ಬಿಗ್ ಬಾಸ್ ಮನೆಯಿಂದ ಶೀಥಲ್ ಹೊರಬಂದಿದ್ದೇಕೆ?.

ಶನಿವಾರ ಬಂತೆಂದರೆ ಬಿಗ್ ಬಾಸ್ ಪ್ರಿಯರಿಗೆ ಯಾರು ಈ ವಾರ ಮನೆಯಿಂದ ಹೊರಹೋಗುತ್ತಾರೆ ಎಂಬ ಕುತೂಹಲ ಮನೆ ಮಾಡಿರುತ್ತದೆ. ಈ ವಾರ ಬಿಗ್ ಬಾಸ್ ನ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರೆನಿಸಿದ್ದ ಶೀಥಲ್ ಶೆಟ್ಟಿ ಗೇಟ್ ಪಾಸ್ ಪಡೆದಿದ್ದಾರೆ.

ಬಿಗ್’ಬಾಸ್ ಮನೆಯಲ್ಲಿ ಏಳು ಮಂದಿ ಉಳಿದುಕೊಂಡಂತಾಗಿದೆ. ಶೀತಲ್ ಶೆಟ್ಟಿ ನಿರ್ಗಮನದ ಬಳಿಕ ಈಗ ಬಿಗ್ ಬಾಸ್ ಮನೆಯಲ್ಲಿ ಮೋಹನ್, ಪ್ರಥಮ್, ಕೀರ್ತಿಕುಮಾರ್, ಭುವನ್, ಶಾಲಿನಿ, ಮಾಳವಿಕಾ ಮತ್ತು ರೇಖಾ ಸ್ಪರ್ಧಾ ಕಣದಲ್ಲಿದ್ದಾರೆ.

ಕೆಲವು ದಿನಗಳ ಹಿಂದೆ ಎಲಿಮಿನೇಟ್ ಆಗಿ, ಸೀಕ್ರೇಟ್ ರೂಂ ನಲ್ಲಿ ಕಾಲ ಕಳೆದು. ಮತ್ತೆ ಬಿಗ್ ಬಾಸ್ ಮನೆಗೆ ಬಲಗಾಲಿಟ್ಟು ಬಂದ ನಿರೂಪಕಿ, ನಟಿ ಶೀತಲ್ ಶೆಟ್ಟಿ ಮತ್ತೆ ಎಲಿಮಿನೇಟ್ ಆಗುವ ಮೂಲಕ ಮನೆಯಿಂದ ಗೇಟ್ ಪಾಸ್ ಪಡೆದು, ಬಿಗ್ ಬಾಸ್ ನಲ್ಲಿನ ತಮ್ಮ ಪಯಣ ಮುಗಿಸಿದ್ದಾರೆ.

ಬಿಗ್ ಬಾಸ್ ಶೋನ ಆರಂಭದಿಂದಲೂ ಶೀಥಲ್ ನೇರ ಮಾತಿಗೆ ಹೆಸರಾಗಿದ್ದರು. ಇದಕ್ಕೆ ಕೆಲವರು ವಿರೋಧವನ್ನು ವ್ಯಕ್ತಪಡಿಸಿದ್ದರು. ಕಳೆದ ವಾರ ಸೀಕ್ರೆಟ್ ರೂಮ್ ಗೆ ತೆರಳಿದ್ದ ಶೀಥಲ್ ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಬಲಗಾಲಿಟ್ಟಿದ್ದರು. ಆದರೆ ಈ ವಾರ ವೀಕ್ಷಕರಿಂದ ಕಡಿಮೆ ಮತಗಳನ್ನು ಪಡೆದ ಕಾರಣದಿಂದ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಇಂದು ಸಂಜೆ ವಾರದ ಜೊತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ.

Comments are closed.

Social Media Auto Publish Powered By : XYZScripts.com