44ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ದ್ರಾವಿಡ್!

ಕ್ರಿಕೆಟ್ ನ ಗೋಡೆ, ದಿವಾಲ್ ಎಂದೇ ಖ್ಯಾತಿ ಪಡೆದಿದ್ದ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ.

ದ್ರಾವಿಡ್ ಜನವರಿ 11, 1973 ರಂದು ಬೆಂಗಳೂರಿನಲ್ಲಿ ಜನಿಸಿದರು. ಭಾರತ ಕಂಡ ಉತ್ತಮ ಆಟಗಾರರಲ್ಲಿ ಒಬ್ಬರಾಗಿದ್ದ ದ್ರಾವಿಡ್ ರವರು ತಮ್ಮ 12 ನೇ ವಯಸ್ಸಿನಲ್ಲಿಯೇ ಕ್ರಿಕೆಟ್ ಜೀವನ ಆರಂಭಿಸಿದರು. ಕರ್ನಾಟಕ ರಾಜ್ಯದ ಪರವಾಗಿ ಅಂಡರ್ 15, ಅಂಡರ್ 17, ಅಂಡರ್ 19 ಮಟ್ಟದ ತಂಡಗಳಲ್ಲಿ ಆಡಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿದ ಭಾರತ ಈ ಕ್ರೀಡಾಪಟುವಿಗೆ ರಾಷ್ಟ್ರೀಯ ತಂಡದಲ್ಲಿ ಅಡಲು ಅವಕಾಶ ನೀಡಿತು. ಬ್ಯಾಟಿಂಗ್ ಜತೆಗೆ ವಿಕೆಟ್ ಕೀಪಿಂಗ್ ಸಹ ದ್ರಾವಿಡ್ ಮಾಡುತ್ತಿದ್ದರು. ನಾಯಕರಾಗಿಯೂ ತಂಡ ಮುನ್ನಡೆಸಿದ್ದಾರೆ.

ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ಹತ್ತುಸಾವಿರ ರನ್ ಗಳಿಸಿರುವ ಬ್ಯಾಟ್ಸ್ ಮನ್ ಪಟ್ಟಿಗೆ ದ್ರಾವಿಡ್ ಸಹ ಸೇರಿದ್ದಾರೆ. ಉತ್ತಮ ಕ್ರೀಡಾ ಪಟುವಾದ ದ್ರಾವಿಡ್ ಎಲ್ಲಾ ರೀತಿಯ ವಿವಾದಗಳಿಂದ ದೂರವಿದ್ದರು. ಸೌಮ್ಯ ಸ್ವಭಾವ ಹಾಗು ತಾಳ್ಮೆ ಆಟದ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಇತಿಹಾಸ ನಿರ್ಮಿಸಿದರು.  ಕ್ರಿಕೆಟ್ ನಲ್ಲಿ ಹಲವಾರು ದಾಖಲೆಗಳು ಇಂದಿಗೂ ದ್ರಾವಿಡ್ ಹೆಸರಿನಲ್ಲಿವೆ.

ದ್ರಾವಿಡ್ ರವರಿಗೆ ಹಲವಾರು ಪ್ರಶಸ್ತಿಗಳು ಹರೆಸಿ ಬಂದಿವೆ. 2012 ಮಾರ್ಚ್ 9ರಂದು ಅಂತರಾಷ್ಟ್ರೀಯ ಕ್ರಿಕೆಟ್ ಗೆ ದ್ರಾವಿಡ್ ವಿದಾಯ ಹೇಳಿದರು.  ಇಂದಿಗೂ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಮುಂದುವರೆಸುತ್ತಿರುವ ಅವರು ಅಂಡರ್ 19 ತಂಡಕ್ಕೆ ತರಬೇತಿ ನೀಡುತ್ತಿದ್ದಾರೆ.

One thought on “44ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ದ್ರಾವಿಡ್!

  • October 20, 2017 at 9:37 PM
    Permalink

    My partner and I stumbled over here coming from
    a different page and thought I may as well check things out.
    I like what I see so i am just following you. Look forward to exploring your web page repeatedly.

Comments are closed.

Social Media Auto Publish Powered By : XYZScripts.com