5 ವರ್ಷದ ಪ್ರೀತಿ ಮದುವೆಯಾದ 9 ತಿಂಗಳಿಗೆ ಅಂತ್ಯ!

ಕಳೆದ ಐದು ವರ್ಷಗಳಿಂದ ಪ್ರೀತಿಸಿ ವಿವಾಹವಾದ ದಂಪತಿಯ ಜೀವನ ಮುರಿದು ಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಪತ್ನಿಯು ಬೇಕೆಂದು ಗಂಡ ಗೋಗರೆದರೂ ಪತ್ನಿ ನನಗೆ ಪತಿ ಬೇಡವೆಂದು ತವರು ಮನೆ ಸೇರಿದ್ದಾಳೆ.  

ಅಚ್ಯುತರಾವ್ ಬಡಾವಣೆಯ ಸಚಿನ್ ಹಾಗೂ ಹೊಸಮನೆ ಬಡಾವಣೆಯ ನಿಧಿ. ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ಒಂಭತ್ತು ತಿಂಗಳ ಹಿಂದೆ ರಿಜಿಸ್ಟರ್ ಮದುವೆಯಾಗಿದ್ದರು. ಒಂಭತ್ತು ತಿಂಗಳ ಕಾಲ ಅವರ ಸಂಸಾರ ಸುಗಮವಾಗಿಯೇ ಇತ್ತು. ಆದರೆ ಇದ್ದಕ್ಕಿದ್ದಂತೆ ತವರು ಮನೆಗೆ ಬಂದ ಹೆಂಡತಿಯು ನನಗೆ ಪತಿ ಬೇಡ ಎಂದು ಹೇಳುತ್ತಿದ್ದಾಳೆ. ಇದರಿಂದ ನೊಂದ ಪತಿಯು ಪತ್ನಿಯೊಂದಿಗೆ ಒಮ್ಮೆ ಮಾತನಾಡಲು ಅವಕಾಶ ನೀಡಿ ಎಂದು ಪತ್ನಿ ತವರು ಮನೆಯೆದುರು ಗೋಗರೆಯುತ್ತಿದ್ದಾನೆ.

ಸಚಿನ್ ಹಾಗೂ ನಿಧಿ ಓದುವಾಗಲೇ ಲವ್ ಶುರುವಾಗಿತ್ತು. ಐದು ವರ್ಷಗಳ ಕಾಲ ಲವ್ ಮಾಡಿ, ಕಳೆದ ವರ್ಷ ಏಪ್ರಿಲ್‍ನಲ್ಲಿ ರಿಜಿಸ್ಟರ್ ಮದುವೆ ಆಗಿದ್ದರು. ತವರು ಮನೆಗೆ ಹೋದ ನಿಧಿ ಮತ್ತೆ ಬರುವುದಿಲ್ಲ, ನನಗೆ ಗಂಡ ಬೇಡ, ಡಿವೋರ್ಸ್ ಬೇಕು ಎನ್ನುತ್ತಿದ್ದಾಳೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿನ್, ಕಳೆದ ಒಂಭತ್ತು ತಿಂಗಳ ಹಿಂದೆ ನಾವು ಮದುವೆಯಾಗಿದ್ದೆವು. ಇದಕ್ಕೆ ನಿಧಿ ಮನೆಯವರಿಂದ ವಿರೋಧವಿತ್ತು. ಈಗ ನಿಧಿ ಗರ್ಭಿಣಿಯಾಗಿದ್ದಾಳೆ. ಇದರಿಂದ ಅವರ ತವರು ಮನೆಯವರು ದೂರವಾಣಿ ಕರೆ ಮಾಡಿ ಮನೆಗೆ ಬಾ ಎನಾದರು ಅಡುಗೆ ಮಾಡುತ್ತೇವೆ ಎಂದು ಕರೆಸಿಕೊಂಡರು. ಸಂಜೆ ಕರೆ ಮಾಡಿದ್ದಾಗ ನನ್ನನ್ನು ಬಂದು ಕರೆದುಕೊಂಡು ಹೋಗು ಎಂದು ನಿಧಿ ಹೇಳಿದ್ದಳು ಇದರಿಂದ ಕರೆದೊಯ್ಯಲು ಬಂದೆ. ಈ ವೇಳೆ ಅವರ ಅಣ್ಣ ನಿಧಿಗೆ ನೀನು ಬೇಡವಂತೆ ಎನ್ನುತ್ತಿದ್ದಾನೆ. ನಿಧಿಯೊಂದಿಗೆ ಮಾತನಾಡಲೂ ಅವಕಾಶ ನೀಡುತ್ತಿಲ್ಲ ಎಂದು ಸಚಿನ್ ಆರೋಪಿಸಿದರು.

ನನಗೆ ಹೆಂಡತಿ ಮತ್ತು ಮಗು ಬೇಕು ಎಂದು ಸಚಿನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Comments are closed.

Social Media Auto Publish Powered By : XYZScripts.com