ಭರವಸೆ ಈಡೇರಿಸುವಲ್ಲಿ ಮೋದಿ ವಿಫಲ: ಮಾಣಿಕ್ ಸರ್ಕಾರ್

ಮೋದಿ ಅಧಿಕಾರಕ್ಕೆ ಬಂದು ಮೂರು ವರ್ಷದಲ್ಲಿ ಕೇವಲ ಒಂದು ಲಕ್ಷ ಉದ್ಯೋಗ ಮಾತ್ರ ಸೃಷ್ಠಿಯಾಗಿದೆ ಆದರೆ ಉದ್ಯೋಗ ಸೃಷ್ಠಿಯಲ್ಲಿ  ಮೋದಿ ವಿಫಲವಾಗಿದ್ದಾರೆ ಎಂದು ತ್ರಿಪುರಾ ಸಿಎಂ ಮಾಣಿಕ್ ಸರ್ಕಾರ್ ಹೇಳಿದ್ದಾರೆ.

ಇನ್ನೂ ಕೊಪ್ಪಳದ ಗಂಗಾವತಿಯಲ್ಲಿ ನಡೆಯುತ್ತಿರುವ  ಸಿಪಿಐ (ಎಂ) ಸಮಾವೇಶದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತ್ರಿಪುರ  ಸಿಎಂ ಮಾಣಿಕ್ ಸರ್ಕಾರ್ ಮೋದಿ ಅಧಿಕಾರಕ್ಕೆ ಬಂದು ಮೂರು ವರ್ಷದಲ್ಲಿ ಕೇವಲ ಒಂದು ಲಕ್ಷ ಉದ್ಯೋಗ ಮಾತ್ರ ಸೃಷ್ಠಿಯಾಗಿದೆ ಇನ್ನೂ ಉದ್ಯೋಗ ಸೃಷ್ಠಿಯಲ್ಲಿ  ಮೋದಿ ವಿಫಲವಾಗಿದ್ದಾರೆ  ಎಂದು ಹೇಳಿದ್ದಾರೆ.

ಇನ್ನೂ ದೇಶದಲ್ಲಿ ಈಗ ಪರಿಸ್ಥಿತಿ ಸರಿಯಾಗಿಲ್ಲ ಜನರಿಗೆ ಯಾವುದೇ ರೀತಿಯಿಂದ  ಅನುಕೂಲಕರವಾಗಿಲ್ಲ. 2014 ರ ಚುನಾವಣೆಯಲ್ಲಿ ಮೋದಿ ಜನರಿಗೆ ಅಚ್ಛೆ ದಿನ್ ಬರುತ್ತವೆ ಎಂದು ಭರವಸೆ ನೀಡಿದ್ದರು. ಆದರೆ ಇಂದು ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ಏರಿವೆ ಬೆಲೆ ಏರಿಕೆಯನ್ನು ತಡೆಗಟ್ಟಲು ಮೋದಿ ಸರ್ಕಾರ ಮುಂದಾಗುತ್ತಿಲ್ಲ ಎಂದು ಸರ್ಕಾರದ ವಿರುದ್ದ ವಾಗ್ಧಾಳಿ ನಡೆಸಿದರು.

ದೇಶದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿವೆ  ರೈತರ ಆತ್ಮಹತ್ಯೆ ತಡೆಯುವಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇನ್ನೂ ಕಪ್ಪು ಹಣ ವಾಪಾಸ್ ತಂದು ಪ್ರತಿಯೊಬ್ಬರ ಅಕೌಂಟ್ ಗೆ ಹಾಕುತ್ತೇವೆ ಎಂದು ಭರವಸೆ ನೀಡಿದ್ದರು‌. ಆದರೆ ಬಡವರ ಸಾಲಕ್ಕೆ ಬ್ಯಾಂಕುಗಳು ಅವರ ಆಸ್ತಿಗಳನ್ನು ಜಪ್ತಿ ಮಾಡುವಲ್ಲಿ ಮುಂದಾಗುತ್ತಿವೆ ಎಂದು ಹೇಳಿದ್ದಾರೆ.

ಇನ್ನೂ ಕಾರ್ಮಿಕರ, ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಹೊಡೆತ ನೀಡುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಏನೂ ವ್ಯತ್ಯಾಸವಿಲ್ಲ ಎಂದು ತ್ರಿಪುರಾ ಸಿಎಂ ಮಾಣಿಕ್ ಸರ್ಕಾರ್ ಹೇಳಿದ್ದಾರೆ.

 

 

One thought on “ಭರವಸೆ ಈಡೇರಿಸುವಲ್ಲಿ ಮೋದಿ ವಿಫಲ: ಮಾಣಿಕ್ ಸರ್ಕಾರ್

  • October 18, 2017 at 2:08 PM
    Permalink

    quality cheap meds pills cialis
    buy cialis
    cheap cialis online pharmacy prescription

Comments are closed.

Social Media Auto Publish Powered By : XYZScripts.com