ಪ್ರಶಸ್ತಿ ಎತ್ತುವ ಕನಸು ನನ್ನದಾಗಿದೆ ನಡಾಲ್

ಸಿಡ್ನಿ: ಸ್ಪೇನ್‌ನ ಸ್ಟಾರ್ ಆಟಗಾರ ರಫೆಲ್ ನಡಾಲ್ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಇನ್ನೂ ಸದ್ಯ ಗಾಯದಿಂದ ಚೇತರಿಸಿಕೊಂಡಿರುವ ನಡಾಲ್, 14 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಪಡೆದು ಬೀಗಿದ್ದಾರೆ.
ನಾನು ಚೇತೋಹಾರಿ ಪ್ರದರ್ಶನವನ್ನು ನೀಡುವುದೇ ಗುರಿ ಎಂದ ಇವರು ಪ್ರಸಕ್ತ ಸಾಲಿನಲ್ಲಿ ಉತ್ತಮ ಆರಂಭ ಮಾಡುವ ಕನಸು ನನ್ನದಾಗಿದೆ. ಮರ್ರೆ ಹಾಗೂ ನೋವಾಕ್ ವಿರುದ್ಧವೂ ರಣ ತಂತ್ರ ರೂಪಿಸಿಕೊಂಡಿದ್ದಾಗಿ ನಡಾಲ್ ತಿಳಿಸಿದ್ದಾರೆ.

ಭರ್ಜರಿ ಪ್ರದರ್ಶನ ನೀಡಲು ಕಠಿಣ ತಾಲೀಮು ನಡೆಸಿದ್ದೇನೆ. ಈ ಬಾರಿ ಮತ್ತೊಮ್ಮೆ ಪ್ರಶಸ್ತಿ ಎತ್ತುವ ಕನಸು ನನ್ನದಾಗಿದೆ.
ಕತಾರ್ ಓಪನ್‌ನಲ್ಲಿ ಮಿಲೋಸ್ ರೋನಿಕ್ ವಿರುದ್ಧ ಕ್ವಾರ್ಟರ್ ಫೈನಲ್ ಕಾದಾಟದಲ್ಲಿ ಸೋಲು ಅನುವಿಸಿದ್ದರು.
ಮೆಲ್ಬೋರ್ನ್ ನೆಚ್ಚಿನ ಅಂಗಳ ಈ ಮೈದಾನದಲ್ಲಿ ಗೆಲುವು ಸಾಧಿಸುವ ಹಂಬಲದಲ್ಲಿದ್ದೇನೆ. ಉತ್ತಮವಾಗಿ ಟೂರ್ನಿಯಲ್ಲಿ ಆರಂಭ ಪಡೆದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಅರಿತಿದ್ದೇನೆ. ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಟೂರ್ನಿಯನ್ನು ಆಡಲು ನಾನು ಉತ್ಸುಕನಾಗಿದ್ದೇನೆ ಎಂದು ನಡಾಲ್ ಹೇಳಿದ್ದಾರೆ.

Comments are closed.

Social Media Auto Publish Powered By : XYZScripts.com