್ಯಕರ್ತರೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿದ ಶಾಸಕ ಬಾಲಕೃಷ್ಣರವರು ತಮ್ಮ ಕಾರ್ಯಕರ್ತರ ಎದುರೇ ಪೊಲೀಸ್ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಕುದೂರು ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕ ನಂದೀಶ್‍ಗೆ ಎಚ್ಚರಿಕೆ ನೀಡಿದ ಶಾಸಕ ಬಾಲಕೃಷ್ಣ ನಂತರ ಠಾಣೆಯ ಹೊರಗೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿ, ಸೋಮವಾರದೊಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಠಾಣೆಗೆ ನುಗ್ಗಿ ಸರ್ಕಲ್ ಇನ್ಸ್‍ ಪೆಕ್ಟರ್, ಸಬ್ ಇನ್ಸ್ ಪೆಕ್ಟರನ್ನು ಹೊಡೆದು ಹಾಕ್ತೀವಿ ಎಂದು ಬಹಿರಂಗವಾಗಿ ಧಮ್ಕಿ ಹಾಕಿದ್ದಾರೆ.

5 thoughts on “ಪ್ರತಿಭಟನೆ ವೇಳೆ ಪೊಲೀಸರನ್ನೇ ಹೊಡೆದು ಹಾಕ್ತೀವಿ!

 • October 16, 2017 at 4:41 PM
  Permalink

  Just wish to say your article is as astonishing. The clarity in your post is just excellent and i can assume you’re an expert on this subject. Fine with your permission allow me to grab your RSS feed to keep updated with forthcoming post. Thanks a million and please keep up the rewarding work.

 • October 16, 2017 at 4:55 PM
  Permalink

  Excellent read, I just passed this onto a friend who was doing some research on that. And he actually bought me lunch because I found it for him smile So let me rephrase that: Thanks for lunch! “High living and high thinking are poles apart.” by B. J. Gupta.

 • October 24, 2017 at 3:28 PM
  Permalink

  Spot on with this write-up, I truly think this
  web site needs a lot more attention. I’ll probably be
  returning to read more, thanks for the info!

Comments are closed.

Social Media Auto Publish Powered By : XYZScripts.com