ಹೈಕೋರ್ಟ್ ನಲ್ಲಿ ‘ಕಿರಿಕ್ ಪಾರ್ಟಿ’ ರಿಲೀಸ್

ಕಿರಿಕ್ ಪಾರ್ಟಿ ರಿಲೀಸ್ ಗೆ ರೆಡಿಯಾಗಿರುವಾಗಲೇ ವಿವಾದಕ್ಕೆ ಸಿಲುಕಿಕೊಂಡಿತ್ತು. ಶಾಂತಿ ಕ್ರಾಂತಿ ಚಿತ್ರದ ಹಾಡನ್ನ ಬಳಸಿಕೊಂಡಿರುವ ಬಗ್ಗೆ ಲಹರಿ ಸಂಸ್ಥೆಯ ಮಾಲೀಕ ವೇಲು ಆರೋಪ ಮಾಡಿದ್ದರು. ಇದರೊಂದಿಗೆ ನ್ಯಾಯಾಲಯದಲ್ಲಿ ರಿಲೀಸ್ ಗೆ ಸ್ಟೇ ತಂದಿದ್ದರು.  ಅದಕ್ಕೆ ಈಗ ಹೈಕೋರ್ಟ್ ತಡೆ ನೀಡಿದ್ದು, ಚಿತ್ರ ಬಿಡುಗಡೆಗೆ ಅನುಮತಿ ಕೊಟ್ಟಿದೆ.
ಹಾಡುಗಳಿಂದ ಹಾಗು ಟ್ರೇಲರ್‍ನಿಂದ ಕಿಕ್ ಕೊಟ್ಟಿದ್ದ ಚಿತ್ರ ಕೆಲವು ದಿನಗಳ ಹಿಂದೆ ವಿವಾದಕ್ಕೆ ಒಳಗಾಗಿತ್ತು. ಇದೊಂದು ಕಾಲೇಜ್ ಲವ್ ಸ್ಟೋರಿಯಾಗಿದ್ದರಿಂದ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗು ನಾದಬ್ರಹ್ಮ ಹಂಸಲೇಖ ಅವರಿಗಾಗಿ 90ರ ದಶಕದ ಬಂದ ಹಾಡುಗಳನ್ನ ಹೋಲುವ ಸಾಂಗ್ ಅನ್ನ ಇವರಿಗೆ ಅರ್ಪಿಸಲಾಗಿತ್ತು. ಆದರೆ ರಿಲೀಸ್‍ಗೆ ಹತ್ತಿರವಿರುವಾಗಲೇ ಈ ಹಾಡನ್ನ ಕದ್ದಿರುವುದಾಗಿ ಲಹರಿ ವೇಲು ಕೋರ್ಟ್ ಮೆಟ್ಟಿಲೇರಿದ್ದರು.

 

ಈ ಕಾರಣಕ್ಕೆ ಚಿತ್ರ ಬಿಡುಗಡೆಯಾಗುತ್ತಾ ಅನ್ನುವ ಅನುಮಾನ ಪ್ರೇಕ್ಷಕರನ್ನ ಕಾಡಿತ್ತು. ಹೀಗಾಗಿ ಆಧೀನ ನ್ಯಾಯಾಲಯದ ಆದೇಶವನ್ನ ಪ್ರಶ್ನಿಸಿ ಚಿತ್ರತಂಡ ಹೈಕೋರ್ಟ್ ಮೆಟ್ಟೆಲೇರಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್, ಕಿರಿಕ್ ಪಾರ್ಟಿ ಚಿತ್ರತಂಡಕ್ಕೆ ಆ ಹಾಡನ್ನ ಬಳಸದೆ ಸಿನಿಮಾ ರಿಲೀಸ್ ಮಾಡಲು ಅನುಮತಿ ಕೊಟ್ಟಿದೆ.  ಇದರೊಂದಿಗೆ ಜನವರಿ ಎರಡರೊಳಗೆ ಕೋರ್ಟ್‍ಗೆ 10ಲಕ್ಷ ಠೇವಣಿ ಇಡುವಂತೆ ಕಿರಿಕ್ ಪಾರ್ಟಿ ನಿರ್ಮಾಪಕರಿಗೆ ಆದೇಶವನ್ನೂ ನೀಡಿದೆ. ಹೀಗಾಗಿ ಡಿಸೆಂಬರ್ 30ಕ್ಕೆ ಎಂದಿನಂತೆ ಚಿತ್ರ ಬಿಡುಗಡೆಯಾಗಲಿದೆ.

 

Comments are closed.