ಪೊಲೀಸರ ಸಮವಸ್ತ್ರ ಬದಲಾವಣೆಗೆ ಸರ್ಕಾರದ ಸಿದ್ಧತೆ!

ಬ್ರಿಟೀಷರ ಕಾಲದಿಂದಲೂ ಭಾರತದಲ್ಲಿ ಜಾರಿಯಲ್ಲಿದ್ದ ಪೊಲೀಸರ ಖಾಕಿ ಸಮವಸ್ತ್ರವನ್ನು ರದ್ದುಗೊಳಿಸಿ ನೂತನ ಸಮವಸ್ತ್ರವನ್ನು ಪೂರೈಸಲು ಸರ್ಕಾರ ಚಿಂತನೆ ನಡೆದಿದೆ. ಇದರಿಂದ ಪೊಲೀಸರು ಮತ್ತು ಅರೆಕಾಲಿಕ ಸಿಬ್ಬಂದಿಗಳಿಗೆ ಎಲ್ಲಾ ಕಾಲಕ್ಕೂ ಅನುಕೂಲವಾಗುವ ಸಮವಸ್ತ್ರಗಳನ್ನು ನೀಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.

ಸರ್ಕಾರ ನೂತನ ಸಮವಸ್ತ್ರದ ಸಿದ್ಧತೆ ನಡೆಸಿದ್ದು ನೂತನ ಸಮವಸ್ತ್ರವು ಆಧುನಿಕ ವಿನ್ಯಾಸದೊಂದಿಗೆ ಹೊಸ ಬಣ್ಣ ಮತ್ತು ಹೊಸ ವಿನ್ಯಾಸ ಯೋಜನೆಯಡಿ ನೋಡುವುದಕ್ಕೂ ಆಕರ್ಷಕವಾಗಿ ಕಾಣುವ ಪರಿಸರ ಸ್ನೇಹಿ ಸಮವಸ್ತ್ರವನ್ನು ನೀಡಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರಿಗೆ ಹೊಸ ಸಮವಸ್ತ್ರ ವಿನ್ಯಾಸಗೊಳಿಸುವ ಕುರಿತಂತೆ ಪೊಲೀಸ್ ಸಂಶೋಧನಾ ಮತ್ತು ಅಭಿವೃದ್ಧಿ ಮಂಡಳಿ (ಬಿಪಿಆರ್‌ಡಿ)ಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ. ಬಿಪಿಆರ್‌ಡಿ ಪರವಾಗಿ ಅಹಮದಾಬಾದ್‌ನ ರಾಷ್ಟ್ರೀಯ ವಿನ್ಯಾಸ ಸಂಸ್ಥೆ ಹೊಸ ಸಮವಸ್ತ್ರದ ಐದು ಮಾದರಿಗಳನ್ನು ನೀಡಲಿದೆ. ಇದರಲ್ಲಿ ಒಂದನ್ನು ಅಂತಿಮಗೊಳಿಸಿ ಪೊಲೀಸರಿಗೆ ಸರಬರಾಜು ಮಾಡಲಾಗುತ್ತದೆ.
ಗಡಿ ಭದ್ರತೆ ಕರ್ತವ್ಯ ನಿರ್ವಹಿಸುವ ಸೇನೆಯ ಸಶಸ್ತ್ರ ಸೀಮಾ ಬಲಕ್ಕೆ 9000 ರೈಫಲ್‌ಗಳು ಮತ್ತು ಗುಂಡು ನಿರೋಧಕ ವಾಹನಗಳನ್ನು ಮಂಜೂರು ಮಾಡಲಾಗಿದೆ. 34 ಶಸ್ತ್ರಾಸ್ತ್ರ ಭರಿತ ವಾಹನಗಳು ಮತ್ತು 763 ಗಸ್ತು ಬೈಕ್‌’ಗಳು ಮಂಜೂರಾಗಿವೆ. ಮಂಜೂರಾದ ವಾಹನಗಳ ಪೈಕಿ 12 ಗುಂಡು ನಿರೋಧಕ ವಾಹನಗಳು, 15 ಲಘು ಶಸ್ತ್ರಾಸ್ತ್ರ ಭರಿತ ವಾಹನಗಳು, ಏಳು ನೆಲಬಾಂಬ್ ನಿರೋಧಕ ವಾಹನಗಳು ಸೇರಿದಂತೆ, 42 ನಾಲ್ಕು ಚಕ್ರಗಳ ಗಸ್ತು ವಾಹನಗಳನ್ನು ಮಂಜೂರು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Comments are closed.

Social Media Auto Publish Powered By : XYZScripts.com