ಪದ್ಮಾವತಿ ಸಿನಿಮಾ ಸೆಟ್ನಲ್ಲಿ ದುರಂತ: ಓರ್ವ ಸಾವು

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹುನಿರೀಕ್ಷಿತ ಬಾಲಿವುಡ್ ಸಿನಿಮಾ ಪದ್ಮಾವತಿ. ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್ ಮುಖ್ಯಭೂಮಿಯಲ್ಲಿರೋ ಪದ್ಮಾವತಿ ಸಿನಿಮಾ ಸೆಟ್ಟಿನಲ್ಲಿ ದುರಂತವೊಂದು ನಡೆದಿದೆ. ಈ ಐತಿಹಾಸಿಕ ಚಿತ್ರದ ಸೆಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಆಯತಪ್ಪಿ ಬಿದ್ದು ಕೊನೆಯುಸಿರೆಳೆದಿದ್ದಾನೆ.

ಮುಖೇಶ್ ದಾಕಿಯಾ ಎಂಬ ಪೇಂಟರ್ ಫಿಲ್ಮ್ ಸಿಟಿಯಲ್ಲಿ ಪದ್ಮಾವತಿ ಚಿತ್ರಕ್ಕೋಸ್ಕರ ಹಾಕಿದ್ದ ಸೆಟ್‍ನಲ್ಲಿ ಕೆಲಸ ಮಾಡುತ್ತಿದ್ದ. ಸೆಟ್‍ಗೆ ಅಂತಿಮ ಸ್ಪರ್ಶ ನೀಡುತ್ತಿದ್ದ ವೇಳೆ ಪೇಂಟ್ ಮಾಡುತ್ತಿದ್ದ ಮುಖೇಶ್ ಕೆಲ ಅಡಿಗಳ ಎತ್ತರದಿಂದ ಬಿದ್ದಿದ್ದಾನೆ. ಕೂಡಲೇ ಆತನನ್ನ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಚಿತ್ರತಂಡ ಸರಿಯಾದ ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳದೇ ಇದ್ದಿದ್ದೇ ಈ ದುರಂತ ಕಾರಣ ಅನ್ನಲಾಗ್ತಿದೆ. ಸದ್ಯ ಸ್ಥಳೀಯ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಬಾಜಿರಾವ್ ಮಸ್ತಾನಿ ನಂತರ ಸಂಜಯ್ ಲೀಲಾ ಬನ್ಸಾಲಿ ಪದ್ಮಾವತಿ ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಚಿತ್ತೂರಿನ ರಾಣಿ ಪದ್ಮಾವತಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾಳೆ. ರಣ್ವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಕೂಡ ಮುಖ್ಯ ಪಾತ್ರಗಳಲ್ಲಿ ಅಭಿನಯಿಸ್ತಿದ್ದು ಮುಂದಿನ ವರ್ಷ ಚಿತ್ರ ತೆರೆಗೆ ಬರಲಿದೆ.

Comments are closed.

Social Media Auto Publish Powered By : XYZScripts.com