ರಾಜಾಹುಲಿ ಹುಟ್ಟುಹಬ್ಬಕ್ಕೆ ಚಿನ್ನದ ಚಾಕು..!

ರಾಕಿಂಗ್ ಸ್ಟಾರ್ ಯಶ್‌ರವರು ಇಂದು 31 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಸಂಜೆಯಿಂದಲೇ ಅವರ ಮನೆಯತ್ತ ಅಭಿಮಾನಿಗಳ ದಂಡು ಆಗಮಿಸಿದ್ದು, ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದಾರೆ ಎನ್ನಲಾಗಿದೆ. ಇನ್ನೂ ಯಶ್ ಹುಟ್ಟುಹಬ್ಬಕ್ಕೆ ಶ್ರೀಕೃಷ್ಣ ಜುವೆಲರ್ಸ್ ನಿಂದ   74  ಗ್ರಾಂ ತೂಕವಿರುವ ಚಿನ್ನದ ಚಾಕುವನ್ನು ಉಡುಗೊರೆಯಾಗಿ ನೀಡಲಾಗಿದೆ.

ಯಶ್  ಹುಟ್ಟುಹಬ್ಬದ ಪ್ರಯುಕ್ತ ಯಶ್ ಮನೆ ಮುಂದೆ ಅಭಿಮಾನಿ ಸಾಗರೋಪಾದಿಯಲ್ಲಿ ಜಮಾಯಿಸಿದ್ದು, ಮಧ್ಯರಾತ್ರಿ 12ಕ್ಕೆ ಕರುನಾಡ ಕಲಾ ವಿಕ್ರಮ ರಾಕಿಂಗ್ ಸ್ಟಾರ್ ಅಭಿಮಾನಿಗಳ ಸಂಘ ತಂದಿದ್ದ ಭಾರಿ ಗಾತ್ರದ ಕೇಕ್ ಕತ್ತರಿಸಿ ಯಶ್ ಹುಟ್ಟುಹಬ್ಬ ಆಚರಿಸಿಕೊಂಡರು. ಇನ್ನೂ ನೂತನವಾಗಿ ವಿವಾಹವಾಗಿರುವ ಯಶ್ ಹಾಗೂ ರಾಧಿಕಾ ಜೋಡಿಗೆ ಅಭಿಮಾನಿಗಳಿಗೆ ಶುಭ ಹಾರೈಸಿದರು ಎನ್ನಲಾಗಿದೆ.

ಅಭಿಮಾನಿಗಳಿಗೆ ಜನುಮದಿನದ ಕೊಡುಗೆಯಾಗಿ ‘ಯಶೋಮಾರ್ಗ’ ಹೆಸರಿನ ವೆಬ್ ಸೈಟ್ ಲಾಂಚ್ ಮಾಡಲಾಯಿತು ಎಂದು ತಿಳಿದುಬಂದಿದೆ. ಯಶ್ ಅವರ ಯಶೋಮಾರ್ಗ ಕಡೆಯಿಂದ ಪರಿಸರ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದ್ದು, ಜನರಲ್ಲಿ ಹಾಗು ಅಭಿಮಾನಿಗಳಲ್ಲಿ ಪರಿಸರ ಕಾಳಜಿ ಮೂಡಿಸಲು ಈ ಕ್ಯಾಲೆಂಡರ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಯಶೋಮಾರ್ಗ ವೆಬ್ ಸೆಟ್ ಲಾಂಚ್ ಆಗಿದ್ದು, ಈ ಒಂದು ಯಶೋಮಾರ್ಗದ ಮೂಲಕ ಈ ವರ್ಷ ರೈತಪರ ಕೆಲಸಗಳಲ್ಲಿ ಯಶ್ ಭಾಗಿಯಾಗಲಿದ್ದು,ಈ ಮೂಲಕ ರೈತಪರ ಕೆಲಸಗಳಿಗೆ ಸಲಹೆ ಹಾಗೂ ಸಹಾಯ ಮಾಡಲು ಮುಕ್ತ ಅವಕಾಶ ನೀಡಲಾಗಿದೆ. ಜೊತೆಗೆ ಯಶೋಮಾರ್ಗದ ಮೂಲಕ ಸ್ವಯಂಸೇವಕರಾಗಿ ಕೆಲಸ ಮಾಡಲು ಇಚ್ಚಿಸುವವರಿಗೆ ಮುಕ್ತ ಅವಕಾಶವನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

 

 

Comments are closed.