ನೂತನ ವರ್ಷದಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳ!

ಹೊಸ ವರ್ಷದ ದಿನವೇ ಕೇಂದ್ರ ಸರ್ಕಾರ ವಾಹನ ಸಂಚಾರಕರಿಗೆ ಶಾಕ್ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಿದ್ದು ಭಾನುವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ.

ಪೆಟ್ರೋಲ್ ದರ ಪ್ರತಿ ಲೀಟರ್ ಗೆ 1.29 ರು ಏರಿಕೆ ಕಂಡಿದ್ದರೆ, ಡೀಸೆಲ್ ಪ್ರತಿ ಲೀಟರ್ ಗೆ 0.97 ರು ನಂತೆ ಏರಿಕೆಯಾಗಿದೆ. ನೂತನ ದರಗಳು ನೂತನ ವರ್ಷದ ಮೊದಲ ದಿನ ಭಾನುವಾರ ಮತ್ತು ಸೋಮವಾರದ ನಡುವಿನ ರಾತ್ರಿಯಲ್ಲಿಯೇ ಜಾರಿಗೆ ಬರಲಿದೆ.

ಇದಕ್ಕೂ ಮುನ್ನ ಡಿಸೆಂಬರ್ 16 ರಂದು ದರ ಪರಿಷ್ಕರಣೆಯಾಗಿತ್ತು. ಪೆಟ್ರೋಲ್ 2.21 ರು ಹಾಗೂ ಡೀಸೆಲ್ 1.79 ಪ್ರತಿ ಲೀಟರ್ ಗೆ ಏರಿಕೆ ಕಂಡಿತ್ತು. ತಿಂಗಳಿಗೆ ಎರಡು ಬಾರಿ ಏರಿಕೆ ಮಾಡಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂದನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ.

Comments are closed.

Social Media Auto Publish Powered By : XYZScripts.com