ಪಡುಕೋಣೆ ಬಗ್ಗೆ ತಿಳಿಯಲೇ ಬೇಕಾದ ಇಂಟ್ರಸ್ಟಿಂಗ್ ವಿಷಯಗಳು!

ಗುಳಿ ಕೆನ್ನೆಯಿಂದಲೇ ದೇಶದಲ್ಲಿ ಪಡ್ಡೆ ಹುಡುಗರ ಎದೆಯಲ್ಲಿ ಸುನಾಮಿ ಎಬ್ಬಿಸಿದ್ದ ದೀಪಿಕಾ ಪಡುಕೋಣೆ ಇಂದು 31 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕರ್ನಾಟಕ ಮೂಲದವರಾಗಿದ್ದು ಉತ್ತಮ ನಟಿಯಾಗಿರೋ ಇವರ ಬಗ್ಗೆ ನಿಮಗೆ ತಿಳಿದಿರದ ಕೆಲವು ವಿಚಾರಗಳು…

ದೀಪಿಕಾರವರ ಸ್ಥಳ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪಡುಕೋಣೆ.  ಇವರ ಮಾತೃ ಭಾಷೆ ಕೊಂಕಣಿ. ಇವರು ಮೂಲತಃ ಕರ್ನಾಟಕದವರಾದರೂ ಜನಿಸಿದ್ದು ಮಾತ್ರ ಡೆನ್ಮಾರ್ಕ್‍ನ ಕೂಪನ್ಹೇಗನ್‍ನಲ್ಲಿ. ಚಿತ್ರ ರಂಗ ಪ್ರವೇಶಿಸಿದ ಇವರು ಕಾಲಿಟ್ಟ ಚೊಚ್ಚಲ ಚಿತ್ರದಲ್ಲೇ ಸೆಂಚುರಿ ಬಾರಿಸಿ, ಹದಿಹರೆಯದ ಯುವಕರ ನಿದ್ದೆಗೆಡಿಸಿದ್ದರು. ಶಾರೂಕ್ ಖಾನ್ ಜೊತೆ ಕಾಣಿಸಿಕೊಂಡ ಈ ನಟಿ ಉತ್ತಮ ನಟನೆಯೊಂದಿಗೆ ನಿರ್ದೇಶಕರು, ನಿರ್ಮಾಪಕರು, ಸಿನಿ ವಿಮರ್ಶಕರು ಮತ್ತು ನೋಡುಗರ ಮನಸ್ಸನ್ನು ಗೆದ್ದರು.  ಈ ಸಿನಿಮಾ ಉತ್ತಮ ಪ್ರದರ್ಶನ ಕಂಡು ದೀಪಿಕಾರವರಿಗೆ ಉತ್ತಮ ಹೆಸರು ತಂದುಕೊಟ್ಟಿತು.

ದೀಪಿಕಾ ಸದಾ ಕಾಲ ಸಿನಿಮಾದಲ್ಲಿ ಕಾಲ ಕಳೆಯುತ್ತಿದ್ದರೂ ಕೆಲವೊಂದು ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದಾರೆ. ಇವರಿಗೆ ಶಾಪಿಂಗ್ ಎಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಆಹಾರ ಪದಾರ್ಥಗಳನ್ನು ಕೊಳ್ಳುವುದೆಂದರೆ ಇವರಿಗೆ ತುಂಬಾ ಇಷ್ಟ. ಇವರು ಶಾಪಿಂಗ್ ಮಾಡುವಾಗಲೆಲ್ಲಾ ಟಮೆಟೋ, ಬ್ರೆಡ್, ಮತ್ತು ಮೊಟ್ಟೆಗಳನ್ನು ಖರೀದಿಸುತ್ತಾರೆ.

ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ದೀಪಿಕಾ ಪಡುಕೋಣೆ ಕೆಲವೊಂದು ದಾಖಲೆಗಳನ್ನು ನಿರ್ಮಿಸಿದ್ದಾರೆ. 13 ವರ್ಷಗಳ ಕಾಲ ಒಂದೇ ಬ್ರ್ಯಾಂಡ್ ಅಂಬಾಸಿಡರ್ ಆಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ನಟನೆ ಮಾಡಿರುವ ಆರು ಸಿನಿಮಾಗಳು ನೂರು ಕೋಟಿಗೂ ಅಧಿಕ ಹಣ ಸಂಪಾದಿಸಿದೆ. ಈ ಸಾಧನೆಯನ್ನು ಬೇರೊಬ್ಬ ಯಾವ ನಟಿಯೂ ಮಾಡಲು ಸಾಧ್ಯವಾಗಿಲ್ಲ.

ಇನ್ನೂ ದೀಪಿಕಾ ಜೀವನಕ್ಕೆ ಸಂಬಂದಿಸಿದಂತೆ ಇವರು ಒತ್ತಡವನ್ನು ನಿವಾರಿಸಲು ಚಾಕೋಲೆಟ್ ತಿನ್ನುತ್ತಾರೆ. ಇನ್ನೂ ಇವರ ಬೆನ್ನೆಲುಬಾಗಿ ಸದಾ ಕಾಲ ರಣಬೀರ್ ಸಿಂಗ್ ಇರುತ್ತಾರೆ. ಅಲ್ಲದೆ ಇಬ್ಬರೂ  ಪ್ರೇಮಿಗಳೂ ಕೂಡ ಹೌದು. ಇವರು ಏನೇ ಮಾಡಿದರೂ ಹೇಗೆ ಇದ್ದರೂ ಕನ್ನಡದ ಹುಡುಗಿ ಅನ್ನೋದು ನಮ್ಮಲ್ಲರ ಹೆಮ್ಮೆ. ಈಗ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದೀಪಿಕಾಗೆ ಕನ್ನಡಿಗರಾದ ನಾವೆಲ್ಲರೂ ಶುಭ ಹಾರೈಸೋಣ.

Comments are closed.

Social Media Auto Publish Powered By : XYZScripts.com