ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿ: ಬೆಂಗಳೂರು ಫುಟ್ಬಾಲ್ ತಂಡ

ಹಾಲಿ ಐ-ಲೀಗ್ ಚಾಂಪಿಯನ್ ಬೆಂಗಳೂರು ಫುಟ್ಬಾಲ್ ತಂಡ ಪ್ರಸಕ್ತ ಟೂರ್ನಿಯಲ್ಲಿ ಬುಧವಾರ ಮುಂಬೈ ತಂಡದ ಸವಾಲು ಎದುರಿಸಲಿದ್ದು, ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಬೆಂಗಳೂರು ತಂಡ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ. ತವರಿನಲ್ಲಿ ಆಡಿದ ಮೊದಲೆರಡೂ ಪಂದ್ಯಗಳನ್ನು ಗೆದ್ದ ಬಿಎಫ್‌ಸಿ, ಸತತ ಮೂರನೇ ಗೆಲುವಿನ ಯೋಜನೆ ರೂಪಿಸಿಕೊಂಡಿದೆ. ಮುಂಬೈ ತಂಡ ಬೆಂಗಳೂರು ತಂಡದ ಯೋಜನೆಯನ್ನು ಛಿದ್ರ ಮಾಡುವ ಆಶಯ ಹೊಂದಿದೆ.
ಯುವ ಹಾಗೂ ಅನುಭವಿ ಆಟಗಾರರನ್ನು ಹೊಂದಿರುವ ಬೆಂಗಳೂರು ತಂಡ ಕಳೆದ ವರ್ಷ ಎಎಫ್‌ಸಿ ಕಪ್ ಟೂರ್ನಿಯ ಫೈನಲ್‌ಗೆ ಅರ್ಹತೆಯನ್ನು ಪಡೆದು ಇತಿಹಾಸ ನಿರ್ಮಿಸಿತ್ತು. ಆಡಿದ ಎರಡೂ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ಬೆಂಗಳೂರು ತಂಡ, ಮತ್ತೊಂದು ಐ-ಲೀಗ್ ಪ್ರಶಸ್ತಿ ಎತ್ತುವ ಕನಸಿನಲ್ಲಿದೆ.
ಸುನೀಲ್ ಛೆಟ್ರಿ ಮುಂದಾಳತ್ವದ ತಂಡದಲ್ಲಿ, ಯುವ ಆಟಗಾರ ಉದಾಂತ್ ಸಿಂಗ್ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಇನ್ನು ರಕ್ಷಣಾ ವಿಭಾಗ ಪ್ರಬಲವಾಗಿದ್ದು, ಎದುರಾಳಿಗಳಿಗೆ ಕಾಡಬಲ್ಲದು. ಮುನ್ನಡೆ ಆಟಗಾರರು ಎಚ್ಚರಿಕೆಯ ಆಟವನ್ನು ಆಡಿದರೆ ಗೆಲುವಿ ಆಸೆ ನಿಶ್ಚಿತ. ಉತ್ತಮ ಯೋಜನಾ ಬದ್ಧ ತಂಡವನ್ನು ಕಣಕ್ಕೆ ಇಳಿಸುವುದು ನಮ್ಮ ಕನಸು. ಈ ಬಾರಿ ಬಲಾಢ್ಯ ತಂಡವನ್ನು ಕಣಕ್ಕೆ ಇಳಿಸಲಿದ್ದೇವೆ ಎಂದು ಬೆಂಗಳೂರು ತಂಡದ ಕೋಚ್ ರಾಬರ್ಟ್ ತಿಳಿಸಿದ್ದಾರೆ.
ಬೆಂಗಳೂರು ತಂಡ ತವರಿನಲ್ಲಿ ಸಂಪೂರ್ಣ ಅಂಕ ಕಲೆ ಹಾಕುವ ಆಶಯ ಹೊಂದಿದೆ. ಈ ವಾರಾಂತ್ಯದಲ್ಲಿ ಬಿಎಫ್‌ಸಿಗೆ ಕಿಂಗ್‌ಫಿಶರ್ ಈಸ್ಟ್ ಬೆಂಗಾಲ್ ತಂಡ ಸವಾಲು ಒಡ್ಡಲಿದೆ. ಮುಂಬೈ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದೆ. ತವರು ಹಾಗೂ ಎದುರಾಳಿ ನೆಲದಲ್ಲಿ ಪಂದ್ಯ ಗೆದ್ದ ಮುಂಬೈ ಬೆಂಗಳೂರು ತಂಡಕ್ಕೆ ಸಮರ್ಥವಾಗಿ ನಿಭಾಯಿಸಬಲ್ಲರು.
ಸ್ಥಳ: ಕಂಠೀರವ ಮೈದಾನ ಸಮಯ: ಸಂಜೆ 7 ಕ್ಕೆ

Comments are closed.

Social Media Auto Publish Powered By : XYZScripts.com