ಉತ್ತಮ ಆಡಳಿತ ನೀಡಿ ಇಲ್ಲ, ಅಧಿಕಾರದಿಂದ ಕೆಳಗಿಳಿಯಿರಿ- ಪೂಜಾರಿ!

ನಿಮಗೆ ಕಾಂಗ್ರೆಸ್ ಪಕ್ಷ ಅಧಿಕಾರ ಮತ್ತು ಸ್ಥಾನ ಮಾನ, ಗೌರವ ಸೇರಿದಂತೆ ಎಲ್ಲವನ್ನೂ ನೀಡಿದೆ. ಪಕ್ಷಕ್ಕೆ ಮೋಸ ಮಾಡಬೇಡಿ, ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ಸಮೀಪಿಸುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜನಾರ್ಧನ ಪೂಜಾರು ಸಿಎಂ ಸಿದ್ದರಾಮಯ್ಯಗೆ ತಾಕೀತು ಮಾಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ದನ ಪೂಜಾರಿ, ರಾಜ್ಯ ಮಾಧ್ಯಮ ಸಮೀಕ್ಷೆಯೊಂದರಲ್ಲಿ ಸಿದ್ದರಾಮಯ್ಯಗೆ ಮೂರನೇ ಸ್ಥಾನ ಇದೆ. ಮೊದಲೆರಡು ಸ್ಥಾನಗಳಲ್ಲಿ  ಬಿ.ಎಸ್‌.ಯಡಿಯೂರಪ್ಪ ಹಾಗೂ ಹೆಚ್‌.ಡಿ.ಕುಮಾರಸ್ವಾಮಿ ಇದ್ದಾರೆ. ಇದು ಸಿಎಂ ಜನಪ್ರಿಯತೆಯನ್ನು ತೋರಿಸುತ್ತದೆ. ಉತ್ತಮ ಜನಪರ ಕಾರ್ಯಗಳನ್ನು ಮಾಡುವುದಾದರೆ ಮಾಡಿ ಇಲ್ಲ ಅಧಿಕಾರ ಬಿಟ್ಟು ತೊಲಗಿ ಎಂದು ಹರಿಹಾಯ್ದಿದ್ದಾರೆ.

ಎತ್ತಿನಹೊಳೆ ಯೋಜನೆಯೇ ನಿಮ್ಮನ್ನು ನುಂಗುತ್ತಿದೆ. ಮೊದಲು ಕೋಲಾರ ಮತ್ತು ಚಿಕ್ಕಬಳ್ಳಾಪುರದ ಜನರಿಗೆ ನೀರೊದಗಿಸಿ. ನಿಮ್ಮ ಉದ್ಧಟತನ, ದುರಹಂಕಾರ ರಾಜಕೀಯವಾಗಿ ನಿಮ್ಮನ್ನು ಕೊಲ್ಲುತ್ತಿದೆ. ನಿಮ್ಮ ಒಳಿತಿಗೆ, ಅಧಿಕಾರದಿಂದ ಕೆಳಗಿಳಿಯಿರಿ ಎಂದಿದ್ದಾರೆ.

ನಂಜನಗೂಡು ಕ್ಷೇತ್ರದ ಬಗ್ಗೆ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿ, ನಿಮ್ಮ ಬೈ ಎಲೆಕ್ಷನ್‌ನಲ್ಲಿ ನಾನು ಮಂಗಳೂರಿನಿಂದ ಪ್ರಚಾರಕ್ಕೆ ಬಂದಿದ್ದೆ. ಆಗ ನಿಮ್ಮನ್ನು ಬ್ರಾಹ್ಮಣರು, ಲಿಂಗಾಯತರು ಮನೆಗೆ ಬರಲು ಬಿಟ್ಟಿರಲಿಲ್ಲ. ನಾನಿದ್ದ ಕಾರಣಕ್ಕೆ ಆಗ ಎಲ್ಲವನ್ನೂ ಸರಿಪಡಿಸಿದೆ. 300 ಓಟಿನಲ್ಲಿ ಗೆದ್ದಿದ್ದೀರಿ, ಇಲ್ಲದಿದ್ದರೆ ರಾಜಕೀಯವಾಗಿ ಸಮಾಧಿ ಆಗುತ್ತಿದ್ದಿರಿ ಎಂದು ಗುಡುಗಿದ್ದಾರೆ.

Comments are closed.