ಲಾರಿ-ಬೈಕ್ ಮುಖಾಮುಖಿ ಡಿಕ್ಕಿ 3 ಸಾವು

ಬೆಳಗಾವಿ‌ ಜಿಲ್ಲೆ ಸವದತ್ತಿ ತಾಲೂಕಿನ ಬೂದಿಗೋಪ್ಪ ಗ್ರಾಮದ ಬಳಿ ಲಾರಿ-ಬೈಕ್ ಗೆ ಡಿಕ್ಕಿಯಾಗಿ ಸ್ಥಳದಲ್ಲೆ 3 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಇದ್ದಕ್ಕಿದ್ದಂತೆ ಲಾರಿ ವಾಹನದ ಎಕ್ಸಲ್ ಕಟ್ ಅಗಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇನ್ನೂ ಮೃತ ಬೈಕ್ ಸವಾರರು ಬೈಲಹೊಂಗಲ ತಾಲೂಕಿನ ಲಕ್ಕುಂಡಿಯವರು ಎಂದು ಮಾಹಿತಿ ದೊರೆತಿದೆ.

ಈ ಘಟನೆ ನಡೆದ ಸ್ಥಳಕ್ಕೆ ಮುರಗೋಡ ಠಾಣೆ ಪೋಲಿಸರ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

 

 

 

Comments are closed.

Social Media Auto Publish Powered By : XYZScripts.com