ಪತ್ನಿ ವಸ್ತ್ರ ಕುರಿತ ಟೀಕೆಗೆ ಕ್ರಿಕೆಟಿಗ ಶಮಿ ಕಿಡಿ!

ಪತ್ನಿ ವಸ್ತ್ರಕ್ಕೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡಿದ್ದ ಟೀಕಾಕಾರರನ್ನು ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮದ್ ಶಮಿ ಪತ್ನಿಯೊಂದಿಗಿರುವ ಫೋಟೋವೊಂದನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದರು. ಈ ಫೋಟೊದಲ್ಲಿ ಶಮಿರವರ ಪತ್ನಿ ಬುರ್ಖಾ ಧರಿಸಿರಲಿಲ್ಲ. ಇದರಿಂದ ಕೆಲವು ಸಾಂಪ್ರದಾಯವಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಶಮಿ ಇದು ನನ್ನ ಜೀವನವಾಗಿದ್ದು ಏನು ಮಾಡಿದರೆ ಸರಿ, ಏನು ಮಾಡಿದರೆ ತಪ್ಪು ಎಂಬ ಅರಿವು ನನಗೂ ಇದೆ. ಟೀಕಾಕಾರರು ಮೊದಲು ತಾವು ಒಳ್ಳೆಯವರೆಂಬುದನ್ನು ಮೊದಲು ತಮ್ಮ ಅಂತರಂಗಕ್ಕೆ ಹೇಳಿಕೊಳ್ಳಿ ಎಂದು ಚಾಟಿ ಬೀಸಿದ್ದಾರೆ.

ಶಮಿ ಅವರು ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದು, ಮುಸ್ಲಿಂ ಹೆಣ್ಣು ಮಕ್ಕಳು ಮೈ ತುಂಬಾ ಬಟ್ಟೆಯನ್ನು ತೊಡಬೇಕು ಹಾಗೂ ಸಾರ್ವಜನಿಕವಾಗಿ ಅರೆಬರೆ ತೊಟ್ಟು ತೋರಿಸಿಕೊಳ್ಳಬಾರದೆಂದು ಕೆಲ ಸಂಪ್ರದಾಯವಾದಿಗಳು ಟೀಕೆಗಳನ್ನು ಜಾಲತಾಣದಲ್ಲಿ ವ್ಯಕ್ತಪಡಿಸಿದ್ದರು.

ಇನ್ನೂ ಶಮಿರವರ ಬೆಂಬಲಕ್ಕೆ ಮತ್ತೊಬ್ಬ ಕ್ರಿಕೆಟಿಗ ಮೊಹಮದ್ ಕೈಫ್ ಬಂದಿದ್ದು ಟೀಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಚರ್ಚೆಗೆ ಸಾಕಷ್ಟು ವಿಷಯಗಳಿವೆ ಅವುಗಳಾವನ್ನಾದರೂ ಚರ್ಚೆ ಮಾಡಿ, ಇಂತಹ ಚರ್ಚೆಗಳು ನಾಚಿಕೆಗೇಡು ಎಂದಿದ್ದಾರೆ.

Comments are closed.