ಹೊಸ ವರ್ಷದ ಸ್ವಾಗತಕ್ಕೆ ಸಜ್ಜುಗೊಳ್ಳುತ್ತಿರುವ ಗಡ್ಡೆ!

ವಿದೇಶಿ ಪ್ರವಾಸಿಗರ ಅಚ್ಚು ಮೆಚ್ಚಿನ ತಾಣ ಮಿನಿ ಗೋವಾ ಎಂದೇ ಪ್ರಸಿದ್ಧವಾದ ಕೊಪ್ಪಳ ಜಿಲ್ಲೆಯ ವಿರುಪಾಪೂರ ಗಡ್ಡೆಯಲ್ಲಿ 2017 ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಸಕಲ ಸಿದ್ದತೆ ನಡೆಯುತ್ತಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ವಿರುಪಾಪೂರ ಗಡ್ಡೆಯಲ್ಲಿರೋ ರೆಸಾರ್ಟ್ ಗಳು ನ್ಯೂ ಇಯರ್ ಪಾರ್ಟಿಗೆ ರೆಡಿಯಾಗ್ತಿವೆ. ವಿದೇಶಿಗರೇ ತುಂಬಿ ತುಳಕೋ ಈ ವಿರಪಾಪುರ ಗಡ್ಡೆಗೆ ಕಳೆದ ತಿಂಗಳು ನೋಟ್ ಬ್ಯಾನ್ ಬಿಸಿ ತಟ್ಟಿತ್ತು. ಇದರಿಂದ ಈ ವರ್ಷದ ನ್ಯೂ ಇಯರ್ ಗೆ ಕಡಿಮೆ ಪ್ರವಾಸಿಗರು ಬರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಮಾಲಿಕರ ನಿರೀಕ್ಷೆಗೆ ಮೀರಿ  ಹೊಸ ವರ್ಷದ  ಆಚರಣೆಗೆ ಪ್ರವಾಸಿಗರು ಬಂದಿದ್ದಾರೆ.

ಗಡ್ಡೆಯ ಬಹುತೇಕ ರೆಸಾರ್ಟ್ ಗಳು ಫುಲ್ ಆಗಿವೆ. ವಿದೇಶಿಗರೇ ರೆಸಾರ್ಟ್ ಗಳನ್ನು ನ್ಯೂಯರ್ ಪಾರ್ಟಿಗೆ ಸಖತ್ ಟ್ರೆಂಡಿಯಾಗಿ ಸಿಂಗಾರ ಮಾಡುತ್ತಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ವಿರಪಾಪೂರ ಗಡ್ಡಗೆ ನ್ಯೂ ಇಯರ್ ಸೆಲಬ್ರೇಷನ್ ಮಾಡಲು ಸಾವಿರಾರು ವಿದೇಶಿಗರು ಬಂದಿದ್ದಾರೆ. ಇಂದು ಮಧ್ಯರಾತ್ರಿ 12 ಘಂಟೆಗೆ ವಿದೇಶಿಗರು ಕುಣಿದು ಕುಪ್ಪಳಿಸಿ ಪಟಾಕಿ ಸಿಡಿಸಿ 2017 ರನ್ನು ಬರಮಾಡಿಕೊಳ್ಳಲಿದ್ದಾರೆ.

ಬಗೆ ಬಗೆ ಯ ಬಲೂನ್ ಕಟ್ಟಿ ಹೊಸ ವರ್ಷಾಚರಣೆಗೆ ಸನ್ನದ್ದರಾಗಿದ್ದಾರೆ.ಇನ್ನು ಹಂಪಿಗೆ ಬಂದಂತಹ ಕೆಲ ವಿದೇಶಿ ಹಾಗೂ ನಮ್ಮ ರಾಜ್ಯದ  ಪ್ರವಾಸಿಗರು ಬೋಟ್ ಮೂಲಕ ವಿರುಪಾಪೂರ ಗಡ್ಡೆಗೆ ನ್ಯೂ ಇಯರ್ ಆಚರಿಸಿಲು ಬರುತ್ತಿದ್ದಾರೆ. ಸದ್ಯ ವಿರುಪಾಪೂರ ಗಡ್ಡೆ ವಿದೇಶಿಗರಿಂದ ತುಂಬಿ ತುಳಕುತ್ತಿದ್ದು ಎಲ್ಲೆಂದರಲ್ಲಿ ಕಲರ್ ಕಲರ್ ಮುಖಗಳು ಕಾಣುತ್ತಿವೆ. ಕಳೆದ ಒಂದು ತಿಂಗಳಿನಿಂದ ಕಂಗೆಟ್ಟಿದ್ದ ರೆಸಾರ್ಟ್ ಮಾಲಿಕರ ಮೊಗದಲ್ಲಿ ನಗು ಮೂಡಿದೆ. ಇನ್ನು ಹೊಸ ವರ್ಷಾಚರಣೆ ಹಿನ್ನಲೆ ವಿರುಪಾಪೂರ ಗಡ್ಡೆ ಸಖತ್ ಕಂಗೊಳಿಸುತ್ತಿದದ್ದು ಹೊಸ ವರ್ಷಾಚರಣೆ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಇಂದು ಸಂಜೆಯಿಂದ ವಿರುಪಾಪೂರ ಗಡ್ಡೆಯಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸಲಾಗುತ್ತೆ.

Comments are closed.