ಬೆಂಗಳೂರಲ್ಲಿ ಹೊಸ ವರ್ಷಕ್ಕೆ ಬಿಗಿ ಭದ್ರತೆ

ಹೊಸ ವರ್ಷದ ಆಚರಣೆರಗೆ ಕ್ಷಣಗಣನೆ ಆರಂಭವಾಗಿದ್ದು, ಬೆಂಗಳೂರಿನ ಜನತೆ ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೂ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡದಂತೆ ನಿರ್ಬಂಧ ಹೇರಲಾಗಿದೆ ಎಂದು ತಿಳಿದುಬಂದಿದೆ.
ಇನ್ನೂ ಹೊಸ ವರ್ಷ  ಎಂದಾಕ್ಷಣ ಎಂಜಿ ರೋಡ್, ಬ್ರಿಗೇಡ್, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ಸ್ ಹಾಗೂ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಯುವಕ ಹಾಗೂ ಯುವತಿಯರ ಮೋಜು ಮಸ್ತಿ ಹೆಚ್ಚಾಗಿದ್ದು,ಈ ರಸ್ತೆಯಲ್ಲಿ ಇಂದು ಸಂಜೆ 8 ಗಂಟೆಯಿಂದಲೇ ವಾಹನ ಪಾರ್ಕಿಂಗ್ ನಿಷೇಧ ಮಾಡಲಾಗಿದೆ.
 
ಬೆಂಗಳೂರಿನ ಜನತೆಗೆ ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ನಗರದಾದ್ಯಂತ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇನ್ನೂ ಮುನ್ನಚ್ಚೆರಿಕೆ ಕ್ರಮವಾಗಿ 16ಸಾವಿರ  ಪೊಲೀಸ್ ಸಿಬ್ಬಂದಿ, ವಾಚ್ ಟವರ್ಸ್, ಸಿಸಿಟಿವಿ ಕಣ್ಗಾವಲು ಅಳವಡಿಸಲಾಗಿದ್ದು, ರಾತ್ರಿ ವೇಳೆ ಮಫ್ತಿಯಲ್ಲೂ ಪೊಲೀಸರು ಕಾರ್ಯ ನಿರ್ವಹಿಸಲಿದ್ದಾರೆ. ಇನ್ನೂ  ಹೆಣ್ಣುಮಕ್ಕಳಿಗಾಗಿ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಿದ್ದು, ಗರುಡಾ ಫೋರ್ಸ್ ಸಹ ಕರ್ತವ್ಯ ನಿರ್ವಹಿಸಲಿದೆ ಎಂದು ತಿಳಿದುಬಂದಿದೆ.
ಮಧ್ಯ ಪ್ರಿಯರಿಗೆ ರಾತ್ರಿ 2 ಗಂಟೆವರೆಗೂ ಬಾರ್ ಅಂಡ್ ರೆಸ್ಟೋರೆಂಟ್ ಗಳು ವ್ಯಾಪಾರ ಮಾಡಲು ಪೊಲೀಸ್ ಇಲಾಖೆ ಅವಕಾಶ ನೀಡಿದ್ದು, ಕುಡಿದು ವಾಹನ ಚಲಾಹಿಸುವವರಿಗೆ ದಂಡ ಹಾಕಲಾಗುವುದು. ಜೊತೆಗೆ ಯಾವೂದೇ ಕಾರಣಕ್ಕೂ ಪ್ಲೈ ಓವರ್ ಮೇಲೆ ಸಂಚಾರ ಮಾಡದಂತೆ ಆದೇಶ ಹೊರಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಮೇಘರಿಕ್ ಹೇಳಿದ್ದಾರೆ.

Comments are closed.