ಬಂಕ್‌ಗಳಲ್ಲಿ ಮೋದಿ ಭಾವಚಿತ್ರ: ನೀತಿ ಸಂಹಿತೆ ಉಲ್ಲಂಘನೆ

ಗೋವಾದ ಪೆಟ್ರೋಲ್‌ ಬಂಕ್‌ಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರಗಳಿರುವುದು ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದೆ  ಎಂದು ತಿಳಿದುಬಂದಿದೆ.
ಫೆಬ್ರವರಿ 4ರಿಂದ ಮಾರ್ಚ್‌‌ 8ರೊಳಗೆ ಉತ್ತರಾಖಂಡ್‌, ಗೋವಾ, ಪಂಜಾಬ್‌, ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ಚುನಾವಣೆ ನಡೆಯಲಿದ್ದು,  ಜನವರಿಗೆ 4ರಂದು ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಘೋಷಿಸಿತ್ತು.
ಇನ್ನೂ ಪೆಟ್ರೋಲ್‌ ಬಂಕ್‌ಗಳಲ್ಲಿ ಮೋದಿ ಭಾವಚಿತ್ರಗಳಿದ್ದು, ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ. ಚುನಾವಣೆ ಸಮಯದಲ್ಲಿನ ಸೂಚನೆಗಳನ್ನು ಪಾಲಿಸುವಂತೆ ಸಂಪುಟ ಕಾರ್ಯದರ್ಶಿಗಳಿಗೆ ಆಯೋಗ ತಾಕೀತು ಮಾಡಿದೆ ಎನ್ನಲಾಗಿದೆ.
ಇನ್ನೂ ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾ ಅವರಿಗೆ ಚುನಾವಣಾ ಆಯೋಗ ಪತ್ರ ಬರೆದಿದೆ. ಚುನಾವಣೆ ಎದುರಿಸುತ್ತಿರುವ ಗೋವಾದ ಪೆಟ್ರೋಲ್‌ ಬಂಕ್‌ಗಳಲ್ಲಿ ಮೋದಿ ಭಾವಚಿತ್ರಗಳು ಇರುವ ಬಗ್ಗೆ ದೂರು ಬಂದಿದೆ ಎಂದು ಚುನಾವಣಾ ಆಯೋಗ ಪತ್ರದಲ್ಲಿ ತಿಳಿಸಿದೆ.
ಇನ್ನೂ ಉತ್ತರಾಖಂಡ್‌ನಲ್ಲಿ ಕೂಡಾ ಅನಿಲ ಕಂಪನಿಗಳು ಗ್ರಾಹಕರಿಗೆ ಮೋದಿ ಚಿತ್ರಗಳಿರುವ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದೆ ಎಂದೂ ಆಯೋಗ ದೂರಿದ್ದು,ಈ ಕುರಿತು ಪತ್ರಿಕೆಯೊಂದರ ವರದಿಯನ್ನೂ ಆಯೋಗ ಉಲ್ಲೇಖಿಸಿದೆ ಎನ್ನಲಾಗಿದೆ.

Comments are closed.