ಕುವೆಂಪು ಜನ್ಮ ದಿನಾಚರಣೆಗೆ ನಮ್ಮ ನಮನ!

ಕುವೆಂಪುರವರು ಎಂದೂ ಸಂಸಾರ ಜೀವನವನ್ನು ತೆಗಳಿಲ್ಲ.
“ಜಗದೀಶ್ವರನೆ ವಿಶ್ವ ಸಂಸಾರಿಯಾಗಿರಲು
ಸಂಸಾರ ಪಾಶವೆಂದನ ಬೇಡಯ್ಯ
ಹುಟ್ಟುಹಾಕಲು ನಿನಗೆ ಬಾರದಿರೆ ಕೂಡದಿರೆ,
ಬರಿದೆ ದೋಣಿಯನು ಶಪಿಸಬೇಡೈ”
ಅವರ ಪ್ರಕಾರ ಶರಣರಂತೆ, ದೇವನೊಲುಮಗೆ ದಾಂಪತ್ಯ ಅತ್ಯಂತ ಮುಖ್ಯ. “ಸತಿಪತಿಗಳೊಂದಾದ ಭಕ್ತಿ ದೇವನಗರ್ಪಿತವು” ಎನ್ನವಂತೆ ಅಂದರೆ ಸಂಸಾರ ಎಂಬ ಸಾಗರದಲ್ಲಿ ದೋಣಿ ದಡ ಮುಟ್ಟಲು, ಅಂಬಿಗ ಹರಿಗೋಲಿನಂತೆ ರಥವೆಂಬ ಪಯಣದಿ  ಎರಡೂ ಚಕ್ರ ಮುಖ್ಯ ಎಂಬಂತೆ,ಸಂಸಾರ ಎಂಬುದು ಆತ್ಮಸಾಧನೆಯ ಮಾರ್ಗ  ಕುವೆಂಪುರವರಿಗೆ ಹೆಣ್ಣು ದೇವತೆಯಾಗಿ, ಜನ್ಮದಾತೆ ತಾಯಿಯಾಗಿ,ಪ್ರೇಮದ ಸಾಕಾರ ಮೂರ್ತಿ. ಪ್ರೀತಿಯ  ಸಂಕೇತವಾಗಿದ್ದಾಳೆ.
   
 “ಸತಿಯ ಧ್ಯಾನ ತಪಸ್ಸುಗಳೇ ಪತಿಯ ರಕ್ಷೆ”ಎಂಬ ಮಹಾನ್ ಭಾವ ಹೊಂದಿದ್ದರು.ಇದಕ್ಕೆ ಮೂಲತಃ ಕಾರಣ ಕುವೆಂಪುರವರು ರಾಮಕೃಷ್ಣರ ಪ್ರಭಾವದ ಕರುಣೆಯನ್ನೇ ತಮ್ಮ ಮೇಲಿರಿಸಿಕೊಂಡ ರಸ ಋಷಿ.
ತಮ್ಮ ಪತ್ನಿ ಹೇಮಾವತಿಯನ್ನು ಇನ್ನಿಲ್ಲದ ಪ್ರೀತಿಯಿಂದ, ಒಲುಮೆಯಿಂದ ದೃಶ್ಯ ಕಾವ್ಯವಾಗಿ,ಪ್ರಣಯ ನಿವೇದನೆಯಾಗಿ, ತಮ್ಮೆಲ್ಲ ಶಕ್ತಿ, ಆದಿಶಕ್ತಿ,  ಚುಂಬಕ  ಶಕ್ತಿಯಂತೆ ಚಿತ್ರಿಸಿದ್ದಾರೆ.
           “ನೀನು ಬಳಿ ಇಲ್ಲದಿರೆ, ಓನಲ್ಲೆ
            ಹೇಮಾಕ್ಷಿ, ಜಗವೆಲ್ಲ ಜಡವೆಂಬ
            ಬೇಸರದ ಬೀಡು.”
            “ಹೇಮಾಂಗಿನಿ, ಹೇಮಸತಿ
            ಮಮಜೀವನ ಮಧುರತಿ
            ಬಾಲೆ, ಉಲಿವ ನಲಿವ ಬರಲಿ ವಿಸ್ಮೃತಿಯ
            ರಸಮೃತಿ ಕೇಲಾದಲಿ ತ್ರೈಭುವನ ರಸತರಂಗದಿ”
 ಹೀಗೆ-ಹೀಗೆ ಪತ್ನಿಯನ್ನು ರಸಗಂಗೆಯಾಗಿ ವರ್ಣಿಸುತ್ತಾ, ತಮ್ಮ ಜನುಬದ ಅನನ್ಯ ಚಿಲುಮೆ, ತನ್ನೆಲ್ಲಾ ಕವಿ ಹೃದಯಕೆ ಅವಳೊಂದು ಶಕ್ತಿ ಎನ್ನುವ ತೆರದಲಿ ಅತ್ಯಂತ  ಸು-ಮನನಿಸಿನ ತೃಪ್ತಿಯಲ್ಲಿ ಕವಿ ಹೃದಯ ಹೆಣ್ಣಿಗೆ ನೀಡುವ ಔನ್ನತ್ಯದಲ್ಲಿ ತಮ್ಮನ್ನು ತಾವು ಮರೆಯುವಷ್ಟು ವರ್ಣಿಸಿದ್ದಾರೆ.  ಅವರ ಪ್ರಕಾರ ಸತಿ, ಆಕೆ ಸತಿಯಲ್ಲ, ಕಣ್ಣು ಕೋರೈಸುವ ಮಿಂಚಿನಂತಲ್ಲ, ಧ್ರುವತಾರೆಯಂತೆ.
‘ನೀ ದೇವತಾ ಶಕ್ತಿ ಹೇಮಾ ಸತಿಯೆ, ನೀನೆ ದೇವತೆ ಏನಗೆ’ ಕವಿಯ ಜೀವನಕೆ ಜೀವನಾ, ಸಂಜೀವನಾ, ಏನೆಲ್ಲಾ ಸಾಧನೆ ಮಾಡಿದರೂ, ಅಹಂಭಾವ ತೊರೆದು ತಮ್ಮನ್ನು ತಾವು  ಯಾರು  ಗುರಿ ತಿಸುವ ಪರಿ ಅತ್ಯಂತ ಅನನ್ಯ.
‘ನಾನು, ನಾ-ನು, ನಾ…..ನು ಹೇಮಿಗಂಡ’ ಅವಳ ಗಂಡನಾಗಿದ್ದರಿಂದ ಅವರಿಗೂ ಸ್ವರ್ಗ ಬಾಗಿಲು ತೆರೆಯಿತಂತೆ.
 ಕುವೆಂಪುರ ರಾಮಾಯಣ ದರ್ಶನಂ ಮಹಾಕಾವ್ಯದ ಕೇಂದ್ರ ಚಿಂತನೆ ಚೆಲುವು ಒಲವು, ಗೆಲುವು.
“ಒಲವು ಬಳಿಯಿದೆ ಚೆಲುವು
 ಬೇಟಯಂ ಕೊನರಿಸುವುದತ್ತಿ?”
 ತಮ್ಮ & ತಮ್ಮ ಸತಿಯ ಗಂಟು ಜನ್ಮ ಜನ್ಮಾಂತರದ ನಂಟೆಂಬುದು ಅವರ ನಿಲುವು ಸತಿ ಬಳಿಯಿಲ್ಲದಿದ್ದಾಗ
 ’ಜಗವೆಲ್ಲ ಜಡೆ ಬಂಡೆ,
ಬೇಸರದ ಬೀಡು’
‘ನೋವಿನ ಹೆಡೆ ಹಾವಿಗೆ ಒಲುಮೆಯೊಂದೆ ಮಂತ್ರ’
‘ನೀನು ಮಾವನ ಮಗಳೆ, ಗುರುಕರುಣಿಯಿತ್ತ ಕೃಪ’
 ನೀ ದೇವತಾಶಕ್ತಿ ಎಂದವರು ನುತಿಸುತ್ತಾರೆ.
 ಅಷ್ಟೇ ಅಲ್ಲ ಕುವೆಂಪುರವರು ದಾಂಪತ್ಯದಲ್ಲಿ ಸತಿ-ಪತಿಗಳು ಸಮಾನರೆಂಬುದು ಎಲ್ಲದರಲ್ಲೂ ಎಂಬುದನ್ನು ತೋರಿಸುತ್ತಾರೆ. ಪಾತಿವೃತ್ಯವೆಂಬ ಮೌಲ್ಯ ಸ್ತ್ರೀಯರಿಗಷ್ಟೇ ಅಲ್ಲ. ಪುರುಷರಿಗೂ ಅಗತ್ಯ ಎಂಬುದನ್ನು ತೋರಿಸುತ್ತಾರೆ ಅವರ ಪ್ರಕಾರ ಪಾತಿವೃತ್ಯದಿಂದ ಸ್ತ್ರೀ ಶ್ರೀಮತಿಯಾದರೆ, ಸತೀವೃತ್ಯದಿಂದ ಪುರುಷ ಶ್ರೀ ಪತಿಯಾಗಬೇಕು. ತಮ್ಮ ಮಹಾಕಾವ್ಯದಲ್ಲಿ ಆದರ್ಶ ಪುರುಷ ರಾಮ ದಾಂಪತ್ಯ ನಿಷ್ಠೆ ಹೊಸ ವಾಖ್ಯಾನ ಬರೆದಿದ್ದಾರೆ. ಅಂದರೆ ರಾಮ ಸೀತಿಯೊಂದಿಗೆ ಅಗ್ನಿ ಪ್ರವೇಶ ಮಾಡಿ ಬರುತ್ತಾನೆ.
  ಹೀಗೆ ಸ್ತ್ರೀ-ಪುರುಷ ಸಮಾನತೆಯನ್ನು ತಮ್ಮ ಕಾವ್ಯದಲ್ಲಿ ಕವಿಯೊಬ್ಬ ಕವಿಯಾಗಿ ಪತಿಯಾಗಿ, ಪ್ರೇಮಿಯಾಗಿ ಎಲ್ಲಕ್ಕ ಮೀಗಿಲಾಗಿ, ಸ್ತ್ರೀಗೆ ಗೌರವ ನೀಡುವ ಪುಣ್ಯ ಪುರುಷನಾಗಿ ಕಾಣುವ ಕುವೆಂಪುರವರ ಜನ್ಮದಿನದ ನಿಮಿತ್ಯ ನಾನೊಬ್ಬ ಸ್ತ್ರೀಯಾಗಿ ಅವರಿಗಿದೊಂದು ನಮನ.
  ತಮ್ಮ & ತಮ್ಮ ಸತಿಯ ಗಂಟು ಜನ್ಮ ಜನ್ಮಾಂತರದ ನಂಟೆಂಬುದು ಅವರ ನಿಲುವು ಸತಿ ಬಳಿಯಿಲ್ಲದಿದ್ದಾಗ
’ಜಗವೆಲ್ಲ ಜಡೆ ಬಂಡೆ,
ಬೇಸರದ ಬೀಡು’
‘ನೋವಿನ ಹೆಡೆ ಹಾವಿಗೆ ಒಲುಮೆಯೊಂದೆ ಮಂತ್ರ’
‘ನೀನು ಮಾವನ ಮಗಳೆ, ಗುರುಕರುಣಿಯಿತ್ತ ಕೃಪ’
 ನೀ ದೇವತಾಶಕ್ತಿ ಎಂದವರು ನುತಿಸುತ್ತಾರೆ.

ಡಾ.ಭಾಗ್ಯಜ್ಯೋತಿ ಕೋಟಿಮಠ

ಮುಖ್ಯ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಶಿರೂರು

ತಾ. ನವಲಗುಂದ

ಜಿ.ಧಾರವಾಡ

Comments are closed.

Social Media Auto Publish Powered By : XYZScripts.com