ಆನಂದ್ ಸಿಂಗ್ ಆಪ್ತನಿಂದ ಲೈಂಗಿಕ ಕಿರುಕುಳ!

ನೂತನ ವರ್ಷ ಆರಂಭದಿಂದಲೂ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳೇ ಸದ್ದು ಮಾಡುತ್ತಿದೆ. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಮಾಜಿ ಸಚಿವರ ಆಪ್ತರೊಬ್ಬರು ಲೈಂಗಿಕ ಕಿರುಕುಳ ಎಸಗಿರುವ ಆರೋಪ ಕೇಳಿಬಂದಿದೆ.

ಬಳ್ಳಾರಿಯ ಹೊಸಪೇಟೆ ನಗರಸಭೆಯ ಬಿಜೆಪಿ ಸದಸ್ಯ ಹಾಗೂ ಮಾಜಿ ಸಚಿವ ಆನಂದ ಸಿಂಗ್ ಆಪ್ತರೊಬ್ಬರ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಹೊಸಪೇಟೆ ನಗರಸಭೆಯ ಬಿಜೆಪಿ ಸದಸ್ಯನಾಗಿ ಚಂದ್ರಕಾಂತ್ ಕಾಮತ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಇವರು ಮಾಜಿ ಸಚಿವ ಆನಂದ್ ಸಿಂಗ್ ರವರ ಆಪ್ತರೂ ಹಾಗೂ ರಾಜ್ಯ ಯುವ ಘಟಕದ ಪದಾಧಿಕಾರಿಯಾಗಿದ್ದಾರೆ.

ಈ ಬಗ್ಗೆ ಅಂಗನವಾಡಿ ಶಿಕ್ಷಕಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಂದ್ರಕಾಂತ್ ಕಾಮತ್ ರವರು ಮೈ ಕೈ ಮುಟ್ಟಿ ಮಾತನಾಡಿಸುತ್ತಾರೆ. ರಾತ್ರಿ ಹೊತ್ತು ಆಫೀಸ್ ಗೆ ಬಾ ಅಂತಾರೆ. ಜೊತೆಗೆ ಅಂಗನವಾಡಿ ಕಟ್ಟಡದ ಜಾಗದ ಬಗ್ಗೆ ಸುಮ್ಮನೆ ತಕರಾರು ತೆಗೆದು ಕಳೆದ ಮೂರು  ವರ್ಷಗಳಿಂದ ಟಾರ್ಚರ್ ಕೊಡ್ತಿದ್ದಾರೆ ಅಂತ ಅಂಗನವಾಡಿ ಶಿಕ್ಷಕಿ ಆರೋಪಿಸಿದ್ದಾರೆ.

ಇದೀಗ ಹೊಸಪೇಟೆ ಡ್ಯಾಂ ಸರ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಚಂದ್ರಕಾಂತ ಕಾಮತ್ ನಾಪತ್ತೆಯಾಗಿದ್ದಾರೆ. ಕಾಮತ್ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ನಗರಸಭೆ ಸದಸ್ಯರು ಚಂದ್ರಕಾಂತ್ ಪರ ನಿಂತಿದ್ದಾರೆ.

Comments are closed.

Social Media Auto Publish Powered By : XYZScripts.com