ಗುಜರಾತ್ ದಾಳಿಗೆ ತತ್ತರಿಸಿದ ಮುಂಬೈ

ಇಂದೋರ್: ಗುಜರಾತ್ ತಂಡದ ಮಾರಕ ದಾಳಿಗೆ ಕಂಗೆಟ್ಟ ಮುಂಬೈ ತಂಡ, 2016 ರ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸಾಧಾರಣ ಮೊತ್ತ ಕಲೆ ಹಾಕಿದೆ.
ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿತು. ಬ್ಯಾಟಿಂಗ್ ಮಾಡಿದ ಮುಂಬೈ ತಂಡ 83.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 228 ರನ್ ಕಲೆ ಹಾಕಿದೆ. ದಿನದ ಅಂತ್ಯಕ್ಕೆ ಗುಜರಾತ್ ಮೊದಲ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 2 ರನ್ ಕಲೆ ಹಾಕಿದೆ. ಸಮಿತ್ (2), ಪ್ರಿಯಾಂಕ್ (0) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
 
ಬುಧವಾರ ಮುಂಜಾನೆ ವಿಕೆಟ್ ಕಾಯ್ದುಕೊಂಡು ರನ್ ಕಲೆ ಹಾಕುವ ಲೆಕ್ಕಾಚಾರ ಗುಜರಾತ್ ತಂಡದ್ದಾಗಿದೆ. ಆದರೆ ಬೆಳಗ್ಗೆ ವಾತಾವರಣದ ಲಾಭ ಪಡೆದು ವಿಕೆಟ್ ಕಬಳಿಸುವ ಲೆಕ್ಕಾಚಾರ ಮುಂಬೈ ತಂಡದ್ದಾಗಿದೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಪ್ರಿಯಾಂಕ್ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ. ಸಮತಿ ಹಾಗೂ ಪ್ರಿಯಾಂಕ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರೆ, ಇನಿಂಗ್ಸ್ ಮುನ್ನಡೆಯ ಕನಸು ನನಸಾಗುತ್ತದೆ.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಅಖೀಲ್ (4), ಶ್ರೇಯಸ್ ಅಯ್ಯರ್ (14) ಬೇಗನೆ ವಿಕೆಟ್ ಒಪ್ಪಿಸಿದರು. ಮೂರನೇ ವಿಕೆಟ್‌ಗೆ ಪೃಥ್ವಿ ಶಾ ಅವರನ್ನು ಸೇರಿಕೊಂಡ ಸೂರ್ಯಕುಮಾರ್ ಯಾದವ್ ಸಮಯೋಚಿತ ಇನಿಂಗ್ಸ್ ಕಟ್ಟಿದರು. ಈ ಜೋಡಿ ತಂಡಕ್ಕೆ ಅರ್ಧಶತಕದ ಜೊತೆಯಾಟ ನೀಡಿತು. ಸೆಮಿಫೈನಲ್ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಯುವ ಆಟಗಾರ ಪೃಥ್ವಿ ಅವರು ಮೊದಲ ಇನಿಂಗ್ಸ್‌ನಲ್ಲಿ ಸೊಗಸಾದ ಆಟ ಆಡಿದರು.
ಪೃಥ್ವಿ 93 ಎಸೆತಗಳಲ್ಲಿ 11 ಬೌಂಡರಿ ಸೇರಿದಂತೆ 71 ರನ್ ಕಲೆ ಹಾಕಿ, ಮುನುಗುತ್ತಿದ್ದಾಗ ಅನಗತ್ಯ ರನ್ ಕದಿಯಲು ಹೋಗಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದ ಸೂರ್ಯಕುಮಾರ್ 133 ಎಸೆತಗಳಲ್ಲಿ 7 ಬೌಂಡರಿ 1 ಸಿಕ್ಸರ್ ನೆರವಿನಿಂದ 57 ರನ್ ಸಿಡಿಸಿದರು.
ಉಳಿದಂತೆ ನಾಯಕ ಆದಿತ್ಯ ತಾರೆ (4) ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಸಿದ್ಧಾರ್ಥ್ ಲಾಡ್ (23), ಅಭಿಷೇಕ್ ನಾಯರ್ (35) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಅನುಭವಿ ಆರ್.ಪಿ ಸಿಂಗ್ ಮಾರಕ ದಾಳಿಯನ್ನು ಸಂಘಟಿಸಿದರು. ಇವರು 21 ಓವರ್‌ಗಳಲ್ಲಿ 48 ರನ್‌ಗೆ 2 ವಿಕೆಟ್ ಪಡೆದರು. ಉಳಿದಂತೆ ಚಿಂತನ್, ರುಜುಲ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 228
ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದ ಆಟಗಾರರು
ಆರ್.ಪಿ ಸಿಂಗ್, ರುಜುಲ್‌ಗೆ ಎರಡು ವಿಕೆಟ್
============
ಸ್ಕೋರ್ ವಿವರ
ಮುಂಬೈ 83.5 ಓವರ್‌ಗಳಲ್ಲಿ 228
(ಪೃಥ್ವಿ ಶಾ 71, ಸೂರ್ಯಕುಮಾರ್ ಯಾದವ್ 57, ಸಿದ್ದಾರ್ಥ್ ಲಾಡ್ 23, ಅಭಿಚೇಕ್ 35, ಆರ್.ಪಿ ಸಿಂಗ್ 48ಕ್ಕೆ 2, ರುಜುಲ್ 5ಕ್ಕೆ 2)
ಗುಜರಾತ್ ಮೊದಲ ಇನಿಂಗ್ಸ್ ವಿಕೆಟ್ ನಷ್ಟವಿಲ್ಲದೆ 2

6 thoughts on “ಗುಜರಾತ್ ದಾಳಿಗೆ ತತ್ತರಿಸಿದ ಮುಂಬೈ

 • October 18, 2017 at 2:09 PM
  Permalink

  Ahaa, its good dialogue about this piece of writing at this place at this web site, I have read all that, so now me also commenting at this place.|

 • October 18, 2017 at 2:22 PM
  Permalink

  Excellent post. I was checking continuously this weblog and I’m impressed! Extremely helpful information specially the final section 🙂 I handle such info a lot. I was looking for this certain info for a very lengthy time. Thanks and best of luck. |

 • October 18, 2017 at 4:07 PM
  Permalink

  hello!,I really like your writing very so much! percentage we be in contact extra about your post on AOL? I need a specialist on this house to unravel my problem. May be that’s you! Having a look forward to see you. |

 • October 20, 2017 at 7:14 PM
  Permalink

  I do agree with all of the ideas you’ve introduced for your post. They are very convincing and will certainly work. Nonetheless, the posts are too quick for beginners. Could you please lengthen them a little from next time? Thanks for the post.|

Comments are closed.

Social Media Auto Publish Powered By : XYZScripts.com