ಕನ್ನಡದ ಸೈರಾಟ್ ಗೆ ಕಲಾ ಸಾಮ್ರಾಟ್ ಇಟ್ಟ ಟೈಟಲ್ ಏನು ಗೊತ್ತಾ,,?

ಮರಾಟಿಯ ಸೂಪರ್ ಹಿಟ್ ಸಿನಿಮಾ ಸೈರಾಟ್ ಕನ್ನಡದಲ್ಲಿ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಆದರೆ ಈ ಚಿತ್ರದ ಟೈಟಲ್ ಏನು ಇಡುತ್ತಾರೆ ಎಂಬುದನ್ನು ಹಲವು ಸಿನಿ ಪ್ರಿಯರು ಕಾದು ಕುಳಿತ್ತಿದ್ದರು.

ಸೈರಾಟ್ ಚಿತ್ರ ಕನ್ನಡದಲ್ಲಿ ಮೂಡಿಬರುತ್ತಿದ್ದು, ಆ ಚಿತ್ರದ ಪ್ರೇಮಕಥೆಗೆ  ಕಲಾ ಸಾಮ್ರಾಟ್ ಎಸ್. ನಾರಾಯಣ್ ಆ್ಯಕ್ಷನ್ ಕಟ್ ಹೇಳಿದ್ದು, ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಲಿದ್ದಾರೆ.

2015 ರಲ್ಲಿ ಬಿಡುಗಡೆಯಾದಂತಹ ಸೈರಾಟ್ ಸಿನಿಮಾ ಬಾರಿ ಸದ್ದು ಮಾಡಿದ್ದು ಉತ್ತಮ ಗಳಿಕೆಯನ್ನು ಮಾಡಿದೆ. ಇನ್ನೂ ಈ ಚಿತ್ರದಲ್ಲಿ ರಿಂಕು ರಾಜಗುರು, ಆಕಾಶ್ ತೋಸರ್, ಆರ್ಬಾಜ್ ಶೇಕ್, ತಾನಾಜಿ, ಛಾಯ ಕದಂ ಮುಂತಾದವರು ಅಭಿನಯಿಸಿದ್ದು, ಇನ್ನೂ ಈ ಒಂದು ಸಿನಿಮಾಕ್ಕೆ ನಾಗರಾಜ್ ಮಂಜುಳೆ ಎಂಬುವವರು ನಿರ್ದೇಶನ ಮಾಡಿದ್ದು, ಅಜಯ್ ಅತುಲ್ ಅವರ ಸಂಗೀತಕ್ಕೆ ಪ್ರೇಕ್ಷಕ ಫಿದಾ ಆಗಿದ್ದನ್ನು ನಾವು ನೋಡಿದ್ದೇವೆ.

ಇನ್ನೂ ಕನ್ನಡದ ಮನಸು ಮಲ್ಲಿಗೆ ಸಿನಿಮಾಕ್ಕೆ ದಕ್ಷಿಣ ಭಾರತದ ಖ್ಯಾತ ಖಳನಟ ಸತ್ಯಪ್ರಕಾಶ್ ಅವರ ಪುತ್ರ ನಾಯಕನಟನಾಗಿ ಅಭಿನಯಿಸುತ್ತಿದ್ದು, ಅವರ ಹೆಸರನ್ನು ಇನ್ನೂ ಬಹಿರಂಗಗೊಳಿಸಿಲ್ಲಿ ಎಂದು ತಿಳಿದುಬಂದಿದೆ. ಇನ್ನೂ ಈ ಚಿತ್ರಕ್ಕೆ ಮರಾಟಿ ಚಿತ್ರದ ಸೈರಾಟ್ ನ ನಾಯಕಿಯಾದ ರಿಂಕು ರಾಜಗುರು ನಾಯಕಿ ನಟಿಯಾಗಿ ಅಭಿನಯಿಸುತ್ತಿದ್ದಾಳೆ. ಮೊದಲ ಬಾರಿಗೆ ಈ ಬೆಡಿಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ವಿಶೇಷವಾಗಿದೆ.

ಇನ್ನೂ ಸೈರಾಟ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವ ಕಲಾ ಸಾಮ್ರಾಟ್ ಎಸ್. ನಾರಯಣ್ ಮನಸು ಮಲ್ಲಿಗೆ ಎಂದು ಹೆಸರನ್ನು ಇಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

 

2 thoughts on “ಕನ್ನಡದ ಸೈರಾಟ್ ಗೆ ಕಲಾ ಸಾಮ್ರಾಟ್ ಇಟ್ಟ ಟೈಟಲ್ ಏನು ಗೊತ್ತಾ,,?

  • October 16, 2017 at 5:03 PM
    Permalink

    Good – I should certainly pronounce, impressed with your web site. I had no trouble navigating through all tabs as well as related information ended up being truly simple to do to access. I recently found what I hoped for before you know it at all. Quite unusual. Is likely to appreciate it for those who add forums or anything, site theme . a tones way for your customer to communicate. Nice task.

Comments are closed.