ಮಗಳೇ ತಂದೆಯನ್ನು ಕೊಲೆ ಮಾಡಿದ್ದೇಕೆ?

ಅತ್ಯಾಚಾರಕ್ಕೆ ಯತ್ನಿಸಿದ ತನ್ನ ತಂದೆಯನ್ನೇ ಮಗಳೊಬ್ಬಳು ಹೊಡೆದು ಸಾಯಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ಸೋಮವಾರ ನಡೆದಿದೆ. ಶಿಕ್ಷಕ ವೃತ್ತಿಯನ್ನು ಮಾಡುತ್ತಿರುವ ತಂದೆಯು ತನ್ನ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದರಿಂದ ಕೋಪಗೊಂಡ ಮಗಳು ತನ್ನ ತಂದೆಯನ್ನು ಕೋಲಿನಿಂದ ಹೊಡೆದಿದ್ದಾಳೆ. ಇದರಿಂದ ಗಾಯ ಗೊಂಡ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸೋಮ್‌ಪಾಲ್ (45) ಮಗಳನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿದ ಪಾಪಿ ತಂದೆ. ತನ್ನ 14 ವರ್ಷದ ಮಗಳನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾನೆ. ಇದರಿಂದ ಮಗಳು ತಂದೆಯನ್ನು ಹೊಡೆದು ಸಾಯಿಸಿ ದ್ದಾಳೆ. ನಂತರ ನಡೆದ ಘಟನೆಯ ಸಂಪೂರ್ಣ ವಿವರಣೆಯನ್ನು  ತನ್ನ ತಾಯಿಗೆ ತಿಳಿಸಿದ್ದಾಳೆ.  ವಿಷಯ ತಿಳಿದ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇದರಿಂದ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ.

ಮೃತ ತಂದೆ ಸೋಮಪಾಲ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂತಹ ಕೆಲವು ಘಟನೆಗಳು ದೇಶದಲ್ಲಿ ಪದೇ ಪದೇ ಸಂಭವಿಸುತ್ತಿದ್ದು, ಇದರಿಂದ ನಾಗರಿಕ ಸಮಾಜಗಳು ತಲೆ ತಗ್ಗಿಸುವಂತಹ ಸ್ಥಿತಿ ಎದುರಾಗಿದೆ.

Comments are closed.

Social Media Auto Publish Powered By : XYZScripts.com