ಹೆಂಡತಿ ಮತ್ತು ಮಕ್ಕಳಿಗೆ ಬೆಂಕಿ ಹಚ್ಚಿದ ಪಾಪಿ ಪತಿ!

ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕಾಗಿ ಪತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ರಾಯಚೂರು ಜಿಲ್ಲೆಯ ಯುರಗೇರಾ ಗ್ರಾಮದಲ್ಲಿ ನಡೆದಿದೆ. 

ಪತ್ನಿ ಮಾಧುರ್ಯ (28), ಮಕ್ಕಳಾದ ಮಾತೃ (7) ಹಾಗೂ ಮಾನಸ (4) ಕೊಲೆಯಾದ ದುರ್ದೈವಿಗಳು. ಕೌಟುಂಬಿಕ ವಿಚಾರಗಳಿಗಾಗಿ ಮನೆಯಲ್ಲಿ ದಿನನಿತ್ಯ ದಂಪತಿ ಜಗಳವಾಡುತ್ತಿದ್ದರು. ಅದರೆ ಭಾನುವಾರ ದಂಪತಿಯ ಜಗಳ ಜೋರಾಗಿದ್ದು ಇದರಿಂದ ಕೋಪಗೊಂಡ ಪತಿ ರಾಘವೇದ್ರ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಮೇಲೆ ಸೀಮೆ ಎಣ್ಣೆ ಎರಚಿ ಬೆಂಕಿ ಇಟ್ಟು ಪರಾರಿಯಾಗಿದ್ದಾನೆ. ಇದರಿಂದ ಮೂವರ ದೇಹಗಳು ಸುಟ್ಟು ಕರಕಲಾಗಿವೆ.

ಈ ಬಗ್ಗೆ ಮಾಧುರ್ಯ ತಂದೆ ಗೋಪಾಲ ಶೆಟ್ಟಿ ದೂರು ದಾಖಲಿಸಿದ್ದಾರೆ. ಮಧ್ಯಾಹ್ನ ವೇಳೆಯೇ ಘಟನೆ ನಡೆದಿದೆ. ಆದರೂ ಅಕ್ಕಪಕ್ಕದ ಜನರ ಗಮನಕ್ಕೆ ಬಾರದ ಹಿನ್ನೆಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪರಾರಿಯಾಗಿದ್ದ ಆರೋಪಿ ರಾಘವೇಂದ್ರ ಈಗ ಸ್ವತಃ ಪೊಲೀಸರಿಗೆ ಶರಣಾಗಿದ್ದಾನೆ. ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಯರಗೇರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.

Comments are closed.

Social Media Auto Publish Powered By : XYZScripts.com