ಬಿಗ್ ಬಾಸ್ ಸೀಸನ್ 4 ನ ವಿನ್ನರ್ ಯಾರು ಗೊತ್ತಾ?

ಬಿಗ್ ಬಾಸ್ ಸೀಸನ್ 4 ನ ವಿನ್ನರ್ ಯಾರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ನೂರಾರು ಬಿಗ್ ಬಾಸ್ ಪ್ರಿಯರು ಕಾಮೆಂಟ್ ಗಳನ್ನು ಮಾಡುತ್ತಿದ್ದು ಎಲ್ಲರೂ ಪ್ರಥಮ್ ಮೇಲೆಯೇ ಕಣ್ಣಿಟ್ಟಿದ್ದಾರೆ.

ಬಿಗ್ ಬಾಸ್ ಸೀಸನ್ 4 ನ ವಿನ್ನರ್ ಯಾರು ಎಂಬ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದು ಸಾರ್ವಜನಿಕರಿಂದ ಹೇಳಿಕೆಗಳನ್ನು ಪಡೆದುಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿದೆ. ಈ ವಿಡಿಯೋದಲ್ಲಿ ಹಲವಾರು ಮಂದಿ ಬಿಗ್ ಬಾಸ್ ಪ್ರಿಯರು ಪ್ರತಿಕ್ರಿಯಿಸಿದ್ದು, ಹಿಂದಿನ ಬಾರಿ ಶೃತಿ ಗೆಲ್ಲುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಶೃತಿ ಗೆದ್ದರು. ಇದೆಲ್ಲಾ ಮೊದಲೇ ಫಿಕ್ಸ್ ಆಗಿರುತ್ತದೆ ಎಂದು ಸಾರ್ವಜನಿಕರಲ್ಲಿ ಹಬ್ಬಿದೆ. ಈ ಬಾರಿ ಮಾಳವಿಕಾ ಗೆಲ್ಲುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮಾಳವಿಕಾ ಗೆಲ್ಲಲು ಯೋಗ್ಯವಾದ ವ್ಯಕ್ತಿ ಅಲ್ಲ. ಈ ಬಾರಿ ಬಿಗ್ ಬಾಸ್ ನಲ್ಲಿ ಮಾಳವಿಕ ವಿನ್ ಆದರೆ ನಾವು ಮುಂದಿನ ದಿನಗಳಲ್ಲಿ ಬಿಗ್ ಬಾಸ್ ನೋಡುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದ ಕಾಮೆಂಟ್ ಗಳು ಮತ್ತು ವಿಡಿಯೋಗಳಲ್ಲಿ ಪ್ರತಿಕ್ರಿಯೆ ನೀಡಿರುವ ಮಾಹಿತಿಯನ್ನು ಪಡೆದರೆ ಪ್ರಥಮ್ ಮತ್ತು ಕಿರಿಕ್ ಕೀರ್ತಿ ಇವರಿಬ್ಬರಲ್ಲಿ ಒಬ್ಬರು ಗೆಲ್ಲುವ ಸಾಧ್ಯತೆ ಇದೆ. ಇನ್ನೂ ಇವರ ಪ್ರಕಾರ ಮಾಳವಿಕ, ಭುವನ್ ಮತ್ತು ರೇಖಾ ಆಟ ಆಡಲು ಬರುವುದಿಲ್ಲ ಎಂದೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿ ಕಾರಿದ್ದಾರೆ. ಅಲ್ಲದೆ ಕೆಲವರು ಪ್ರಥಮ್ ಬಗ್ಗೆ ಪ್ರತಿಕ್ರಿಯಿಸಿ ಅವನೊಬ್ಬ ಸ್ವಾರ್ಥಿ, ಬಕೆಟ್ ರಾಜ ಎಂದೂ ಕೂಡಾ ಜರಿದಿದ್ದಾರೆ.

ಬಿಗ್ ಬಾಸ್ ಗೆ ಪ್ರಥಮ್ ಎಂಟ್ರಿ ಕೊಟ್ಟಾಗಿನಿಂದ ಕನ್ನಡದ ಅಭಿಮಾನಿ ಎಂದು ಬಿಗ್ ಬಾಸ್ ಪ್ರಿಯರು ನಂಬಿದ್ದಾರೆ. ಕನ್ನಡ ಎಂದು ಮನೆಯಲ್ಲಿ ವಿರೋಧ ವ್ಯಕ್ತಪಡಿಸುವ ಪ್ರಥಮ್ ಹಲವಾರು ಜನರಿಗೆ ಇಷ್ಟವಾಗಿದ್ದಾರೆ. ಜನರ ಮನದಲ್ಲಿ ಪ್ರಥಮ್ ಗೆಲ್ಲುವುದು ಖಚಿತ. ಆದರೆ ತೆರೆಮರೆಯಲ್ಲಿ ನಡೆಯುವ ಓಟ್ ಕೌಂಟಿಂಗ್ ನಲ್ಲಿ ಯಾರು ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ.

2 thoughts on “ಬಿಗ್ ಬಾಸ್ ಸೀಸನ್ 4 ನ ವಿನ್ನರ್ ಯಾರು ಗೊತ್ತಾ?

Comments are closed.

Social Media Auto Publish Powered By : XYZScripts.com