ಟಿ-20 ಸರಣಿ ನ್ಯೂಜಿಲೆಂಡ್‌ಗೆ ಜಯ

ಓವಲ್: ಮಧ್ಯಮ ಕ್ರಮಾಂಕಾದ ಕೋರಿ ಆಂಡರ್ಸನ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಅವರ ಉತ್ತಮ ಆಟದ ನೆರವಿನಿಂದ ನ್ಯೂಜಿಲೆಂಡ್ ತಂಡ 27 ರನ್‌ಗಳಿಂದ ಬಾಂಗ್ಲಾದೇಶವನ್ನು ಮೂರನೇ ಟಿ-20 ಸರಣಿಯಲ್ಲಿ ಮಣಿಸಿ, ವೈಟ್‌ವಾಶ್ ಸಾಧನೆಯನ್ನು ಮಾಡಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 194 ರನ್ ಕಲೆ ಹಾಕಿತು. ಸವಾಲಿನ ಮೊತ್ತ ಹಿಂಬಾಲಿಸಿದ ಬಾಂಗ್ಲಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 167 ರನ್ ಸೇರಿಸಿತು.
ಗುರಿ ಹಿಂಬಾಲಿಸಿದ ಬಾಂಗ್ಲಾ ತಂಡದ ಆರಂಭ ಸಾಧಾರಣವಾಗಿತ್ತು. ತಮೀಮ್ ಇಕ್ಬಾಲ್ (24), ಸೌಮ್ಯಾ ಸರ್ಕಾರ್ (42) ತಂಡಕ್ಕೆ 44 ರನ್ ಜೊತೆಯಾಟ ನೀಡಿದರು. ಶಬ್ಬೀರ್ ರಹಮಾನ್ (18), ಶಕೀಬ್ ಉಲ್ ಹಸನ್ (41) ಕಲೆ ಹಾಕಿದರೂ, ಅಗತ್ಯ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಕಿವೀಸ್ ಪರ ಟ್ರೆಂಟ್ ಬೌಲ್ಟ್ ಹಾಗೂ ಈಶ್ ಸೋಧಿ ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಜೇಮ್ಸ್ ನೀಶಮ್ (15) ಬೇಗನೆ ಪೆವಿಲಿಯನ್ ಸೇರಿದರು. ಕಾಲಿನ್ ಮುನ್ರೊ (0) ನಿರಾಸೆ ಅನುಭವಿಸಿದರು.
4 ನೇ ವಿಕೆಟ್‌ಗೆ ಕೇನ್ ಹಾಗೂ ಕೋರಿ ಆಂಡರ್ಸನ್ ತಂಡಕ್ಕೆ ಶತಕದ ಜೊತೆಯಾಟವನ್ನು ನೀಡಿದರು. ಕೇನ್ 57 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 60 ರನ್ ಬಾರಿಸಿದರು. ಕೋರಿ 41 ಎಸೆತಗಳಲ್ಲಿ 2 ಬೌಂಡರಿ, 10 ಸಿಕ್ಸರ್ ನೆರವಿನಿಂದ 94 ರನ್ ಬಾರಿಸಿ ಅಬ್ಬರಿಸಿದರು.  ಬಾಂಗ್ಲಾ ಪರ ರುಬೇಲ್ ಹುಸೇನ್ 3 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 194
ಬಾಂಗ್ಲಾದೇಶ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 167.

6 thoughts on “ಟಿ-20 ಸರಣಿ ನ್ಯೂಜಿಲೆಂಡ್‌ಗೆ ಜಯ

 • October 20, 2017 at 6:58 PM
  Permalink

  These are actually great ideas in about blogging.

  You have touched some fastidious things here. Any way keep up wrinting.

 • October 21, 2017 at 4:19 AM
  Permalink

  Useful information. Fortunate me I found your website unintentionally, and I am surprised why this twist of fate did not came about in advance! I bookmarked it.|

 • October 24, 2017 at 3:03 PM
  Permalink

  Hello mates, its fantastic piece of writing concerning educationand
  entirely defined, keep it up all the time.

 • October 24, 2017 at 8:31 PM
  Permalink

  Every weekend i used to pay a visit this site, because i want enjoyment,
  since this this web page conations really fastidious funny stuff too.

 • October 25, 2017 at 9:42 AM
  Permalink

  I am sure this post has touched all the internet visitors,
  its really really good paragraph on building up new web site.

Comments are closed.

Social Media Auto Publish Powered By : XYZScripts.com