ನೂತನ ಆಭರಣ ಟ್ರೆಂಡ್ ನಿಮಗೆ ಗೊತ್ತಾ!

ಹೆಣ್ಣುಮಕ್ಕಳಿಗೆ ಆಭರಣ ಅಂದ್ರೆ ಅಚ್ಚುಮೆಚ್ಚು. ಆಭರಣಗಳನ್ನು ಇಷ್ಟಪಡದ ಹೆಣ್ಣೇ ಇಲ್ಲ ಎನ್ನಬಹುದೇನೋ? ಯಾವ ಬಗೆಯ ಆಭರಣ ಹೊಸದಾಗಿ ಬಂದಿದೆ? ಯಾವುದು ಯಾವ ಡ್ರೆಸ್ಗೆ ಮ್ಯಾಚ್ ಆಗುತ್ತೆ ಎನ್ನುವ ಲೆಕ್ಕಾಚಾರದಲ್ಲೆಲ್ಲಾ ಅವರು ಯಾವಾಗಲೂ ಪಕ್ಕಾ ಇರ್ತರೆ. ಈಗ ಫ್ಯಾಷನ್ ಜಗತ್ತಿನಲ್ಲಿ ಭಾರೀ ಸದ್ದು ಮಾಡ್ತರೋ ಆಕ್ಸಿಡೈಸ್ಡ್ ಆಭರಣಗಳು.


ನೋಡೋಕೆ ಬೆಳ್ಳಿಯ ಆಭರಣಗಳಂತೆ ಇರುವ ಇವು ಆಂಟಿಕ್ ಶೈಲಿಯಲ್ಲಿ ಹೆಚ್ಚು ಬಳಕೆಯಲ್ಲಿವೆ. ಮೊದಲೆಲ್ಲಾ ಬೆಳ್ಳಿಗೇ ಈ ಬಗೆಯ ಫಿನಿಶಿಂಗ್ ಕೊಟ್ಟು ಆಕ್ಸಿಡೈಜ್ಡ್ ಆಭರಣಗಳನ್ನು ತಯಾರಿಸುತ್ತಿದ್ರಂತೆ. ಆದ್ರೆ ಈಗ ಲೋಹಕ್ಕೆ ಆಕ್ಸಿಡೈಜ್ಡ್ ಲುಕ್ ಇದ್ದುಬಿಟ್ರೆ ಸಾಕು, ಆಭರಣಗಳ ಕಡೆ ಹೆಣ್ಣುಮಕ್ಕಳ ಗಮನ ತಾನಾಗೇ ಬೀಳುತ್ತದೆ.
ಅಂದ್ಹಾಗೆ ಇವೇನೂ ಹೊಸದಾಗಿ ಕಂಡುಹಿಡಿದ ಆಭರಣ ಶೈಲಿಯಲ್ಲ. ಎಲ್ಲಾ ಫ್ಯಾಷನ್ ಮತ್ತೆ ರಿಪೀಟ್ ಆಗುವಂತೆ ಆಕ್ಸಿಡೈಜ್ಡ್ ಆಭರಣಗಳ ಟ್ರೆಂಡ್ ಈಗ ಮತ್ತೆ ಹೆಚ್ಚಾಗಿದೆ. ಸಾಂಪ್ರಾದಾಯಿಕ ಉಡುಗೆಗಳಾದ ಸ್ಕರ್ಟ್, ಸೀರೆ, ಸಲ್ವಾರ್ ಇರಲಿ ಅಥವಾ ಆಧುನಿಕ ಶೈಲಿಯ ಜೀನ್ಸ್-ಟಾಪ್, ಶರ್ಟ್ರ್ ಗಳೇ ಇರಲಿ ಎಲ್ಲದಕ್ಕೂ ಹೊಂದುವ ಆಕ್ಸಿಡೈಜ್ಡ್ ಆಭರಣಗಳು ಮಾರುಕಟ್ಟೆಯಲ್ಲಿ ಲಭ್ಯ. ಕೇವಲ ಒಂದೆರಡು ಮನಿಗಳಿರುವ ಪುಟ್ಟ ಮೂಗುತಿಯಿಂದ ಹಿಡಿದು ಭಾರೀ ತೂಕವಿರುವ ದೊಡ್ಡ ಹಾರದವರಗೆ ಎಲ್ಲಾ ಆಕಾರ, ರೂಪಗಳಲ್ಲೂ ಮನಸೆಳೆಯುತ್ತವೆ ಈ ಆಭರಣಗಳು.


ಹೊಳೆಯುವ ಬೆಳ್ಳಿಗೆ ಒಂಚೂರು ಕಪ್ಪು ಸೇರಿಸಿ ಮಾಡಿದಂತೆ ಕಾಣುವ ಇವುಗಳು ಪಕ್ಕಾ ದೇಸೀ ಲುಕ್ ಗೂ ಸೈ, ಅಲ್ಟ್ರಾ ಮಾರ್ಡನ್ ಲುಕ್ಗೂ ಜೈ ಎನ್ನುವಂತಿವೆ. ಹಾಗಾಗಿ ಕಾಲೇಜು ಕನ್ಯೆಯರಿಂದ ಹಿಡಿದು ಪ್ರೌಢ ಹೆಣ್ಣಿನವರಗೆ ಎಲ್ಲರ ಮನಗೆದ್ದಿವೆ. ಕಿವಿಯೋಲೆ, ಸರ, ಮೂಗುತಿ, ಮಾಟಿ, ಬಳೆ, ಡಾಬು, ಬೈತಲೆ ಬೊಟ್ಟು, ವಂಕಿ ಹೀಗೆ ಎಲ್ಲಾ ವಿಧದ ಆಭರಣಗಳಲ್ಲೂ ಆಕ್ಸಿಡೈಜ್ಡ್ ನದ್ದೇ ಹವಾ. ರಸ್ತೆ ಬದಿಯ ವ್ಯಾಪಾರಿಗಳ ಬಳಿ ನೂರಿನ್ನೂರು ರೂಪಾಯಿಗೆಲ್ಲಾ ಸಿಗುವ ಇವು ಶೋರೂಂಗಳಲ್ಲಿ ಸಾವಿರಾರು ರೂಪಾಯಿಗೂ ಲಭ್ಯ.
ಬಣ್ಣದ ಮಣಿಗಳನ್ನು ಸೇರಿಸಿ ಆಕ್ಸಿಡೈಜ್ಡ್ ಆಭರಣಗಳ ಅಂದಕ್ಕೆ ಮತ್ತಷ್ಟು ಮೆರುಗು ತರಿಸಿರುವ ಶೈಲಿಗಳೂ ಸಾಕಷ್ಟಿವೆ. ಹುಡುಗಿಯರು ಇವುಗಳನ್ನು ಇಷ್ಟಪಡುತ್ತಿರುವ ವೇಗ ನೋಡಿದ್ರೆ ಈ ಟ್ರೆಂಡ್ ಇನ್ನೂ ಸಾಕಷ್ಟು ಸಮಯ ಮುಂದುವರೆಯುವಂತೆ ಕಾಣ್ತಿದೆ.

Comments are closed.