ರಣಜಿ: ಗುಜರಾತ್ ಬಿಗಿ ಹಿಡಿತ

ಪಾರ್ಥಿವ್, ಜನ್‌ಪ್ರೀತ್ ಅರ್ಧಶತಕ, ಮುಂಬೈಗೆ 63 ರನ್ ಹಿನ್ನಡೆ  ರಣಜಿ ಫೈನಲ್ ಎರಡನೇ ದಿನವೂ ಗುಜರಾತ್ ಹಿಡಿತ ಹಾಲಿ ಚಾಂಪಿಯನ್ ಮುಂಬೈ ತಂಡದ ವಿರುದ್ಧ ಸಂಘಟಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ಗುಜರಾತ್ ತಂಡ ಪ್ರಸಕ್ತ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಇಂದೋರ್‌ನ ಹೋಳ್ಕರ್ ಅಂಗಳದಲ್ಲಿ ನಡೆದ ಎರಡನೇ ದಿನದ ಪಂದ್ಯದಲ್ಲಿ ಗುಜರಾತ್ ದಿನಾದಟದಂತ್ಯಕ್ಕೆ 6 ವಿಕೆಟ್‌ಗೆ 291 ರನ್ ಕಲೆ ಹಾಕಿದೆ.
ಗುಜರಾತ್ 37 ರನ್‌ಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮೂರನೇ ವಿಕೆಟ್‌ಗೆ ಪಾರ್ಥಿವ್ ಪಟೇಲ್ ಹಾಗೂ ಭಾರ್ಗವ್ 23 ಓವರ್‌ಗಳಲ್ಲಿ 69 ರನ್ ಕಲೆ ಹಾಕಿತು. ಭಾರ್ಗವ್ 45 ರನ್‌ಗಳಿಸಿ ಔಟಾದರು. 4ನೇ ವಿಕೆಟ್‌ಗೆ ಪಾರ್ಥಿವ್-ಮನ್‌ಪ್ರೀತ್ ಜೋಡಿ 120 ರನ್ ಕಲೆ ಮುನ್ನಡೆಯ ಕನಸಿಗೆ ಪುಷ್ಟಿ ನೀಡಿತು.
ಪಾರ್ಥಿವ್ 146 ಎಸೆತಗಳಲ್ಲಿ 12 ಬೌಂಡರಿ ಸೇರಿದಂತೆ 90 ರನ್ ಬಾರಿಸಿ ಔಟಾದರು. ಜನ್‌ಪ್ರೀತ್ 95 ಎಸೆತಗಳಲ್ಲಿ 11 ಬೌಂಡರಿ ಒಳಗೊಂಡಂತೆ 77 ರನ್ ಸಿಡಿಸಿ ಶ್ರದ್ಧಾಲ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು.
ಸಂಕ್ಷಿಪ್ತ ಸ್ಕೋರ್
ಮುಂಬೈ ಮೊದಲ ಇನಿಂಗ್ಸ್ 228
ಗುಜರಾತ್ ಮೊದಲ ಇನಿಂಗ್ಸ್ 6 ವಿಕೆಟ್‌ಗೆ 291
(ಪಾರ್ಥಿವ್ ಪಟೇಲ್ 90, ಮನ್‌ಪ್ರೀತ್ 77, ಭಾರ್ಗವ್ 45, ಅಭಿಷೇಕ್ 91ಕ್ಕೆ 3)

Comments are closed.

Social Media Auto Publish Powered By : XYZScripts.com