ಕಿಚ್ಚ-ಶಿವಣ್ಣನ ಚಿತ್ರಕ್ಕೆ ಪ್ರೇಮ್, ಮಾಸ್ಟರ್ ಪ್ಲಾನ್ ಏನು ಗೊತ್ತಾ.?!

ಕರುನಾಡ ಚಕ್ರವರ್ತಿ  ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ  ಸುದೀಪ್ ಅಭಿನಯದ ಮಲ್ಟಿಸ್ಟಾರರ್ ಸಿನಿಮಾ ದಿ ವಿಲನ್ ದೊಡ್ಡದಾಗಿ ಸೌಂಡ್ ಮಾಡೋ ಸುಳಿವು ಕೊಟ್ಟಿದೆ. ಸೆಟ್ಟೇರೋಕು ಮೊದ್ಲೆ ಚಿತ್ರದ ಪ್ರಮೋಷನ್ಗೆ ನಿರ್ದೇಶಕ ಪ್ರೇಮ್ ಮಾಡ್ತಿರೋ ಪ್ಲಾನ್ ಏನು ಅಂತ ಗೊತ್ತಾದ್ರೆ ನಿಮಗೆ ಆಶ್ಚರ್ಯವಾಗುತ್ತೆ. ಅಷ್ಟಕ್ಕೂ ಆ ಐಡಿಯಾ ಏನ್ ಗೊತ್ತಾ…?

ಜನವರಿ 21ಕ್ಕೆ ದಿ ವಿಲನ್ ಸಿನಿಮಾ ಟೀಸರ್ ಶೂಟಿಂಗ್ಗೆ ಪ್ಲಾನ್ ಮಾಡಿದೆ ಚಿತ್ರತಂಡ. ವಿಶೇಷ ಅಂದ್ರೆ ಅಭಿಮಾನಿಗಳು ಕುಳಿತಲ್ಲಿಯೇ ಈ ಟೀಸರ್ ಮೇಕಿಂಗ್ ಅನ್ನ ಕಣ್ತುಂಬಿಕೊಳ್ಳಬಹುದು. ಅದು ಹೇಗೆ ಅಂದ್ರಾ.? ಫೇಸ್ಬುಕ್ ಲೈವ್ನಲ್ಲಿ ದಿ ವಿಲನ್ ಸಿನಿಮಾ ಟೀಸರ್ ಮೇಕಿಂಗ್ ಅನ್ನ ನೋಡೊ ವ್ಯವಸ್ಥೆ ಮಾಡಲಾಗ್ತಿದೆಯಂತೆ. ಇದು ಸ್ಯಾಂಡಲ್ವುಡ್ ಮಟ್ಟಿಗೆ ಮೊದಲ ಪ್ರಯತ್ನ ಅನ್ಬೋದು. ಪ್ರೇಮ್ ಸಿನಿಮಾ ಅಂದ್ಮೇಲೆ ಇಂತದ್ದು ಏನಾದ್ರೂ ಸ್ಪೆಷಲ್ ಇರಲೇಬೇಕಲ್ವಾ..? ಇತ್ತೀಚೆಗೆ ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರೋ ಪ್ರೇಮ್ ಜನವರಿ 21ಕ್ಕೆ ದಿ ವಿಲನ್ ಟೀಸರ್ ಶೂಟಿಂಗ್ ಸ್ಟಾಟರ್್ ಮಾಡೋದಾಗಿ ಹೇಳಿದ್ದಾರೆ.

`ಕಲಿ’ ಸಿನಿಮಾ ಡ್ರಾಪ್ ಆದ್ಮೇಲೆ ಪ್ರೇಮ್, ಶಿವಣ್ಣ ಮತ್ತು ಸುದೀಪ್ ಕಾಂಬಿನೇಷನ್ನಲ್ಲಿ `ದಿ ವಿಲನ್’ ಸಿನಿಮಾ ಅನೌನ್ಸ್ ಮಾಡಿದ್ದರು. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಆಗಿರಲಿದ್ದು, ಹ್ಯಾಟ್ರಿಕ್ ಹೀರೋ ಮತ್ತು ಅಭಿನಯ ಚಕ್ರವರ್ತಿ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಅನ್ನೋದನ್ನ ಕಾದು ನೋಡ್ಬೇಕು. ಮುಂದಿನ ತಿಂಗಳ ದಿ ವಿಲನ್ ಚಿತ್ರದ ಶೂಟಿಂಗ್ ಕೂಡ ಸ್ಟಾರ್ಟ್ ಆಗಲಿದೆ.

Comments are closed.

Social Media Auto Publish Powered By : XYZScripts.com