100ರೂ. ಡ್ರಾ ಮಾಡಲು ಹೋದವಳ ಜನ್ ಧನ್ ಖಾತೆಯಲ್ಲಿತ್ತು 100 ಕೋಟಿ

ಇದನ್ನ ಅದೃಷ್ಟವೂ, ಅಚ್ಚರಿಯೋ. ಆದ್ರೆ ಪೀಕಲಾಟ ತಂದಿಡ್ಡಿದ್ದಂತು ಸುಳ್ಳಲ್ಲ. ಎಟಿಎಂ ನಿಂದ ಕೇವಲ ನೂರು ರೂಪಾಯಿ ಡ್ರಾ ಮಾಡಲು ಹೋದ ಆ ಮಹಿಳೆಗೆ ತನ್ನ ಜನ್ ಧನ್ ಖಾತೆಯ ಬ್ಯಾಲೆನ್ಸ್ ನೋಡಿ ತಲೆ ತಿರುಗೋದೊಂದೆ ಬಾಕಿ. ರಾತ್ರೋ, ರಾತ್ರಿಯಲ್ಲಿ ಆಕೆ ಆಗರ್ಭ ಶ್ರೀಮಂತಳಾಗಿಬಿಟ್ಟಿದ್ದಳು. ಇದೊಂದು ಬಯಸದೆ ಬಂದ ಭಾಗ್ಯದ ಬೊಂಬಾಟ್ ಸಂಗತಿ.

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಸೋಮವಾರ ಮೀರತ್ ನ ಸ್ಟೇಟ್ ಬ್ಯಾಂಕ್ ನ ಜನ್ ಧನ್ ಖಾತೆಯಿಂದ ಕೇವಲ ನೂರು ರೂಪಾಯಿ ತೆಗೆಯಲು ಹೋದ ಮಹಿಳೆಯೊಬ್ಬರಿಗೆ ಭಾರೀ ಶಾಕ್ ಕಾದಿತ್ತು. ಆ ಮಹಿಳೆ ತಮ್ಮ ಮನೆಯ ಬಳಿಯೇ ಇದ್ದ ಐಸಿಐಸಿಐ ಬ್ಯಾಂಕ್ ಎಟಿಎಂನಿಂದ ನೂರು ರೂಪಾಯಿ ಡ್ರಾ ಮಾಡಿದ್ದಾರೆ. ಹಣವೇನೋ ಕೈಗೆ ಸಿಕ್ಕಿದೆ. ಆದ್ರೆ ಹಣ ತೆಗೆದ ನಂತರ ಬಂದ ವಿಥ್ ಡ್ರಾ ಸ್ಲಿಪ್ ನೋಡಿದ ಆಕೆಗೆ ಒಂದು ಕ್ಷಣ ಎದೆಬಡಿತವೇ ನಿಂತು ಹೋಯ್ತು. ಕಾರಣ ಆಕೆಯ ಅಕೌಂಟ್ ನಲ್ಲಿದ್ದದ್ದು ಬರೋಬ್ಬರಿ ರೂ. 99,99,99,394. ಅಂದ್ರೆ ಒಂದು ಅರ್ಥದಲ್ಲಿ ಸರಿಸುಮಾರು 100 ಕೋಟಿ ರೂಪಾಯಿ.

ಒಮ್ಮಿಂದೊಮ್ಮೆಲೆ ಇಷ್ಟೊಂದು ಹಣ ಖಾತೆಯಲ್ಲಿರುವದನ್ನ ಕಂಡ ಆಕೆ ಕಂಗಾಲಾಗಿ ತನ್ನ ಹಿಂದಿನ ವ್ಯಕ್ತಿಯನ್ನ ಬ್ಯಾಲೆನ್ಸ್ ನೋಡಿ ಹೇಳುವದಕ್ಕೆ ಸೂಚಿಸಿದ್ದಾಳೆ. ಆಗಲೂ ಅದೇ ಉತ್ತರ. ನಂತರ ಹತ್ತಿರದ ೆರಡ್ಮೂರು ಎಟಿಎಂಗೆ ಹೋಗಿ ಬ್ಯಾಲೆನ್ಸ್ ಚೆಕ್ ಮಾಡಿದಾಗಲೂ ಮತ್ತದೇ ಮೊತ್ತ ಕಂಡು ಬಂದಿದೆ. ಎನೋ ಎಡವಟ್ಟಾಗಿದೆ ಅಂತ ಖಾತ್ರಯಾದ ಆಕೆ ಕಕ್ಕಾಬಿಕ್ಕಿಯಾಗಿ ವಿಷಯವನ್ನ ತಾನು ಖಾತೆ ಹೊಂದಿರುವ ಎಸ್ ಬಿಐನ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾಳೆ.  ಆದ್ರೆ ನಿರ್ಲಕ್ಷವೋ ಅಥವಾ ಉದ್ದೇಶಪೂರ್ವಕವೋ ಬ್ಯಾಂಕ್ ನ ಅಧಿಕಾರಿಗಳು ಆಕೆಯಮಾತಿಗೆ ಕಿವಿಗೊಟ್ಟಿಲ್ಲ. ಬದಲಾಗಿ ಎರಡ್ಮೂರು ದಿನ ತಿರುಗಾಡಿದ್ರು ದೂರು ದಾಖಲಿಸಿಕೊಳ್ಳದೆ ಬ್ಯಾಂಕ್ ಗೆ ಅಲೆದಾಡಿಸಿದ್ದಾರೆ.

ಬ್ಯಾಂಕ್ ನವರ ವರ್ತನೆಗೆ ಬೇಸತ್ತ ಆಕೆ ತನ್ನ ದೂರನ್ನ ಇ-ಮೇಲ್ ಮುಖಾಂತರ ನೇರವಾಗಿ ಪ್ರಧಾನ ಮಂತ್ರಿಗಳ ಗಮನಕ್ಕೆ ತಂದಿದ್ದಾಳೆ. ಜೊತೆಗೆ ಬ್ಯಾಂಕ್ ನ ಅಧಿಕಾರಿಗಳ ವರ್ತನೆಯ ಬಗ್ಗೆಯೂ ತಿಳಿಸಿದ್ದಾಳೆ. ತನ್ನ ಖಾತೆಗೆ ಹಣ ಜಮೆ ಮಾಡುವ ಮಿತಿ ಕೇವಲ 50 ಸಾವಿರವಿದ್ದಾಗಲೂ ಇಷ್ಟೊಂದು ಹಣ ಜಮೆಯಾಗಿದ್ದು ಹೇಗೆಂದು ತನಿಖೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾಳೆ. ದುಡ್ಡು ಇಲ್ಲದಿದ್ದರು ಕಷ್ಟ, ಹೀಗೆ ರಪ್ ಅಂತ ಬಂದು ಬಿದ್ರು ಕಷ್ಟ. ಹೇಳದೆ, ಕೇಳದೆ ನೂರಾರು ಕೋಟಿ ಜಮೆಯಾದ್ರು ಅದೆಂಥಹ ಸಂಕಷ್ಟ ತಂದೊಡ್ಡುತ್ತೆ ನೋಡಿ.

2 thoughts on “100ರೂ. ಡ್ರಾ ಮಾಡಲು ಹೋದವಳ ಜನ್ ಧನ್ ಖಾತೆಯಲ್ಲಿತ್ತು 100 ಕೋಟಿ

  • October 20, 2017 at 7:36 PM
    Permalink

    Have actually been taking little over a month.

Comments are closed.

Social Media Auto Publish Powered By : XYZScripts.com