ಕಿರಿಕ್ ಪಾರ್ಟಿ ರಿಲೀಸ್‍ಗೆ ಸ್ಟೇ ಕಿರಿಕ್!

ಈ ವಾರ ತೆರೆಕಾಣಲು ಸಿದ್ಧತೆ ನಡೆಸಿದ್ದ ರಕ್ಷಿತ್  ಅಭಿನಯದ ಕಿರಿಕ್ ಪಾರ್ಟಿ ಸಿನಿಮಾ ತೆರೆಕಾಣದಂತೆ ಲಹರಿ ವೇಲುರವರು ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ.

ಕಿರಿಕ್ ಪಾರ್ಟಿ ಸಿನಿಮಾಗೆ ಶಾಂತಿ ಕ್ರಾಂತಿ ಚಿತ್ರದ ಟ್ಯೂನ್ ಬಳಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಯಾರ ಅನುಮತಿಯೂ ಕೇಳಿಲ್ಲ ಎಂದು ಲಹರಿ ವಾಸು ಕೋರ್ಟ್ ಗೆ ಅರ್ಜಿ ಹಾಕಿ ಸ್ಟೇ ತಂದಿದ್ದಾರೆ. ಈ ಚಿತ್ರದಲ್ಲಿ ಒಂದು ಹಾಡಿಗೆ ಶಾಂತಿ ಕ್ರಾಂತಿ ಚಿತ್ರದ ಮ್ಯೂಸಿಕ್ ಬಳಕೆ ಮಾಡಲಾಗಿದೆ. ಚಿತ್ರ ಬಿಡುಗಡೆ ಮಾಡುವುದಾದರೆ ಆ ಹಾಡನ್ನು ತೆಗೆದು ಚಿತ್ರ ಬಿಡುಗಡೆ ಮಾಡಲಿ ಎಂದು ತಿಳಿಸಿದ್ದಾರೆ.

ರಿಷಭ್ ಶೆಟ್ಟಿ ನಿರ್ದೇಶನ, ರಕ್ಷಿತ್ ನಟನೆಯ ಮೂಲಕ ಮೂಡಿಬಂದ  ಕಿರಿಕ್ ಪಾರ್ಟಿ ಸಿನಿಮಾ ಈ ವಾರ ತೆರೆಕಾಣಲು ಸಿದ್ಧತೆ ನಡೆದಿತ್ತು. ಆದರೆ ಚಿತ್ರದಲ್ಲಿ ಒಂದು ಹಾಡಿಗೆ ರವಿಚಂದ್ರನ್ ಅಭಿನಯದ ಶಾಂತಿ ಕ್ರಾಂತಿ ಸಿನಿಮಾದ ಮಧ್ಯರಾತ್ರಿಲಿ ಸಾಂಗ್ ನ ಮ್ಯೂಸಿಕ್ ಅನ್ನು ಅನುಮತಿ ಇಲ್ಲದೆ ಬಳಸಿರುವ ಕಾರಣ ಚಿತ್ರವನ್ನು ಬಿಡುಗಡೆ ಮಾಡದಂತೆ ಲಹರಿ ವೇಣು ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಹೇ ಹೂ ಆರ್ ಯು ಹಾಡಿಗೆ ಮಧ್ಯರಾತ್ರೀಲಿ ಟ್ಯೂನ್ ಬಳಕೆ ಮಾಡಲಾಗಿದೆ.

Comments are closed.