ಬೆಂಗಳೂರಿನಲ್ಲಿ ಹಲವೆಡೆ ಎಸಿಬಿ ದಾಳಿ

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ  ಎಸಿಬಿ ಅಧಿಕಾರಿಗಳು  ದಿಡೀರ್ ದಾಳಿ ಮಾಡಿದ್ದು, ದಾಳಿ ವೇಳೆ ಸಿಕ್ಕಂತಹ ಮಹತ್ವದ ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನೂ ಈ ದಾಳಿಗೆ ಸಂಬಂಧಿಸಿದಂತೆ ಕೈಗಾರಿಕಾಭಿವೃದ್ದಿ ಇಲಾಖೆಯ ಜಂಟಿ ನಿರ್ದೇಶಕ  ನಾಗರಾಜು ಹಾಗೂ ಬಿಬಿಎಂಪಿ ಎಕ್ಸಿಕ್ಯೂಟೀವ್ ಇಂಜಿನಿಯರ್ ಮುದ್ದರಾಜು ಮತ್ತು ಗ್ರಾಮಾಂತರ ವಿಭಾಗದ ಭೂದಾಖಲೆಗಳ ನಿರ್ದೇಶಕ ಪ್ರಕಾಶ್ ಎಂಬುವವರ ಮನೆ ಹಾಗೂ ಕಚೇರಿಗಳ ಮೇಲೆ ಎಸಿಬಿ ತಂಡ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಇನ್ನೂ ದಾಳಿ ವೇಳೆ ಪ್ರಮುಖ ಅಧಿಕಾರಿಗಳ ಮನೆ ಹಾಗೂ ಕಚೇರಿಗಳಲ್ಲಿ ಸಿಕ್ಕಂತಹ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು. ಪರಿಶೀಲನೆಯನ್ನು ಮುಂದುವರೆಸಿದ್ದಾರೆ ಎಂದು  ಮೂಲಗಳಿಂದ ತಿಳಿದುಬಂದಿದೆ.

ಇತ್ತೀಚಿಗೆ ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ಬಲೆ ಬೀಸುತ್ತಿದ್ದು, ಹಲವಾರು ಅಧಿಕಾರಿಗಳು ಕಪ್ಪುಹಣ ಹಾಗೂ ಭ್ರಷ್ಟಚಾರದ ಆರೋಪವನ್ನು ಎದುರಿಸುತ್ತಿದ್ದಾರೆ.

Comments are closed.