ಪ್ರಥಮ್, ಮಾಳವಿಕರನ್ನು ಬಿಗ್ ಬಾಸ್ ಮತ್ತೆ ಉಳಿಸಿಕೊಂಡಿದ್ದೇಕೆ ಗೊತ್ತಾ..?

ವಾರದ ಕಥೆ ಕಿಚ್ಚನ ಜೊತೆ ಬಿಗ್ ಬಾಸ್ ನಲ್ಲಿ ಮಾಳವಿಕ ಹಾಗೂ ಪ್ರಥಮ್‌  ಬಿಗ್‌ಬಾಸ್‌ ಮನೆಯಿಂದ ಹೊರ ಬಿದ್ದಿದ್ದಾರೆ ಅಂತ ಎಲ್ಲರೂ ತಿಳಿದಿದ್ದರು. ಆದರೆ ಅವರು ಮತ್ತೆ ವಾಪಸ್ಸು ಬರೋಕೆ ಕಾರಣ ಏನು ಗೊತ್ತಾ? ಇಲ್ಲಿದೇ ಸ್ಟೋರಿ ನೋಡಿ.
ಶನಿವಾರ ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್‌‌ನಲ್ಲಿ ಬಿಗ್‌ಬಾಸ್‌ ಮನೆಯಿಂದ ಪ್ರಥಮ್‌ ಮತ್ತು ಮಾಳವಿಕ ಹೊರ ಬಿದ್ದಿದ್ದಾರೆ ಅಂತಾ ಗೊತ್ತಾದ ಮೇಲೆ ಮಾಳವಿಕ ಹಾಗೂ ಪ್ರಥಮ್ ತುಂಬಾ ಬೇಜಾರಲ್ಲಿದ್ದರು. ಇನ್ನೂ ಬಿಗ್ ಬಾಸ್ ನಲ್ಲಿ ತನ್ನದೇ ಆದಂತಹ ವಿಶಿಷ್ಟ ಶೈಲಿಯಲ್ಲಿ ಗುರುತಿಸಿಕೊಂಡಿರುವ ಪ್ರಥಮ್ ನ ಅಭಿಮಾನಿಗಳು ಪ್ರಥಮ್ ಇನ್ನೇನು ಹೊರಬರತುತ್ತಿದ್ದಾನೆ ಎಂಬ ಸುದ್ದಿ ಕೇಳಿ ಬೇಸರ ವ್ಯಕ್ತಪಡಿಸಿದ್ದರು. ಆದರೆ ಭಾನುವಾರ ಪ್ರಥಮ್ ಹಾಗೂ ಮಾಳವಿಕ  ಇನ್ನು ಬಿಗ್ ಬಾಸ್ ಮನೆಯ ಗ್ಯಾರೇಜಿನಲ್ಲಿ ಇದ್ದಾರೆ ಎಂದು ಸುದೀಪ್ ಹೇಳಿದಾಗ ಪ್ರೇಕ್ಷಕರು ತಬ್ಬಿಬ್ಬಾದರು ಎನ್ನಲಾಗಿದೆ.
ಇನ್ನೂ ಎಲ್ಲರೂ ತಿಳಿದಂತೆ ಪ್ರಥಮ್‌ ಮತ್ತು ಮಾಳವಿಕ ಮನೆಯಿಂದ ಹೊರಹೋಗಿದ್ದು ಸತ್ಯ. ಆದರೆ, ಆಟದಿಂದ ಪ್ರಥಮ್‌ ಮತ್ತು ಮಾಳವಿಕ ಹೊರಬಿದ್ದಲ್ಲ ಅಂತ ಸುದೀಪ್ ಹೇಳಿದರು.  ಪ್ರಥಮ್‌ ಮತ್ತು ಮಾಳವಿಕ ಬಿಗ್‌ಬಾಸ್‌ ಮನೆಯ ಗ್ಯಾರೇಜ್‌ನಲ್ಲಿದ್ದಾರೆ ಅಂತ ಸುದೀಪ್‌ ಹೇಳಿದರು.
ಮಾಳವಿಕ ಹಾಗೂ ಪ್ರಥಮ್ ಬಿಗ್ ಬಾಸ್ ನಿಂದ ಆಚೆ ಕಳಿಸಲಿಲ್ಲ ಅದಕ್ಕೆ ಪ್ರಮುಖ ಕಾರಣ  ಇಲ್ಲಿದೆ ನೋಡಿ ಈ ವಾರದ ಕಥೆ ಕಿಚ್ಚಿನ ಜೊತೆ ಆರಂಭವಾದಾಗ ಸುದೀಪ್ ಎಲ್ಲರಿಗೂ ಒಂದು ಸಿಹಿ ಸುದ್ದಿ ಹೇಳಿದ್ದರು ಅದು ಬಿಗ್‌ಬಾಸ್‌ ಇಷ್ಟು ದಿನ 100 ದಿನ ನಡೆಯತ್ತಿತ್ತು. ಆದರೆ ಬಿಗ್‌ಬಾಸ್‌ ಸೀಸನ್‌-4 100ದಿನಗಳ ಕಾಲ ನಡೆಯುವುದಿಲ್ಲ. ಬದಲಾಗಿ 115 ದಿನ ನಡೆಯಲಿದೆ ಎಂದು ಹೇಳಿದ್ದರು. ಆ ಕಾರಣಕ್ಕಾಗಿ ಪ್ರಥಮ್ ಹಾಗೂ ಮಾಳವಿಕ ಮನೆಯ ಗ್ಯಾರೇಜಿನಲ್ಲಿದ್ದಾರೆ ಎನ್ನಲಾಗಿದೆ.
ಇನ್ನೂ ತಾನು ಬಿಗ್‌ಬಾಸ್‌ನಲ್ಲಿ ಉಳಿದಿದ್ದೇನೆ ಎಂದು ತಿಳಿದ ಪ್ರಥಮ್‌ ಸಿಕ್ಕಾಪಟ್ಟೆ ಖುಷಿ ಪಟ್ಟರು. ಮಾಳವಿಕ ಕೂಡ ತುಂಬಾ ಸಂತೋಷ ಪಟ್ಟರು. ಆದರೆ ಮನೆಯ ಉಳಿದ ಸದಸ್ಯರು ಪ್ರಥಮ್‌ ಎಲಿಮಿನೇಟ್‌ ಆಗಿದ್ದಾನೆ ಅಂದುಕೊಂಡು ಎಲ್ಲರೂ ಫುಲ್‌ ಖುಷಿಯಾಗಿದ್ದರು ಎನ್ನಲಾಗಿದೆ.
ಮುಂದಿನ ವಾರ ಯಾರು ಎಲಿಮಿನೇಷನ್ ಆಗುತ್ತಾರೆ ಬಿಗ್ ಬಾಸ್ ಮತ್ತೆನಾದರೂ ಪ್ರೇಕ್ಷಕರಿಗೆ ಕುತೂಹಲ ನೀಡುತ್ತಾರಾ ಪ್ರಥಮ್ ಹಾಗೂ ಮಾಳವಿಕ ಹೋಗ್ತಾರಾ ಅಥವಾ ಗ್ಯಾರೇಜಿನಲ್ಲಿಯೇ ಇರ್ತಾರಾ ಗೆಲ್ಲೋರಾರೂ ಸೋಲೋರಾರು ಕಾದು ನೋಡಬೇಕಾಗಿದೆ.

Comments are closed.