ಬೆಂಗಳೂರು ಪ್ರಕರಣ: ಅಕ್ಷಯ್ ಕುಮಾರ್ ಆಕ್ರೋಶ ವೀಡಿಯೊ ಸಂದೇಶ

ನೂತನ ವರ್ಷಾಚರಣೆ ವೇಳೆ ಬೆಂಗಳೂರಿನ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಯುವತಿಯರ ಮೇಲೆ ನಡೆದ ದೌರ್ಜನ್ಯಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಒಬ್ಬ ಮಗಳ ತಂದೆಯಾಗಿದ್ದು, ಸಮಾಜ ಹುಡುಗಿಯರಿಗೆ ಭದ್ರತೆ ನೀಡಲು ಸಾಧ್ಯವಾಗುತ್ತಿಲ್ಲ. ಅಂತವರು ತಾವು ಮನುಷ್ಯರು ಅಂತ ಹೇಳಿಕೊಳ್ಳಲು ಹಕ್ಕಿಲ್ಲ ಇಂತಹ ಘಟನೆಗಳು ಕಂಡರೇ ನಿಮಗೆ ಏನು ಅನ್ನಿಸುತ್ತೋ ಗೊತ್ತಿಲ್ಲ. ಆದರೆ ನನಗಂತು ಆಕ್ರೋಶ ಉಕ್ಕುತ್ತಿದೆ ಎಂದು ನಟ ಅಕ್ಷಯ್ ಕುಮಾರ್ ತಿಳಿಸಿದ್ದಾರೆ.

ಇನ್ನೂ ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆ ವೇಳೆಯಲ್ಲಿ ನಡೆದ ದೌರ್ಜನ್ಯ ರಾಷ್ಟ್ರವ್ಯಾಪಿ ಚರ್ಚೆಯಾಗುತ್ತಿದೆ. ಇಂದು  ಹುಡುಗಿಯರು ಹೊರಗಡೆ ಹೋಗುವಾಗ ಚಿಕ್ಕಪುಟ್ಟ ಉಡುಪುಗಳನ್ನು ಹಾಕುತ್ತಾರೆ. ಮಧ್ಯ ರಾತ್ರಿ ಹೊರಗಡೆ ತಿರುಗುವುದರಿಂದ ಇಂತಹ ಘಟನೆಗಳು ನಡೆಯುತ್ತವೆ ಅಂತ. ನೀವು ತಿಳಿದುಕೊಂಡಿದ್ದೀರಾ ಅದು ನಿಮ್ಮ ಮನಸ್ಥಿತಿ ಅಷ್ಟೆ ಎಂದಿದ್ದಾರೆ.

ಇವತ್ತು ಬೆಂಗಳೂರಿನಲ್ಲಿ ಯುವತಿಯರ ಮೇಲೆ ನಡೆದಿರುವುದು ಮುಂದೆ ನಿಮ್ಮ ಅಕ್ಕ-ತಂಗಿ, ಮಗಳ ಮೇಲೆ ನಡೆಯಬಹುದು. ನಮ್ಮ ನಿಮ್ಮೊಂದಿಗಿರುವವರೇ ದೌರ್ಜನ್ಯ ಎಸಗುತ್ತಿದ್ದಾರೆ. ನಾವು ಜಾಗೃತರಾಗಲು ಈಗಲು ಸಮಯವಿದೆ. ಈ ದೇಶದ ಹೆಣ್ಣು ಮಕ್ಕಳು ನಿಮಗೆ ದಿಟ್ಟ ಉತ್ತರ ನೀಡಲು ಮುಂದಾದರೇ ನಿಮ್ಮನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ  ಎಂದಿದ್ದಾರೆ.

ಹೆಣ್ಣುಮಕ್ಕಳಿಗೂ ನಾನು ಕೆಲವೊಂದು ಉಪಾಯಗಳನ್ನು ನೀಡುತ್ತೇನೆ. ನೀವು ಹುಡುಗರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ನಿಮ್ಮ ರಕ್ಷಣೆಗಾಗಿ ನೀವು ಏನು ಬೇಕಾದರೂ ಮಾಡಬಹುದು. ನಿಮ್ಮ ಮೇಲೆ ದೌರ್ಜನ್ಯ ನಡೆಸುವ ಹುಡುಗರನ್ನು ಮಣಿಸಲು ಮಾರ್ಶಲ್ ಆರ್ಟ್ಸ್ ನಲ್ಲಿ ಕೆಲ ವಿದ್ಯೆಗಳಿವೆ. ಅವುಗಳನ್ನು ಕಲಿಯಿರಿ ಆಗ ನಿಮ್ಮ ಮೇಲೆ ಯಾರು ದೌರ್ಜನ್ಯ ಮಾಡುತ್ತಾರೆ ಎಂದು ಅಕ್ಷಯ್ ಹೇಳಿದ್ದಾರೆ.

Comments are closed.