ಏಕದಿನ ಸರಣಿ ಮುಡಿಗೇರಿಸಿಕೊಂಡ ನ್ಯೂಜಿಲೆಂಡ್ !

ನಾಯಕ ಕೆನ್ ವಿಲಿಯಮ್ಸ್‌ನ್ ಹಾಗೂ  ಗಾಯದ ಸಮಸ್ಯೆಯಿಂದ ನರಳುತ್ತಿರುವ ರಾಸ್ ಟೇಲರ್ ಅವರ ಸ್ಥಾನದಲ್ಲಿ ಆಡುವ ಅವಕಾಶ ಪಡೆದಿರುವ ನೇಲ್ ಬ್ರೂಮ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್, ಪ್ರವಾಸಿ ಬಾಂಗ್ಲಾ ದೇಶ ತಂಡದ ವಿರುದ್ಧ ನೆಲ್ಸನ್ ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಎಂಟು ವಿಕೆಟ್ ಸುಲಭ ಗೆಲುವು ದಾಖಲಿಸಿದೆ.

ಮೊದಲೆರಡು ಪಂದ್ಯಗಳಲ್ಲಿ ಜಯದ ನಗೆ ಬೀರಿದ್ದ ನ್ಯೂಜಿಲೆಂಡ್, ಈ ಗೆಲುವಿನೊಂದಿಗೆ ಮೂರು ಏಕದಿನ ಕ್ರಿಕೆಟ್ ಪಂದ್ಯಗಳ ಸರಣಿಯನ್ನು 3-0 ರಿಂದ ತನ್ನದಾಗಿಸಿಕೊಂಡು ಹಿರಿಮೆ ಮೆರೆಯಿತು.

ಗೆಲ್ಲಲು ನಿಗದಿತ 50 ಓವರ್‌ಗಳಲ್ಲಿ 237 ರನ್ ಸೇರಿಸುವ ಗುರಿ ಪಡೆದ ಆತಿಥೇಯ ತಂಡ, 41.2 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ಮಾತ್ರ ಕಳೆದುಕೊಂಡು 239 ರನ್ ಸೇರಿಸಿ ಜಯ ಕಂಡಿತು.

ವಿಲಿಯಮ್ಸ್‌ನ್ ಹಾಗೂ ನೇಲ್ ಬ್ರೂಮ್ ಜೋಡಿ 179 ರನ್ ಸೇರಿಸಿ ತಂಡಕ್ಕೆ ಜಯ ಲಭಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಬ್ರೂಮ್ 97 (97 ಎಸೆತ, 12 ಬೌಂಡರಿ, 1 ಸಿಕ್ಸರ್) ಹಾಗೂ ಅಜೇಯ 95 (116,9 ಬೌಂಡರಿ, 1 ಸಿಕ್ಸರ್) ಹಾಗೂ ಜೇಮ್ಸ್ ನೇಸಮ್ ಅಜೇಯ 28 (23 ಎಸೆತ, 3 ಬೌಂಡರಿ, 1 ಸಿಕ್ಸರ್ ) ರನ್ ಮಾಡಿದರು. ಬಾಂಗ್ಲಾ ದೇಶ ಪರ ಮುಸ್ತಫಿಜುರ್ ರಹಮಾನ್ 32 ಕ್ಕೆ ಎರಡು ವಿಕೆಟ್ ಕಬಳಿಸಿದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ದೇಶ, 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 236 ರನ್ ಮಾಡಿತು. ತಮೀಮ್ ಇಕ್ಬಾಲ್ 59, ಇಮ್ರುಲ್ ಖಯಾಲ್ 44, ಹಾಗೂ ನೂರೂಲ್ ಹಸನ್ 44 ರನ್ ಮಾಡಿದರು.

ಸಂಕ್ಷಿಪ್ತ ಸ್ಕೋರು 

ಬಾಂಗ್ಲಾ ದೇಶ : 50 ಓವರ್‌ಗಳಲ್ಲಿ 9 ವಿಕೆಟ್‌ಗೆ 236

ನ್ಯೂಜಿಲೆಂಡ್: 41.2 ಓವರ್‌ಗಳಲ್ಲಿ 2 ವಿಕೆಟ್‌ಗೆ 239

7 thoughts on “ಏಕದಿನ ಸರಣಿ ಮುಡಿಗೇರಿಸಿಕೊಂಡ ನ್ಯೂಜಿಲೆಂಡ್ !

 • October 20, 2017 at 6:22 PM
  Permalink

  I will immediately grasp your rss as I can not in finding your email subscription hyperlink or e-newsletter service. Do you’ve any? Please let me know in order that I could subscribe. Thanks.|

 • October 20, 2017 at 7:08 PM
  Permalink

  This web site certainly has all of the info I wanted concerning this subject and didn’t know who to ask.

 • October 20, 2017 at 11:10 PM
  Permalink

  I don’t even know how I ended up here, but I thought this post was great.
  I don’t know who you are but definitely you are going to a famous blogger if you are not
  already 😉 Cheers!

 • October 21, 2017 at 12:10 AM
  Permalink

  Hello my family member! I wish to say that this post is
  awesome, nice written and include approximately all vital
  infos. I would like to look more posts like this .

 • October 24, 2017 at 11:17 AM
  Permalink

  I know this if off topic but I’m looking into starting my own weblog and was wondering what all is needed to get setup? I’m assuming having a blog like yours would cost a pretty penny? I’m not very internet smart so I’m not 100% sure. Any tips or advice would be greatly appreciated. Appreciate it|

 • October 24, 2017 at 2:01 PM
  Permalink

  When someone writes an piece of writing he/she keeps
  the plan of a user in his/her mind that how a user can be aware
  of it. Thus that’s why this piece of writing is amazing.
  Thanks!

Comments are closed.