ಕಿರಾತಕನಿಗೆ 31 ರ ಹುಟ್ಟುಹಬ್ಬ ಸಂಭ್ರಮ ರಾಧಿಕಾ ಪಂಡಿತ್ ಸಾಥ್

ಇತ್ತೇಚಿಗಷ್ಟೆ ವಿವಾಹವಾಗಿ ಹನಿಮೂನ್ ಗೆ ತೆರಳಿ  ಜೋಡಿಹಕ್ಕಿಗಳ ತರ ಹಾರಾಡುತ್ತಿರುವ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗೆ ಮತ್ತೊಂದು ಸಿಹಿಸುದ್ದಿ ಮನೆಮಾಡಿದ್ದು, ರಾಕಿಂಗ್ ಸ್ಟಾರ್ ಯಶ್‌ರವರು ತಮ್ಮ  31 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಸಂಜೆಯಿಂದಲೇ ಅವರ ಮನೆಯತ್ತ ಅಭಿಮಾನಿಗಳ ದಂಡು ಆಗಮಿಸಿದ್ದು, ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದಾರೆ ಎನ್ನಲಾಗಿದೆ.
ಪ್ರೀತಿಯ ಅಣ್ ತಮ್ಮನಿಗೆ ಶುಭ ಹಾರೈಸಲು ಮಧ್ಯ ರಾತ್ರಿಯಿಂದಲೇ ಅವರ ನಿವಾಸದ ಬಳಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ರಾಕಿಂಗ್ ಸ್ಟಾರ್ ಯಶ್ ಗೆ ಮದುವೆಯಾದ ನಂತರದ ಮೊದಲ ಜನುಮದಿನ ಆಗಿರುವುದರಿಂದ  ಹುಟ್ಟುಹಬ್ಬದ ಸಂಭ್ರಮ ಸ್ವಲ್ಪ ವಿಶೇಷವಾಗಿತ್ತು ಎನ್ನಲಾಗಿದೆ.
ಇನ್ನೂ  ಹೊಸಕೆರೆ ಹಳ್ಳಿ  ಯಶ್ ನಿವಾಸದಲ್ಲಿ ಕಿರಾತಕನ ಬರ್ತಡೇ ಸಂಭ್ರಮ ಮನೆ ಮಾಡಿತ್ತು. ಮಧ್ಯರಾತ್ರಿ 12ಕ್ಕೆ ಕರುನಾಡ ಕಲಾ ವಿಕ್ರಮ ರಾಕಿಂಗ್ ಸ್ಟಾರ್ ಅಭಿಮಾನಿಗಳ ಸಂಘ ತಂದಿದ್ದ ಭಾರಿ ಗಾತ್ರದ ಕೇಕ್ ಕತ್ತರಿಸಿ ಯಶ್ ಹುಟ್ಟುಹಬ್ಬ ಆಚರಿಸಿಕೊಂಡರು. ಅಭಿಮಾನಿಗಳಿಗೆ ಜನುಮದಿನದ ಕೊಡುಗೆಯಾಗಿ ‘ಯಶೋಮಾರ್ಗ’ ಹೆಸರಿನ ವೆಬ್ ಸೈಟ್ ಲಾಂಚ್ ಮಾಡಲಾಯಿತು ಎಂದು ತಿಳಿದುಬಂದಿದೆ.
ಇನ್ನೂ ನಟ ಯಶ್ ಅವರ ಹುಟ್ಟುಹಬ್ಬಕ್ಕೆ ತನ್ನ ಬಾಳ ಸಂಗಾತಿ ರಾಧಿಕಾ ಪಂಡಿತ್ ಸಾಥ್ ನೀಡಿದ್ದು, ಈ ಜೋಡಿಹಕ್ಕಿಗಳನ್ನು ವೇದಿಕೆಯಲ್ಲಿ ಜೊತೆಯಾಗಿ ಕಂಡು ಹುಟ್ಟುಹಬ್ಬ ಆಚರಿಸಿದ್ದು ವಿಶೇಷವಾಗಿದ್ದು, ಯಶ್ ಅಭಿಮಾನಿಗಳು ಹುಟ್ಟುಹಬ್ಬದಲ್ಲಿ ತಮ್ಮ ನೆಚ್ಚಿನ ನಾಯಕನ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Comments are closed.

Social Media Auto Publish Powered By : XYZScripts.com