ಕಮ್ಮನಹಳ್ಳಿ ಕಾಮಾಂದರು ಪೊಲೀಸರ ಖೆಡ್ಡಾಕ್ಕೆ ಬಿದ್ದದ್ದು ಹೇಗೆ..?

ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ನಡೆದಿದ್ದ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಾಗರೀಕ ಸಮಾಜ ನಾಚಿಕೆ ಪಡುವಂತೆ ಮಾಡಿದ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು ಜನವರಿ 1 ನೇ ತಾರಿಕು ಬೆಳೆಗ್ಗೆ 02.45 ನಿಮಿಷದಲ್ಲಿ ನಡೆದ ಘಟನೆಯನ್ನು ಪ್ರಕಾಶ್ ಫ್ರಾಂಸಿಸ್ ನೀಡಿದ ಸಿಸಿಟಿ ದ್ರಾಶ್ಯಾವಳಿ ಆಧರಿಸಿ ತನಿಖೆಯನ್ನು ಆರಂಭ ಮಾಡಿದರು.

ಇನ್ನೂ ಸಿಸಿಟಿವಿ ಫೋಟೇಜ್ ನಲ್ಲಿ ಪತ್ತೆಯಾಗದ ಕೀಚಕರ ಮುಖಚಹರೆ ಮತ್ತು ಬೈಕ್ ನಂಬರ್ ಅನ್ನು ಹುಡುಕಲು ಪೊಲೀಸರು ಹರಸಾಹಸ ಪಡುತ್ತಿದ್ದರು. ನಂತರ ಇಡೀ ಏರಿಯಾದ ಪ್ರಮುಖ ಸಿಗ್ನಲ್  ಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದರು. ನಂತರ ಘಟನೆ ನಡೆದ ಅಕ್ಕಪಕ್ಕದ ಬೀದಿಗಳಲ್ಲಿ ನಿವಾಸಿಗಳು ಅಳವಡಿಸಿಕೊಂಡಿದ್ದ ಸಿಸಿಟಿವಿ ದೃಶ್ಯಾವಳಿ ವೀಕ್ಷಣೆ ಮಾಡಿದರು. ಆ ವೇಳೆಯಲ್ಲಿ ಸುಮಾರು 8ರಿಂದ 10 ಬೈಕುಗಳು ಓಡಾಟ ಸಿಸಿಟಿವಿಯಲ್ಲಿ ದಾಖಲಾಗಿತ್ತು, ಅಷ್ಟು ಬೈಕ್ ಗಳಲ್ಲಿ ಫಿಲ್ಟರ್ ಮಾಡಿ ನೋಡಿದ ಪೊಲೀಸರು ಎರಡು ಬೈಕ್ ಗಳು ಅದೇ ಏರಿಯದಲ್ಲಿ ಸುತ್ತಿಬಳಸಿ ರೌಂಡ್ ಹಾಕಿರುವ ದೃಶ್ಯ ಪತ್ತೆಯಾಗಿದೆ. ಇನ್ನೂ ಸಿಗ್ನಲ್ ಹಾಗೂ ಏರಿಯಾದ ಬೇರೆ ಬೇರೆ ಸಿಸಿಟಿವಿಗಳಲ್ಲಿ ಕಾಮುಕರ ಓಡಾಟ ಸೆರೆಯಾಗಿತ್ತು.

ನಂತರ ಚಾಣಾಕ್ಷತನದಿಂದ ಪೊಲೀಸರು ಪಾಂಡಿಚೆರಿ ರಿಜಿಸ್ಟ್ರೇಶನ್ ಆಗಿದ್ದ ಬ್ಲಾಕ್ ಹೋಂಡಾ ಆಕ್ಟೀವ ಮತ್ತೊಂದು ಕರ್ನಾಟಕ ರಿಜಿಸ್ಟ್ರೇಶನ್ ಬೈಕ್ ಎರಡು ಬೈಕ್ ಗಳ ನಂಬರ್ ಸಿಕ್ಕ ಬಳಿಕ ಮತ್ತಷ್ಟು ಕಾರ್ಯ ಪ್ರವೃತ್ತರಾದ ಪೊಲೀಸರು ಕಾಮಾಂದರು ಅಟ್ಟಹಾಸ ಮೆರೆದ ಸ್ಥಳದ ಮೊಬೈಲ್ ಟವರ್ ಲೊಕೇಶನ್ ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.

ನಂತರ ತನಿಖೆಯನ್ನು ಮುಂದುವರಿಸಿದ ಪೊಲೀಸರು ಅಂದು 2 ಗಂಟೆ ಇಂದ ನಾಲ್ಕು ಗಂಟೆಯವರಿಗೆ ಘಟನೆ ನಡೆದ ಟವರ್ ಲೊಕೇಶನಲ್ಲಿದ್ದ ನಂಬರ್ ಗಳನ್ನು  ಪತ್ತೆಮಾಡಿದರು.  ಆ ಸಮಯದಲ್ಲಿ  ಮೂರು ನಾಲ್ಕೂ  ನಂಬರ್ ಗಳಿಗೆ  ಮೆಸೇಜ್ ವಿನಿಮಯ ಹಾಗೂ ಹೊರಹೋದ (Outgoing) ಹಾಗೂ ಒಳಬಂದ (Incoming) ಕರೆ ಸ್ವೀಕರಿಸಿದ ಬಗ್ಗೆ ದಾಖಲೆ ಪಡೆದ ಪೊಲೀಸರು ಸಿಸಿಟಿಯಲ್ಲಿ ಬೈಕ್ ಗಳ ಓಡಾಟ, ಅದೇ ಸ್ಥಳದಲ್ಲಿ ಮೆಸೇಜ್ ಸ್ವೀಕರಿಸಿರುವುದು, ಕಾಲ್ ಅಟೆಂಡ್ ಮಾಡಿರುವುದರ ಬಗ್ಗೆ ಮಾಹಿತಿ ಪಡೆದರು. ನಂತರ ಕೂಡಲೇ ಎಚ್ಚೆತ್ತ ಪೊಲೀಸರು ಮೊಬೈಲ್ ನಂಬರಗಳ ವಿಳಾಸವನ್ನು ಹುಡುಕಿದರು. ನಂತರ ಪೊಲೀಸರಿಗೆ ಹುಡುಕಲು ತುಂಬಾ ಅನುಕೂಲಕರವಾಯಿತು. ಆ ಸಮಯದಲ್ಲಿ ಮೊದಲು ಚಿನ್ನು ಆಲಿಯಾಸ್ ಸೋಮ ಎಂಬಾತನು ಪೊಲೀಸರ ಭೇಟೆಗೆ ಬಲಿಯಾಗುತ್ತಾನೆ.

ತದನಂತರ ಅರ್ಧದಷ್ಟು ಖಚಿತ ಮಾಹಿತಿ ಇದ್ದರು ಅನುಮಾನದ ಮೇಲೆ ಚಿನ್ನು ಎಂಬಾತನನ್ನು ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸಿದರು.  ಆರಂಭದಲ್ಲೀ ಏನು ಗೊತ್ತಿಲ್ಲದವನಂತೆ ನಾಟಕವಾಡಿದ ಚಿನ್ನು ಪೊಲೀಸರ ಲಾಟಿ ಏಟಿಗೆ ಮಾಡಿರುವ ಸಂಪೂರ್ಣ ಘಟನೆಯನ್ನು ಬಾಯಿಬಿಟ್ಟು ಈ ಘಟನೆಗೆ ಪ್ರಮುಖ ಕಾರಣರಾದಂತಹ ಲೆನೊ,ಅಯ್ಯಪ್ಪ,ರಾಜು ಸೇರಿದಂತೆ ಇತರರ ಹೆಸರನ್ನು ಹೇಳಿದ್ದಾನೆ.

ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಚರಣೆ ಮುಂದುವರಿಸಿದ್ದಾಗ ತಮಗೇನು ಗೊತ್ತಿಲ್ಲವೆಂಬಂತೆ ನಾಟಕ ಮಾಡಿಕೊಂಡು ದೈನಂದಿನ ಕೆಲಸದಲ್ಲಿ ತೊಡಗಿದ್ದ ಸೋಮ, ಲೆನೊ, ಅಯ್ಯಪ, ರಾಜು ಎಂಬುವವರನ್ನು ಠಾಣೆಗೆ ತಂದು ಕೂರಿಸಿ ವಿಚಾರಣೆ ಮಾಡಿದ್ದಾರೆ. ನಂತರ  ತಾವು ಮಾಡಿದ ಕಾಮಚೇಷ್ಟೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

 

 

Comments are closed.