ಅಂಜನಾದ್ರಿಯ ಆಂಜನೇಯ ದೇವಾಲಯದಲ್ಲಿ ಶುರುವಾಯ್ತು ಮುಸುಕಿನ ಗುದ್ದಾಟ!

ಪ್ರತಿದಿನ ದೇಶ ವಿದೇಶಗಳಿಂದ ನೂರಾರು ಭಕ್ತರು ಆಗಮಿಸುವ ಆಂಜನೇಯ ದೇವಾಲಯದಲ್ಲಿ ಅರ್ಚಕರ ನಡುವೆ ಗಲಾಟೆ ಶುರುವಾಗಿದೆ. ಗಲಾಟೆ ಕೋರ್ಟ್ ಮೆಟ್ಟಿಲೇರಿದ್ದರೂ ಇದೀಗ ಆಡಳಿತ ಮಂಡಳಿ ಮತ್ತು ಅರ್ಚಕರ ನಡುವಿನ ಮುಸುಕಿನ ಗುದ್ದಾಟ ಶುರುವಾಗಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆಂಜನಾದ್ರೀ ಬೆಟ್ಟದ ಆಂಜನೇಯ ದೇವಾಲಯದಲ್ಲಿ ಆಡಳಿತ ಮಂಡಳಿ ಮತ್ತು ಅರ್ಚಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದರಿಂದ ದೇಶ ವಿದೇಶಿಯರಿಗೆ ಉತ್ತಮ ಸ್ಥಳವಾಗಿದ್ದ ಈ ಸ್ಥಳದಲ್ಲಿ ಆಡಳಿತ ಮಂಡಳಿ ಮತ್ತು ಅರ್ಚಕರ ವಿವಾದ ಭಕ್ತರ ಮೇಲೆ ಪರಿಣಾಮ ಬೀರುತ್ತಿದೆ.

ಈ ಆಂಜನೇಯ ದೇವಾಲಯಕ್ಕೆ 2008ರಲ್ಲಿ ತುಳಸಿದಾಸ ಎನ್ನುವರು ಪೂಜೆ ಮಾಡುತ್ತಿದ್ದರು. ಇವರ ಮೇಲೆ ಹಲವು ವಿವಾದಗಳು  ಬಂದ ಕಾರಣ ಅಂಜನಾದ್ರಿ ಟ್ರಸ್ಟ್ ನವರು ತುಳಸಿದಾಸರನ್ನು ಅರ್ಚಕ ಹುದ್ದೆಯಿಂದ ಕೆಳಗಿಳಿಸಿ ಪಂಪಾಸರೋವರದಲ್ಲಿದ್ದ  ಮಹಾಂತ ವಿದ್ಯಾದಾಸ ಬಾಬಾ ಎನ್ನುವವರನ್ನು ಅರ್ಚಕ ಹುದ್ದೆಗೆ ನೇಮಿಸಿದರು.

ಇದನ್ನು ಪ್ರಶ್ನಿಸಿ ತುಳಸಿದಾಸ ಗಂಗಾವತಿ ಕಿರಿಯ  ಶ್ರೇಣಿ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಟ್ರಸ್ಟ್ ಹಾಗೂ ತುಳಸಿದಾಸರ ವಾದ ಆಲಿಸಿದ ನ್ಯಾಯಾಲಯ ತುಳಸಿದಾಸ ಪರವಾಗಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ  ವಿದ್ಯಾದಾಸ ಬಾಬಾ  ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ಮೊರೆ ಹೋದರು. ಅಲ್ಲಿ ವಿದ್ಯಾದಾಸ್ ಬಾಬಾರೆ  ಪೂಜೆ ಹಾಗೂ ಧಾರ್ಮಿಕ ಆಚರಣೆಗಳ ಪ್ರಸ್ತುತ ಸ್ಥಿತಿಯನ್ನೆ ಮುಂದುವರಿಸಿಕೊಂಡು ಹೋಗುವಂತೆ ಕೋರ್ಟ್ ತೀರ್ಪು ನೀಡಿತು.  ಹಿರಿಯ ಶ್ರೇಣಿ ನ್ಯಾಯಾಲಯದ ತೀರ್ಪನ್ನು ತುಳಸಿದಾಸ ಧಾರವಾಡ ಹೈಕೋರ್ಟ್ ಪೀಠದಲ್ಲಿ ಪ್ರಶ್ನಿಸಿ ದಾವೆ ಹೂಡಿದ್ದಾರೆ ಆದರೆ ಸದ್ಯ ಇದರ ವಿಚಾರಣೆ ನಡೆಯುತ್ತಿದೆ. ಆದರೆ ಗುಡಿಯಲ್ಲಿ ಪೂಜೆ ಮಾಡಬೇಕಾದ ಅರ್ಚಕರು ಪೂಜೆ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

Comments are closed.

Social Media Auto Publish Powered By : XYZScripts.com