ನಾಯಕತ್ವ ತ್ಯಜಿಸಿದ ಮಹೇಂದ್ರ ಸಿಂಗ್ ದೋನಿ!

ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಪಡೆದಿದ್ದ, ಭಾರತ ಕ್ರಿಕೆಟ್ ತಂಡದ ನಾಯಕ ಎಮ್.ಎಸ್.ದೋನಿ ಏಕದಿನ ಮತ್ತು ಟಿ-20 ಕ್ರಿಕೆಟ್ ನ ನಾಯಕತ್ವವನ್ನು ಬುಧವಾರ ತ್ಯಜಿಸಿದ್ದಾರೆ.

ವಿಶ್ವ ಕಂಡ ಅತ್ಯುತ್ತಮ ನಾಯಕಲ್ಲಿ ಒಬ್ಬರಾಗಿದ್ದ ಮಹೇಂದ್ರ ಸಿಂಗ್ ದೋನಿ ದಿಢೀರ್ ನಿರ್ಧಾರ ಕೈಗೊಂಡಿದ್ದಾರೆ. ಏಕದಿನ ಮತ್ತು ಟಿ-20 ವಿಶ್ವಕಪ್, ಏಷ್ಯಾಕಪ್ ಅನ್ನು ಗೆದ್ದುಕೊಟ್ಟ  ಭಾರತದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ನಂ 1 ಸ್ಥಾನಕ್ಕೆ ತಂಡವನ್ನು ಕೊಂಡೊಯ್ದಿದ್ದರು. ಇಷ್ಟೇ ಅಲ್ಲದೆ ದೋನಿ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಎರಡು ಬಾರಿ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿದ್ದರು.

ದೋನಿ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಆ ನಂತರ ಟೆಸ್ಟ್ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದರು. ಇತ್ತೀಚೆಗೆ ಕೊಹ್ಲಿಯೂ ನಾಯಕತ್ವದಲ್ಲಿ ಯಶಸ್ಸುಗಳಿಸಿದರು. ಈ ವೇಳೆ ಹಲವು ಹಿರಿಯ ಕ್ರಿಕೆಟಿಗರು ಎಲ್ಲಾ ಆವೃತ್ತಿಗೂ ವಿರಾಟ್ ಕೊಹ್ಲಿಗೆ ನಾಯಕತ್ವ ನೀಡುವುದು ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದರು. ಆದರೂ ಈ ಬಗ್ಗೆ ದೋನಿ ಎಲ್ಲೂ ಬಹಿರಂಗ ಹೇಳಿಕೆ ನೀಡಿರಲಿಲ್ಲ. ಆದರೆ ಬುಧವಾರ ಏಕಾಏಕಿ ನಾಯಕತ್ವವನ್ನು ತ್ಯಜಿಸಿದ್ದಾರೆ. ಇನ್ನೂ ತಂಡದಲ್ಲಿ ಯಾರಿಗೂ ನಾಯಕತ್ವದ ಜವಾಬ್ದಾರಿ ನೀಡಿಲ್ಲ.

ವಿಶ್ವಕ್ಕೆ ಹೆಲಿಕ್ಯಾಪ್ಟರ್ ಶಾಟ್ ತೋರಿಸಿಕೊಟ್ಟ ದೋನಿಯವರು ಎಂದೂ ಫಾರ್ಮ್ ಕಳೆದುಕೊಂಡಿರಲಿಲ್ಲ. ತಂಡದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದರು. ಎಲ್ಲರೊಂದಿಗೂ ಪ್ರೀತಿ ಸಹನೆಯಿಂದ ವರ್ತಿಸುತ್ತಿದ್ದರು. ಅವರು ಏಕಾಏಕಿ ನಾಯಕತ್ವ ತ್ಯಜಿಸಿರುವುದು ಅವರ ಅಭಿಮಾನಿಗಳಲ್ಲಿ ನೋವು ತಂದಿದೆ.

6 thoughts on “ನಾಯಕತ್ವ ತ್ಯಜಿಸಿದ ಮಹೇಂದ್ರ ಸಿಂಗ್ ದೋನಿ!

 • October 18, 2017 at 1:38 PM
  Permalink

  Normally I do not read post on blogs, but I would like to say that this write-up very pressured me to check out and do it! Your writing taste has been amazed me. Thank you, quite nice post.|

 • October 18, 2017 at 3:21 PM
  Permalink

  I have been surfing online greater than 3 hours lately, but I by no means discovered any fascinating article like yours. It’s beautiful worth enough for me. In my view, if all site owners and bloggers made just right content as you did, the web can be a lot more helpful than ever before.|

 • October 20, 2017 at 9:14 PM
  Permalink

  Hi there, You’ve done an incredible job. I will certainly digg it and personally recommend to my friends. I am sure they’ll be benefited from this website.|

 • October 20, 2017 at 10:09 PM
  Permalink

  I always used to read paragraph in news papers but now as I am a user of internet therefore from now I am using net
  for articles or reviews, thanks to web.

 • October 20, 2017 at 11:20 PM
  Permalink

  Pretty! This has been a really wonderful post.
  Many thanks for providing these details.

 • October 25, 2017 at 9:34 AM
  Permalink

  I do not even know how I ended up right here, but I assumed
  this post used to be great. I do not know who you are however certainly you’re going to a famous blogger
  when you aren’t already. Cheers!

Comments are closed.

Social Media Auto Publish Powered By : XYZScripts.com