ಇಟ್ಟಲ್ಲೇ ಪುಡಿ ಪುಡಿಯಾದ 2000 ಹೊಸ ನೋಟು..!

ನೋಟ್ ಬ್ಯಾನ್ ನಿಂದ  ಜನರು ಹಲವು ಸಮಸ್ಯೆಗಳನ್ನು ಎದುರಿಸಿದ್ದು, ಇತ್ತೀಚಿಗೆ ಸ್ವಲ್ಪ ರಿಲಾಕ್ಸ್ ಆಗಿದ್ದರು ಅದರ ಬೆನ್ನಲ್ಲೆ  2000 ರೂಪಾಯಿಯ ಹೊಸ ನೋಟು  ಇಟ್ಟಲ್ಲೇ ಪುಡಿ ಪುಡಿಯಾಗುತ್ತಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಹೌದು ಇದೇನಪಾ ಅಂತೀರಾ ಈ ಸ್ಟೋರಿ ನೋಡಿ ನೋಟುಗಳ ಮುದ್ರಣ ಕಡಿಮೆ ಅವಧಿಯಲ್ಲಿ ಅವಸರವಾಗಿ ಚಲಾವಣೆ ಮಾಡಿದ್ದರ ಪರಿಣಾಮ ಇವು ಇಟ್ಟ ಸ್ಥಳದಲ್ಲೇ ಪುಡಿ ಪುಡಿಯಾಗುತ್ತಿವೆ ಎನ್ನುವ ದೂರು ಮೈಸೂರಿನಲ್ಲಿ ಕೇಳಿಬಂದಿದೆ. ಬೀರುವಿನಲ್ಲಿ ಭದ್ರವಾಗಿರಿಸಿದ್ದ ಹೊಸ ನೋಟುಗಳು ಪುಡಿ ಪುಡಿಯಾಗಿ ಉದುರುತ್ತಿವೆ ಎಂದು ಹೇಳಲಾಗಿದೆ. ಇದರಿಂದ ಗಾಬರಿಗೊಂಡ ಜನರು ಬ್ಯಾಂಕ್‌ಗಳ ಕಡೆ ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಮೈಸೂರಿನ ನಿವಾಸಿ ವಿನೋದ್ ಕುಮಾರ್ ವಿವಿ ಮೊಹಲ್ಲಾದ ಕರ್ನಾಟಕ ಬ್ಯಾಂಕ್ ನಿಂದ 10,000 ಹಣವನ್ನು 2 ಸಾವಿರ ಮುಖಬೆಲೆಯ 4 ನೋಟುಗಳು ಹಾಗೂ 100 ರೂ ಮುಖಬೆಲೆಯ 2 ಸಾವಿರ ಹಣವನ್ನ ಬ್ಯಾಂಕ್ ನಿಂದ ಡ್ರಾ ಮಾಡಿ ಜನವರಿ 13 ರಂದು ತಮ್ಮ ಹುಟ್ಟು ಹಬ್ಬದ ದಿನ ಹೊಸ ಮೊಬೈಲ್ ತೆಗೆದುಕೊಳ್ಳಲು ಭದ್ರವಾಗಿ ಬೀರುವಿನಲ್ಲಿ ಇಡು ಎಂದು ಅವರ ತಾಯಿಯ ಕೈಗೆ ಕೊಟ್ಟಿದ್ದರು.

ಇಂದು ಹುಟ್ಟುಹಬ್ಬದ ದಿನ ಮೊಬೈಲ್ ತೆಗೆದುಕೊಳ್ಳಲು ಬೀರುವಿನಿಂದ ಹಣ ತೆಗೆದಾಗ 2 ಸಾವಿರ ಮುಖ ಬೆಲೆಯ ನೋಟುಗಳು ಮಡಿಚಿಟ್ಟ ಪರ್ಸ್‌ನಲ್ಲೇ ಹರಿದು ಹೋಗದೆ, ಜಿರಳೆ ಅಥವಾ ಇಲಿಯೂ ಕಚ್ಚದೆ ಇಟ್ಟಲ್ಲಿಯೇ ಪುಡಿ ಪುಡಿಯಾಗಿವೆ.

2 ಸಾವಿರ ಮುಖಬೆಲೆಯ 4 ನೋಟುಗಳು ಗಾಂಧೀಜಿ ಭಾವಚಿತ್ರದ ಕಡೆ ಗೋಡೆಯ ಸುಣ್ಣ ಉದುರುವ ರೀತಿ ಉದುರುತ್ತಿದೆ. ಗಾಬರಿಯಿಂದ ಹಣ ತೆಗೆದುಕೊಂಡು ತಾವು ಡ್ರಾ ಮಾಡಿದ ಬ್ಯಾಂಕಿನವರ ಬಳಿ ಹೋದಾಗ, ಬ್ಯಾಂಕಿನವರು ಕರೆನ್ಸಿ ಸರಬರಾಜು ಮಾಡುವ ಎಸ್‌ಬಿಎಂ ಶಾಖೆಗೆ ಹೋಗುವಂತೆ ತಿಳಿಸಿದರು. ಅಲ್ಲಿ ಯಾವುದೇ ಸಿಬ್ಬಂದಿ ಇರದೆ ಗ್ರಾಹಕರು ಕಂಗಾಲಾಗಿದ್ದಾರೆ.

ಒಟ್ಟಾರೆ ಮೋದಿಯವರು ಮಾಡಿದ ದೀಡೀರ್ ನೋಟ್ ಬ್ಯಾನ್ ನಿಂದ ಹೊಸ ನೋಟುಗಳ ಗುಣಮಟ್ಟ ಕಡಿಮೆಯಾಗಿದೆ ಹೊಸ ನೋಟ್ ಗಳಲ್ಲಿ ಇಂತಹ ಘಟನೆ ನಡೆಡಿರುವುದು ಇಡೀ ದೇಶವನ್ನು ಬೆಚ್ಚಿ ಬಿಳಿಸುವ ಸುದ್ದಿಯಾಗಿದೆ ಎನ್ನಬಹುದು.

Comments are closed.