ಫಿಫಾ ರ‍್ಯಾಂಕಿಂಗ್: ಭಾರತದ ಫುಟ್ಬಾಲ್ ತಂಡಕ್ಕೆ ಸ್ಥಾನ

ನವದೆಹಲಿ: ಫಿಫಾ ಗುರುವಾರ ನೂತನ ರ‍್ಯಾಂಕಿಂಗ್ ಬಿಡುಗಡೆ ಮಾಡಿದ್ದು, ಭಾರತದ ಫುಟ್ಬಾಲ್ ತಂಡ, 129 ನೇ ಸ್ಥಾನದಲ್ಲಿದೆ. ಇದು ದಶಕದಲ್ಲಿ ಭಾರತ ತಂಡ ಕಂಡ ಅತ್ಯುತ್ತಮ ರ‍್ಯಾಂಕಿಂಗ್ ಎನಿಸಿದೆ.
ಕಳೆದ ಎರಡು ವರ್ಷಗಳಿಂದ ಭಾರತದ ಫುಟ್ಬಾಲ್ ತಂಡ ಉತ್ತಮ ಸಾಧನೆ ತೋರುತ್ತಿದ್ದು, ಎರಡು ವರ್ಷಗಳ ಹಿಂದೆ 171 ನೇ ಸ್ಥಾನದಲ್ಲಿದ್ದ ಭಾರತ, 42 ಸ್ಥಾನ ಬಡ್ತಿಯೊಂದಿಗೆ 129 ನೇ ಸ್ಥಾನಕ್ಕೆ ಏರಿದೆ. ಇದು ಭಾರತ 2006 ರ ಆಗಸ್ಟ್ ತಿಂಗಳಿಂದ ಈ ವರೆಗಿನ ಶ್ರೇಷ್ಠ ಸಾಧನೆಯಾಗಿದೆ.
2016 ರಲ್ಲಿ ಭಾರತದ ಫುಟ್ಬಾಲ್ ತಂಡದ ಸಾಧನೆ ಉತ್ತಮವಾಗಿದ್ದು, ಈ ವರ್ಷದಲ್ಲಿ ಆಡಿದ 11 ಅಂತಾರಾಷ್ಟ್ರೀಯ ಪಂದ್ಯಗಳ ಪೈಕಿ ಒಂಬತ್ತು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರುವ ಮೂಲಕ ಗಮನ ಸೆಳೆದಿದೆ.
ವಿಶ್ವ ರ‍್ಯಾಂಕಿಂಗ್‌ನಲ್ಲಿ 114 ನೇ ಸ್ಥಾನದಲ್ಲಿದ್ದ ಪೆಯಟ್ರೋ ರಿಕೋ ತಂಡದ ವಿರುದ್ಧ ಜಯ ಸಾಧಿಸಿದ್ದು, 2016 ರಲ್ಲಿ ಭಾರತದ ಫುಟ್ಬಾಲ್ ತಂಡದ ಶ್ರೇಷ್ಠ ಸಾಧನೆ ಎನಿಸಿತು.
‘2005 ರ ಡಿಸೆಂಬರ್ ತಿಂಗಳಿಂದ ಭಾರತದ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಿದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಹೇಳಿದ್ದಾರೆ.

2 thoughts on “ಫಿಫಾ ರ‍್ಯಾಂಕಿಂಗ್: ಭಾರತದ ಫುಟ್ಬಾಲ್ ತಂಡಕ್ಕೆ ಸ್ಥಾನ

 • October 20, 2017 at 7:56 PM
  Permalink

  Great information. Lucky me I came across your website by chance (stumbleupon). I have book marked it for later!|

 • October 24, 2017 at 7:40 PM
  Permalink

  Howdy just wanted to give you a quick heads up and let you know a few of the images aren’t loading correctly.
  I’m not sure why but I think its a linking issue.

  I’ve tried it in two different browsers and both show the same outcome.

Comments are closed.

Social Media Auto Publish Powered By : XYZScripts.com