ಮಂತ್ರಿಮಾಲ್ ಬಂದ್ ಮಾಡಿದ್ದೇಕೆ ಗೊತ್ತಾ..?

ಬೆಂಗಳೂರಿನ ಸುಪ್ರಸಿದ್ದ ಮಂತ್ರಿ ಮಾಲ್ ನ ಗೋಡೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಲ್ಡಿಂಗ್ ವರದಿ ತರಿಸಿಕೊಂಡು ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ ಜೆ ಜಾರ್ಜ್ ಹೇಳಿದ್ದಾರೆ.
ಇನ್ನೂ ಈ ವಿಷಯಕ್ಕೆ ಸಂಬಂಧಿಸಿದಂತೆ 15 ವರ್ಷದ ಹಿಂದೆ ಕಟ್ಟಿರುವ ಕಟ್ಟಡ ಇದಾಗಿದ್ದು, ಈಗಾಗಲೇ ಅಕ್ಕ ಪಕ್ಕದ ಗೋಡೆಗಳು ಬಿರುಕುಗೊಂಡಿವೆ ಮಂತ್ರಿ ಮಾಲ್ ಕ್ಲೋಸ್ ಮಾಡುವುದೇ ಉತ್ತಮ ಇನ್ನೂ ಈ ವಿಚಾರ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ನಗರದ ಎಲ್ಲಾ ಬೃಹತ್ ಕಟ್ಟಡಗಳ ಬಗ್ಗೆ ಮಾಹಿತಿ ಕೇಳಿದ್ದೇನೆ ಜೊತೆಗೆ ಮೇಯರ್ ಹಾಗೂ ಬಿಬಿಎಂಪಿ ಆಯುಕ್ತರಿಗೆ ಸ್ಥಳಕ್ಕೆ ಹೋಗುವಂತೆ ಸೂಚನೆ ನೀಡಿದ್ದೇನೆ ಎಂದು ಜಾರ್ಜ್ ಹೇಳಿದ್ದಾರೆ,

 
ಇನ್ನೂ ಈ ಘಟನೆಯ ಬಗ್ಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್  ಮಂತ್ರಿಮಾಲ್ ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಇವತ್ತಿನ ಅವಘಡಕ್ಕೆ ಕಾರಣ ಏನು ಎಂಬುದನ್ನು ತಿಳಿದುಕೊಳ್ಳುತ್ತೇವೆ. ಮಂತ್ರಿಮಾಲ್ ಯಾವುದೇ ರೀತಿಯಲ್ಲಿ ಕಾನೂನು ಉಲ್ಲಂಘಿಸಿದ್ದು ಕಂಡು ಬಂದರೆ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ ಸದ್ಯ ಈ ಕ್ಷಣದಿಂದ ಮಂತ್ರಿ ಮಾಲ್ ಬಂದ್ ಮಾಡಲಾಗುವುದು  ಎಂದು ಹೇಳಿದ್ದಾರೆ.
ಈ ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದೆ. ಹೌಸ್ ಕೀಪಿಂಗ್ ಕೆಲಸದಾಕೆ ಲಕ್ಷ್ಮಮ್ಮ (45) ತೀವ್ರ ಗಾಯಗೊಂಡಿದ್ದು, ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ಇವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದ ಕಾರಣ ಮಂತ್ರಿಮಾಲ್ ಅನ್ನು ಬಂದ್ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

2 thoughts on “ಮಂತ್ರಿಮಾಲ್ ಬಂದ್ ಮಾಡಿದ್ದೇಕೆ ಗೊತ್ತಾ..?

  • October 20, 2017 at 7:37 PM
    Permalink

    An intriguing discussion is worth comment. I do think that you ought to write more on this subject matter, it may not be a taboo matter but generally folks don’t speak about such topics.
    To the next! Cheers!!

Comments are closed.

Social Media Auto Publish Powered By : XYZScripts.com