ಮದುವೆ ಆರ್ಡರಿದೆ ಅಂದು ಏನು ಮಾಡಿದ್ರು ಗೊತ್ತಾ..?

ಪ್ರಪಂಚದಲ್ಲಿ ಎಂತಿಂತಹ ಕಳ್ಳರನ್ನು ನೀವು ನೋಡಿದ್ದೀರಿ ಆದರೆ ಇಲ್ಲಿ ಇಬ್ಬರು ವಿಚಿತ್ರ ಕಳ್ಳರು ಇದ್ಧಾರೆ ಆಗಾದರೆ ಆ ಕಳ್ಳರು ಯಾರು ಅವರ ಕಳ್ಳತನ ಹೇಗಿತ್ತು ಅಂತೀರಾ..? ಈ ಸ್ಟೋರಿ ನೋಡಿ

ಹಾವೇರಿ ಜಿಲ್ಲೆ ಮತ್ತು ಅಕ್ಕಿಆಲೂರಿನ ಸ್ಟೂಡಿಯೊದವರನ್ನು ಮದುವೆ ಆರ್ಡರಿದೆ ಎಂದು ಕರೆದುಕೊಂಡು ಹೋಗಿ ಹ್ಯಾಮಾರಿಸಿ ಲಕ್ಷ ಬೆಲೆಬಾಳುವ ಕ್ಯಾಮಾರಗಳನ್ನು ದೋಚಿ ಪರಾರಿಯಾಗಿ ಕೊನೆಗೂ ಶಿಗ್ಗಾವಿ ಪೋಲಿಸರ ಮಿಂಚಿನ ಕಾರ್ಯಾಚರಣೆಯಿಂದ ಕಳ್ಳ ಖದೀಮರು ಸಿಕ್ಕಿ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಈ ಘಟನಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿ ನಮ್ಮ ಮನೆಯಲ್ಲಿ ಮದುವೆಯ ಆರ್ಡರ್ ಇದೆ ಅಂತಾ ಹೇಳಿ ಸ್ಟೂಡಿಯೊದವರನ್ನು ಕರೆದುಕೊಂಡು ಹೋಗುವಾಗ ರಸ್ತೆ ಮಧ್ಯದಲ್ಲಿ ಇದ್ದಕ್ಕಿದ್ದಂಗೆ ಸ್ಟುಡಿಯೋ ವ್ಯಕ್ತಿಯ ಬಳಿ ಇರುವ ಕ್ಯಾಮರವನ್ನು ಇಬ್ಬರು ವ್ಯಕ್ತಿಗಳು ಕಸದಿದುಕೊಂಡು ಪರಾರಿಯಾಗುತ್ತಿದ್ದರು. ಅದೇ ವೇಳೆಯಲ್ಲಿ ಗಾಬರಿಗೊಂಡ ಸ್ಟುಡಿಯೋ ಮಾಲೀಕ ಶಿಗ್ಗಾವಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ.

ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಚಾಣಾಕ್ಷತನದಿಂದ ಕಳ್ಳರ ಬಲೆ ಬೀಸಿದ ಪೊಲೀಸರು ತಮ್ಮ ಮಿಂಚಿನ ಕಾರ್ಯಾಚರಣೆಯಿಂದ ಕ್ಯಾಮಾರ ಜೊತೆಗೆ ಕಳ್ಳರು ಕೂಡ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

Comments are closed.

Social Media Auto Publish Powered By : XYZScripts.com