ದಂಗಲ್ ನೂ ಸೈಡ್ ಗೆ ಹೊಡಿತು ಕಿರಿಕ್ ಪಾರ್ಟಿ!

ಇತ್ತೀಚೆಗೆ ತೆರೆ ಕಂಡಿರೋ ಕಿರಿಕ್ ಪಾರ್ಟಿ ಸಿನಿಮಾಗೆ ರಾಜ್ಯಾದ್ಯಂತ ಥಿಯೇಟರ್ ಗಳು ಮುಂಗಡವಾಗಿಯೇ ಭರ್ತಿಯಾಗಿವೆ. ನೋಟ್ ಬ್ಯಾನ್ ಬಳಿಕ ಯಶಸ್ವಿ ಕಾಣುತ್ತಿರುವ ಕನ್ನಡ ಸಿನಿಮಾ ಇದಾಗಿದೆ.

ಕಿರಿಕ್ ಪಾರ್ಟಿ ಚಿತ್ರ ವೀಕ್ಷಣೆಗೆಂದು ಕನ್ನಡ ಸಿನಿರಸಿಕರು ಈಗಾಗಲೇ ಹಲವಾರು ಥಿಯೇಟರ್ ಗಳಲ್ಲಿ 25 ಕ್ಕೂ ಅಧಿಕ ಶೋಗಳಿಗೆ ಮುಂಗಡವಾಗಿ ಟಿಕೇಟ್  ಖರೀದಿಸಿದ್ದಾರೆ.  ಮೈಸೂರಿನ ಸರಸ್ಪತಿ ಥಿಯೇಟರ್ ನಲ್ಲಿ 24 ಶೋ,  ವೀರೇಶ್ ಥಿಯೇಟರ್ ನಲ್ಲಿ 23 ಶೋ,  ಬೆಂಗಳೂರಿನ ಕಾಮಾಕ್ಷಿ ಪಾಳ್ಯದಲ್ಲಿ 28 ಶೋ, ಉಳಿದ ಇತರೆ ಸಿನಿಮಾ ಥಿಯೇಟರ್ ಗಳಲ್ಲಿ ಕನಿಷ್ಠ ಪಕ್ಷ ಮೂರು ಶೋ ಗಾದರೂ ಹೌಸ್ ಫುಲ್ ಆಗಿದೆ. ಅಲ್ಲದ ಒರಾಯಿನ್ ಐನಾಕ್ಸ್ ನಿಂದ  ಈಗಾಗಲೇ 50 ಲಕ್ಷ ಕಲೆಕ್ಷನ್ ಆಗಿದೆ ಎಂದು ತಿಳಿದು ಬಂದಿದೆ.

ಕಿರಿಕ್ ಪಾರ್ಟಿ ರಿಲೀಸ್ ಆದ ನಂತರ ದಂಗಲ್ ಗಿಂತಲೂ ಇದರ ಕ್ರೇಜ್ ಸಿನಿ ರಸಿಕರಲ್ಲಿ ಹೆಚ್ಚಾಗಿದೆ. ಕಿರಿಕ್ ಪಾರ್ಟಿಗೆ ಹೆಚ್ಚುತ್ತಿರುವ ಕ್ರೇಜ್ ನೋಡಿ ದಂಗಲ್ ದಂಗಾಗಿದೆ ಅಂತ ಗಾಧಿನಗರ ಮಾತನಾಡಿಕೊಳ್ಳುತ್ತಿದೆ. ಕನ್ನಡದಲ್ಲಿ ಯಶ್ ಅಭಿನಯದ ರಾಮಾಚಾರಿ ಸಿನಿಮಾದ ನಂತರ ಹೆಚ್ಚು ಸದ್ದು ಮಾಡುತ್ತಿರೋ ಸಿನಿಮಾ ಇದಾಗಿದೆ. ರಕ್ಷಿತ್ ಹಾಗೂ ರಿಷಬ್ ಶೆಟ್ಟಿ ಸೇರಿ ಯುವಕರಿಗೆಂದೇ ಮಾಡಿರೋ ಈ ಸಿನಿಮಾ ವರ್ಷದ ಆರಂಭದಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಹಿ ಸುದ್ದಿ ನೀಡಿದೆ.

Comments are closed.