ಕಾರಿನಲ್ಲಿ ಹೆಬ್ಬಾವು ಈ ವಿಡಿಯೋ ನೋಡಿ..!

ಮನೆಯ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಹೆಬ್ಬಾವು ಸೇರಿಕೊಂಡಿದ್ದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಕಂಡು ಬಂದಿದೆ.

ಇನ್ನೂ ಬೆಳವಾಡಿ ಗ್ರಾಮದ ಸಮೀಪವಿರುವ ಕೌಶಿಕ್ ಎಂಬುವರಿಗೆ ಸೇರಿದ ಫಾರಂ ಹೌಸ್ ನಲ್ಲಿ‌ ಈ ಘಟನೆ ನಡೆದಿದ್ದು, ನಿನ್ನೆ ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ‌ ಇಂಜಿನ್ ಭಾಗದಲ್ಲಿ ಹೆಬ್ಬಾವು ಸೇರಿಕೊಂಡಿತ್ತು ಎನ್ನಲಾಗಿದೆ.

ಮುಂಜಾನೆ ಕಾರ್ ತೆಗೆಯುವ ಸಂಧರ್ಭದಲ್ಲಿ ಕಾರ್ ಸ್ಟಾರ್ಟ್ ಆಗದ ಕಾರಣ ಇಂಜಿನ್ ಬ್ಯಾನೆಟ್ ತೆಗೆದು ಪರಿಶೀಲನೆ ಮಾಡುವ ವೇಳೆ ಕಾರಿನಲ್ಲಿ ಹಾವು ಸೇರಿಕೊಂಡಿದ್ದು ಕಂಡು ಬಂದಿದೆ.

ತಕ್ಷಣವೇ ಮೈಸೂರಿನ ಉರುಗ ಪ್ರೇಮಿ ಶಮೀರ್ ಗೆ ಕರೆ ಮಾಡಿ ಕಾರಿನ ಇಂಜಿನ್ ನಲ್ಲಿ ಸೇರಿಕೊಂಡಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿಸಿ ಕಾಡಿಗೆ ಬಿಡಲಾಯಿತು ಎಂದು ತಿಳಿದುಬಂದಿದೆ.

ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಮನೆಯ ಫಾರಂ ಹೌಸ್ ಖಾಲಿ ಜಾಗವಿದೆ. ಬಹುತೇಕ ಈ ಹೆಬ್ಬಾವು ಅಲ್ಲಿಂದ ಬಂದು ಕಾರಿನ‌ ಇಂಜಿನ್ ಒಳಗೆ ಸೇರಿಕೊಂಡಿರಬಹುದು ಎಂದು ಸ್ಥಳಿಯರು ಮಾತನಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

Comments are closed.