ಅಮಾನತಾದ ಶಾಸಕರು ತುಂಬಾ ದೊಡ್ಡವರು!

ರಾಜ್ಯ ಸಭೆಯಲ್ಲಿ ಅಡ್ಡ ಮತದಾನ ಮಾಡಿ ಪಕ್ಷದಿಂದ ಅಮಾನತಾಗಿರುವ ಜೆಡಿಎಸ್ ನ ಭಿನ್ನ ಮತೀಯ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಿನ್ನ ಮತೀಯ ಶಾಸಕರು ತುಂಬಾ ದೊಡ್ಡವರು ಅವರು ನಮ್ಮ ಪಕ್ಷಕ್ಕೆ ಬೇಡ ಎಂದಿದ್ದಾರೆ.

ಶನಿವಾರ ಮಂಡ್ಯದಲ್ಲಿ ಕೊಲೆಯಾಗಿದ್ದ ಜೆಡಿಎಸ್ ಕಾರ್ಯಕರ್ತರ ಮನೆಗೆ ಭೇಟಿ ನೀಡಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿ, ಭಿನ್ನ ಮತೀಯ ಶಾಸಕರು ತುಂಬಾ ದೊಡ್ಡವರು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ, ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುವುದಾಗಿ ನನ್ನ ಮುಖಕ್ಕೆ ಹೊಡೆದಂತೆ ಹೇಳಿದ್ದರು. ಹಾಗೆಯೇ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಅಧಿಕಾರಕ್ಕೆ ತಂದರೆ ಇವರನ್ನು ನಂಬಿ ಜನರಿಗೆ ನೀಡಿರುವ ಭರವಸೆಯನ್ನು ಈಡೇರಿಸಲು ಆಗುವುದಿಲ್ಲ. ಹಣಕ್ಕಾಗಿ ಅಡ್ಡಮತದಾನ ಮಾಡಿದ್ದಾರೆ ಹಣ ನೀಡುವವರ ಹತ್ತಿರವೇ ಅವರು ಇರಲಿ ನಮ್ಮ ಪಕ್ಷಕ್ಕೆ ಬೇಡ ಎಂದರು.

ಮಂಡ್ಯದ ಮಳವಳ್ಳಿಯ ಹಲಗೂರಿನಲ್ಲಿ  ಕೊಲೆಯಾದ ಜೆಡಿಎಸ್ ಕಾರ್ಯಕರ್ತ ಕೇಬಲ್ ಕುಮಾರ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಕೊಲೆಗೆ ಸಂಬಂಧಿಸಿದಂತೆ ಯಾರ ಮೇಲೂ  ಆರೋಪ ಕೇಳಿ ಬಂದಿಲ್ಲ. ಕೊಲೆ ಮಾಡಿದ ಹಂತಕರನ್ನು ಶೀಘ್ರವೇ ಬಂಧಿಸಬೇಕು ಎಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.

Comments are closed.

Social Media Auto Publish Powered By : XYZScripts.com